ಬಂಧನ ಭೀತಿ ಎದುರಿಸುತ್ತಿದ್ದಾರೆ ಕಿಸ್ ನಟಿ ಶ್ರೀ ಲೀಲಾ ಅವರ ತಾಯಿ! ಮಾಡಿರೋ ಅಪರಾಧ ಆದರೂ ಏನು ಗೊತ್ತಾ? ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ನಮ್ಮ ಕನ್ನಡ ಹುಡುಗಿಯರೇ ಯುವ ಉದಯವನ್ನು ನಟಿಯರಾಗಿ ಕಾಲಿಡುತ್ತಿದ್ದಾರೆ. ಮೊದಲು ನಮ್ಮ ಸಿನಿಮಾಗಳಿಗಾಗಿ ನಟಿಯರನ್ನು ಬಾಲಿವುಡ್ ನಿಂದ ಹೆಚ್ಚಾಗಿ ಕರೆತರಲಾಗುತ್ತಿತ್ತು. ಆದರೆ ಈಗ ಆ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ನಮ್ಮ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿಯಾಗಿರುವ ನಟಿ ಶ್ರೀ ಲೀಲಾ ಅವರ ಕುರಿತಂತೆ. ಶ್ರೀ ಲೀಲಾ ಕನ್ನಡದಲ್ಲಿ ಈಗಾಗಲೇ ಬೆರಳೆಣಿಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಅದಾಗಲೇ ತೆಲುಗು ಚಿತ್ರರಂಗಕ್ಕೆ ಕೂಡ ಈಗ ಅವರು ಕಾಲಿಟ್ಟಿದ್ದು ಮುಂದಿನ ದಿನಗಳಲ್ಲಿ ಟಾಲಿವುಡ್ ನಲ್ಲಿ ಕೂಡ ದೊಡ್ಡ ನಟಿಯಾಗಿ ಬೆಳೆದು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಕನ್ನಡದಲ್ಲಿ ಕಿಸ್ ಭರಾಟೆ ಸಿನಿಮಾದಲ್ಲಿ ನಟಿಸಿರುವ ಶ್ರೀ ಲೀಲಾ ತೆಲುಗಿನಲ್ಲಿ ಕೂಡ ಈಗಾಗಲೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿಗಳ ಪ್ರಕಾರ ನಟಿ ಶ್ರೀಲೀಲ ಅವರು ಅಲ್ಲು ಅರ್ಜುನ್ ಅವರ ತಂದೆ ನಡೆಸುತ್ತಿರುವ ಗೀತಾ ಆರ್ಟ್ಸ್ ನ ಮುಂದಿನ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಆಯ್ಕೆಯಾಗಿದ್ದಾರೆ ಎಂಬುದಾಗಿ ಕೂಡ ಸುದ್ದಿ ಇದೆ. ಇದರ ನಡುವೆ ಅವರ ತಾಯಿ ಆಗಿರುವ ವೈದ್ಯೆ ಸ್ವರ್ಣ ಲತಾ ಅವರನ್ನು ಪೊಲೀಸರು ಬಂಧಿಸುವುದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಖ್ಯಾತ ಅಲಯನ್ಸ್ ಯುನಿವರ್ಸಿಟಿಯನ್ನು ಹೊರದಬ್ಬಲ್ಪಟ್ಟ ಮಾಜಿ ಕುಲಪತಿ ಆಗಿರುವ ಮಧುಕರ್ ಅಂಗೂರ್ ಅವರೊಂದಿಗೆ ಸೇರಿ ಸ್ವರ್ಣ ಲತಾ ಅವರು ಖ್ಯಾತ ರಾಜಕಾರಣಿ ಒಬ್ಬರಿಗೆ ನೂರಾರು ಕೋಟಿ ರೂಪಾಯಿ ಡೀಲ್ ಗೆ ಮಾರಾಟ ಮಾಡುವ ಹುನ್ನಾರವನ್ನು ಮಾಡಿದ್ದರು. ಇದಕ್ಕಾಗಿ ಇತ್ತೀಚಿಗಷ್ಟೇ ಅಡ್ಮಿನ್ ಬ್ಲಾಕ್ ನಲ್ಲಿ ಬಂದು ಗುಂಡಾಗಳನ್ನು ಕರೆದು ಹೆದರಿಸುವ ಕೆಲಸವನ್ನು ಕೂಡ ಮಾಡಿದ್ದರು. ಇದಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಬಂಧನ ಭೀತಿ ಬರುತ್ತಿದ್ದಂತೆ ಸ್ವರ್ಣ ಲತಾ ತಲೆಮರಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವುವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

By admin

Leave a Reply

Your email address will not be published.