Rashmika Mandanna: ರಶ್ಮಿಕಾ ಬಿಟ್ಟು ಈಗ ಮತ್ತೊಬ್ಬ ಕನ್ನಡ ಮೂಲದ ನಟಿಯ ಜೊತೆಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್!

Vijay Deverakonda ನಟ ವಿಜಯ್ ದೇವರಕೊಂಡ ಅವರು ತೆಲುಗು ಚಿತ್ರರಂಗದಲ್ಲಿ ಅರ್ಜುನ್ ರೆಡ್ಡಿ(Arjun Reddy) ಸಿನಿಮಾದ ನಂತರ ದೊಡ್ಡಮಟ್ಟದ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಾರೆ. ಎಲ್ಲರೂ ಕೂಡ ಅವರನ್ನು ರೌಡಿ ಎನ್ನುವುದಾಗಿ ಪ್ರೀತಿಯಿಂದ ಕರೆಯುತ್ತಾರೆ. ಒಂದಾದ ಮೇಲೊಂದರಂತೆ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಸೆನ್ಸೇಷನಲ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾರೆ.

ಆದರೆ ಇತ್ತೀಚಿಗಷ್ಟೇ ಬಿಡುಗಡೆಯಾದ ಅವರ ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವ ಲೈಗರ್(Liger) ಸಿನಿಮಾದ ದೊಡ್ಡ ಮಟ್ಟದ ಸೋಲಿನಿಂದಾಗಿ ವಿಜಯ್ ದೇವರಕೊಂಡ ಅವರು ಸಂಪೂರ್ಣವಾಗಿ ಚಿತ್ರರಂಗದಲ್ಲಿ ಕುಸಿದು ಬಿದ್ದಿದ್ದರು. ಇದುವರೆಗೂ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಷ್ಟೊಂದು ಅಪ್ಡೇಟ್ಗಳು ಇತ್ತೀಚಿನ ದಿನಗಳವರೆಗೂ ಕೂಡ ಸಿಕ್ಕಿರಲಿಲ್ಲ.

ಇನ್ನು ಇಷ್ಟು ದಿನ ರಶ್ಮಿಕ ಮಂದಣ್ಣ(Rashmika Mandanna) ಅವರ ಜೊತೆಗೆ ವಿಜಯ್ ದೇವರು ಕೊಂಡ ಅವರ ಹೆಸರು ಕೇಳಿ ಬರುತ್ತಿತ್ತು ಹಾಗೂ ಅವರ ಜೊತೆಗೆ ಹಲವಾರು ಸಿನಿಮಾಗಳಲ್ಲಿ ಇಬ್ಬರೂ ಕೂಡ ಹಲವಾರು ರೋಮ್ಯಾಂಟಿಕ್ ಸೀನ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಈಗ ರಶ್ಮಿಕ ಮಂದಣ್ಣ ಅವರನ್ನು ಬಿಟ್ಟಿರುವ ವಿಜಯ್ ದೇವರಕೊಂಡ ಮತ್ತೊಬ್ಬ ಕನ್ನಡದ ನಟಿಯ ಹಿಂದೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಿಂದೆ ಹೋಗಿದ್ದಾರೆ ಎಂದ ಮಾತ್ರಕ್ಕೆ ನಿಜವಾಗಿಯೂ ಹಿಂದೆ ಹೋಗಿದ್ದಾರೆ ಎಂದು ಅಂದುಕೊಳ್ಳಬೇಡಿ.

ಹೌದು ಮಿತ್ರರೇ ವಿಜಯ್ ದೇವರಕೊಂಡ(Vijay Deverkonda) ಅವರ ಹೊಸ ಸಿನಿಮಾಗೆ ತೆಲುಗು ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವ ಕನ್ನಡದ ಯುವ ನಟಿ ಆಗಿರುವ ಶ್ರೀ ಲೀಲಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಒಂದೊಂದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀ ಲೀಲಾ(Sreeleela) ತಮ್ಮ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.