Sreeleela: ತೆಲುಗಿನಲ್ಲಿಯೇ ಸೆಟಲ್ ಆಗಿರುವ ಕನ್ನಡದ ಮೂಲದ ನಟಿ ಶ್ರೀ ಲೀಲಾ ಈಗ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Kannada Actress ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ನಟಿಸಿ ನಂತರ ಪರಭಾಷೆಗಳಲ್ಲಿ ಹೋಗಿ ನಟಿಸುತ್ತಿರುವ ಹಲವಾರು ನಟಿಯರು ನಮಗೆ ಕಾಣುವುದಕ್ಕೆ ಸಿಗಬಹುದು ಅವರಲ್ಲಿ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಶ್ರೀ ಲೀಲಾ(Sreeleela) ಕೂಡ ಒಬ್ಬರು. ವಿರಾಟ್ ನಟನೆಯ ಕಿಸ್ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಶ್ರೀ ಲೀಲಾ ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ.

ಅದಾದ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ(Srii Murali) ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಹೆಸರನ್ನು ಸಂಪಾದಿಸುತ್ತಾರೆ. ಅದಾದ ನಂತರ ಶ್ರೀ ಲೀಲಾ ಅವರು ನೇರವಾಗಿ ತೆಲುಗು ಚಿತ್ರರಂಗಕ್ಕೆ ಹಾರಿಬಿಡುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ.

ದೊಡ್ಡ ದೊಡ್ಡ ಸಿನಿಮಾಗಳಿಗೆ ತೆಲುಗು ನಿರ್ದೇಶಕರಿಗೆ ನಟಿ ಶ್ರೀ ಲೀಲಾ ಅವರೇ ಅತ್ಯಂತ ಸಮರ್ಪಕ ಆಯ್ಕೆಯಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತೆಲುಗು ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ಶ್ರೀ ಲೀಲಾ(Sreeleela) ಅವರು ದೊಡ್ಡಮಟ್ಟದಲ್ಲಿ ಬೆಳೆಯುವ ಮುನ್ಸೂಚನೆಯಾಗಿದೆ ಎಂದು ಹೇಳಬಹುದಾಗಿದೆ. ಇನ್ನು ತೆಲುಗು ಚಿತ್ರರಂಗದಲ್ಲಿ ಅವರು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ.

ಕನ್ನಡದಲ್ಲಿ ಅವರಿಗೆ ಸಂಭಾವನೆ ಕಡಿಮೆ ಇರಬಹುದು ಆದರೆ ತೆಲುಗಿನಲ್ಲಿ ನಟನೆ ಮಾಡಿದರೆ ಶ್ರೀಲೀಲಾ(Sreeleela Kannada Actress) ಅವರು ಒಂದು ಸಿನಿಮಾ ಗೆ 50 ರಿಂದ 60 ಲಕ್ಷ ಸಂಭಾವನೆ ಪಡೆಯುತ್ತಾರೆ ಎಂಬುದಾಗಿ ಸುದ್ದಿ ಇದೆ. ಈಗಾಗಲೇ ಪವನ್ ಕಲ್ಯಾಣ್ ಅವರ ಒಂದು ಸಿನಿಮಾಗೆ ಕೂಡ ಶ್ರೀ ಲೀಲಾ ಅವರನ್ನು ಆಯ್ಕೆ ಮಾಡುವ ಸುದ್ದಿ ಕೇಳಿ ಬರುತ್ತಿದ್ದು ಇದಾದ ನಂತರ ಅವರ ಸಂಭವನ ಅತ್ಯಂತ ವೇಗವಾಗಿ ಹೆಚ್ಚಾದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Leave a Comment

error: Content is protected !!