Srinath: ಪ್ರಣಯರಾಜ ಶ್ರೀನಾಥ್ ಅವರ ಜೀವನದಲ್ಲಿ ನಡೆದಿರುವ ಅನಾಹುತಗಳು ಒಂದಲ್ಲ ಎರಡಲ್ಲ. ನೀವೇ ನೋಡಿ‌.

Srinath Kannada Actor ಪ್ರಣಯರಾಜ ಶ್ರೀನಾಥ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಎಲ್ಲರೂ ಮೆಚ್ಚುವಂತಹ ಕೆಲವೇ ಕೆಲವು ನಟರಲ್ಲಿ ಶ್ರೀನಾಥ್(Sreenath) ಕೂಡ ಒಬ್ಬರು. ಅವರ ತಲೆಯ ಮುನಿನ ಜೀವನ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಆದರೆ ಕರೆಯ ಹಿಂದಿನ ನಿಜ ಜೀವನದಲ್ಲಿ ಅವರು ಪಟ್ಟಂತಹ ಪಾಡನ್ನು ನಿಜಕ್ಕೂ ಕೂಡ ಇಂದಿನ ಲೇಖನಿಯಲ್ಲಿ ತಿಳಿಯುವ ಮೂಲಕ ಪ್ರತಿಯೊಬ್ಬರೂ ಕೂಡ ಕಣ್ಣೀರು ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾರಾಯಣಸ್ವಾಮಿ ಆಗಿದ್ದ ಅವರು ಚಿಕ್ಕವಯಸ್ಸಿನಿಂದಲೇ ಸಿನಿಮಾದ ಕುರಿತಂತೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು.

ನಟನಾಗುವ ಆಸೆಯನ್ನು ಹೊತ್ತು ಬೆಂಗಳೂರಿಗೆ ಬಂದು ಸಿನಿಮಾಟೋಗ್ರಾಫಿ ಹಾಗೂ ರಂಗಭೂಮಿಯನ್ನು ಕಲಿಯುತ್ತಾರೆ. ನಂತರ ಅವರ ಅಣ್ಣ ಆಗಿರುವ ಸಿಆರ್ ಸಿಂಹ ಅವರ ಮಾರ್ಗದರ್ಶನದಲ್ಲಿ ಚಿತ್ರರಂಗದ ವಿಚಾರವಾಗಿ ಕಲಿತು ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಷ್ಟ ಪಡುತ್ತಾರೆ ಆದರೆ ಹೇಳಿಕೊಳ್ಳುವಂತಹ ಅವಕಾಶ ಸಿಗುವುದಿಲ್ಲ. ಕೊನೆಗೂ ಮಧುರ ಮಿಲನ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ಎಂಟ್ರಿ ನೀಡಿ ಕನ್ನಡ ಚಿತ್ರರಂಗದಲ್ಲಿ ಪ್ರಣಯರಾಜ ಶ್ರೀನಾಥ್ ಎನ್ನುವ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಶುಭ ಮಂಗಳ ಎನ್ನುವ ಸಿನಿಮಾ ಶ್ರೀನಾಥ್ ಅವರ ಸಿನಿಮಾ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸೂಪರ್ ಸ್ಟಾರ್ ಆಗಿ ಕಾಣಿಸುತ್ತಾರೆ ಅದಕ್ಕೆ ಒಂದು ಲೆಕ್ಕದಲ್ಲಿ ಅವರ ಗುರುಗಳು ಆಗಿರುವಂತಹ ಪುಟ್ಟಣ್ಣ ಕಣಗಾಲ್ ಕೂಡ ಕಾರಣವಾಗಿರುತ್ತಾರೆ. ಇದನ್ನು ಅವರೇ ಸ್ವತಹ ಹೇಳುತ್ತಾರೆ.

Srinath with puttanna kanagal

ಇನ್ನು ನಟಿ ಮಂಜುಳ ಅವರ ಜೊತೆಗೆ ಇವರ ಕಾಂಬಿನೇಷನ್ ಸೂಪರ್ಹಿಟ್ ಆಗಿದ್ದು ಇಬ್ಬರ ಕಾಂಬಿನೇಷನ್ ನಲ್ಲಿ ಒಟ್ಟಾರೆಯಾಗಿ 35ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿವೆ. ಸಿನಿಮಾದ ನಂತರ ಧಾರವಾಹಿ ರಾಜಕೀಯ ಜನರಿಗೆ ಸಹಾಯ ಮಾಡುವಂತಹ ದಿವ್ಯ ಫೌಂಡೇಶನ್ ಮೂಲಕವೂ ಕೂಡ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಶ್ರೀನಾಥ್ ಅವರು ಮಾಡಿದ್ದಾರೆ. ಇನ್ನು ಇವರ ಜೀವನದಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ. ಶ್ರೀನಾಥ್ ಅವರ ಮಗಳ ಮದುವೆಯ ಹಿಂದಿನ ದಿನದಂದು ಕಳ್ಳರು ಅವರ ಮನೆಯಲ್ಲಿರುವಂತಹ ಎಲ್ಲಾ ಒಡವೆ ಆಭರಣ ನಗದು ಹಣವನ್ನು ಕದ್ದುಕೊಂಡು ಹೋಗುತ್ತಾರೆ. ತಮ್ಮ ಜೀವನದಲ್ಲಿ ಉಳಿತಾಯ ಮಾಡಿ ಇಟ್ಟುಕೊಂಡಿದ್ದ ಎಲ್ಲಾ ಗಳಿಕೆಯನ್ನು ಕೂಡ ಬಹುತೇಕ ಕಳ್ಳರು ಕದ್ದೊಯ್ಯುತ್ತಾರೆ. ಇದು ನಟ ಶ್ರೀನಾಥ್ ಅವರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.

ಈ ಸಂದರ್ಭದಲ್ಲಿ ಎಲ್ಲಾ ಕಡೆ ಸಾಲ ಮಾಡಿ ಮಗಳ ಮದುವೆಯನ್ನು ಪೂರೈಸುತ್ತಾರೆ. ಹೀರೋ ಆಗಿದ್ದ ಶ್ರೀನಾಥ್ ರವರು ಜೀರೋ ಆದ ಸಮಯವದು. ಎಲ್ಲವನ್ನು ಕಳೆದುಕೊಂಡಿದ್ದ ಶ್ರೀನಾಥ್ ಅವರು ಸಿಕ್ಕಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ಅತ್ಯಂತ ವೇಗವಾಗಿ ಪೋಷಕ ಪಾತ್ರದ ನಟನಾಗಿ ಬದಲಾಗಿ ಬಿಡುತ್ತಾರೆ. ಹಂತ ಹಂತವಾಗಿ ಇಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಸಾಲವನ್ನು ತೀರಿಸುತ್ತಾರೆ. ಅವರ ಮಗನನ್ನು ಕೂಡ ಹೀರೋ ಮಾಡುವಂತಹ ಕನಸು ನುಚ್ಚುನೂರಾಗುತ್ತದೆ. ಈ ಸಾಲ ತೀರಿಸುವ ಜವಾಬ್ದಾರಿಯನ್ನು ಅವರನ್ನು ಹೀರೋ ಆಗುವುದಕ್ಕೆ ಬಿಡುವುದಿಲ್ಲ ಅಪ್ಪನ ಜೊತೆಗೆ ತಾವು ಕೂಡ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಇದೇ ರೀತಿ ಶ್ರೀನಾಥ್(Srinath) ಅವರ ಜೀವನದಲ್ಲಿ ಬಂದಂತಹ ಒಂದು ತಿರುವು ಅವರ ಜೀವನವನ್ನು ಬದಲಾಯಿಸಿ ಬಿಡುತ್ತದೆ ಆದರೆ ಇದು ಎಷ್ಟೋ ಜನರಿಗೆ ತಿಳಿದಿಲ್ಲ.

Leave a Comment

error: Content is protected !!