ಡಿ ಬಾಸ್ ವ್ಯಕ್ತಿತ್ವದ ಬಗ್ಗೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಅಗ್ರಗಣ್ಯರಾಗಿ ಕೇಳಿ ಬರುವ ಒಂದು ಹೆಸರಾಗಿದೆ. ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳ ಪಾಲಿನ ನೆಚ್ಚಿನ ದಾಸನಾಗಿ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಆಳುತ್ತಾ ಬಂದಿರುವ ಹೆಸರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿರುದ್ಧ ಯಾರೇ ಎದ್ದು ನಿಂತರೂ ಕೂಡ ಅವರ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಂಪೂರ್ಣ ಕೆಂಡಮಂಡಲರಾಗುತ್ತಾರೆ.

ಅಷ್ಟರಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮ್ಮ ನೆಚ್ಚಿನ ಆರಾಧ್ಯ ದೈವ ಎನ್ನುವಂತೆ ಪೂಜಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಕಲ್ಟ್ ಫ್ಯಾನ್ ಫಾಲೋವಿಂಗ್ ಹೊಂದಿರುವ ನಟ ಮತ್ತೊಬ್ಬ ಇಲ್ಲ ಎಂದರೆ ಕೂಡ ತಪ್ಪಾಗಲಾರದು. ಆದರೆ ಈಗ ಬಿಗ್ ಬಾಸ್ ಸ್ಪರ್ಧಿ ಆಗಿರುವ ಸೋನು ಗೌಡ ಡಿ ಬಾಸ್ ಬಗ್ಗೆ ಒಂದು ಹೇಳಿಕೆಯನ್ನು ನೀಡಿ ಈಗ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೋನು ಗೌಡ ಅವರನ್ನು ಇಷ್ಟಪಡುವವರ ಸಂಖ್ಯೆ ಅತ್ಯಂತ ಕಡಿಮೆ ಎಂದರೆ ಕೂಡ ತಪ್ಪಾಗಲಾರದು. ಇದರ ನಡುವಲ್ಲಿಯೇ ಸೋನು ಗೌಡ ಅವರು ನನಗೆ ಡಿ ಬಾಸ್ ರವರ ಜೊತೆಗೆ ಹೀರೋಯಿನ್ ಆಗಿ ನಟಿಸಬೇಕು ಎನ್ನುವ ಆಸೆ ತುಂಬಾ ಇದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಸೋನು ಗೌಡ ಕೇವಲ ಇಷ್ಟಕ್ಕೆ ನಿಲ್ಲದೆ ನಾನು ಡಿ ಬಾಸ್ ಅವರ ಹಾಗೆ ಇದ್ದಿದ್ದನ್ನು ನೇರವಾಗಿ ಮಾತನಾಡಿ ಬಿಡುತ್ತೇನೆ ಅದಕ್ಕೆ ನನಗೆ ಅವರು ಎಂದರೆ ತುಂಬಾ ಇಷ್ಟ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

ಇದನ್ನು ಕೇಳಿಸಿಕೊಂಡ ಡಿ ಬಾಸ್ ಅಭಿಮಾನಿಗಳು ಈಗ ಕೆಂಡಮಂಡಲರಾಗಿದ್ದಾರೆ. ನಿನ್ನ ಪ್ರಚಾರಕ್ಕೆ ಡಿ ಬಾಸ್ ಅವರ ಹೆಸರನ್ನು ಉಪಯೋಗಿಸಿಕೊಳ್ಳಬೇಡ ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಅವರ ವಿರುದ್ಧ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಒಂದಂತೂ ನಿಜ ಸೋನು ಗೌಡ ಅವರ ಹೇಳಿಕೆ ಎನ್ನುವುದು ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!