ಮಾನ್ವಿತಾ ತಾಯಿಯ ಅನಾರೋಗ್ಯಕ್ಕೆ ನೆರವಾದ ಸೋನು ಸೂದ್. ಕೊನೆಯ ಸಮಯದಲ್ಲಿ ಸಹಾಯಕ್ಕೆ ನಿಂತ ಸೋನು

ಊರವರು, ಸಂಬಂಧಿಕರು, ಸ್ನೇಹಿತರು ಎಂದು ತುಂಬಾ ಜನ ನಮಗೆ ಹತ್ತಿರವಿರುತ್ತಾರೆ. ಅವರಲ್ಲಿ ನಮ್ಮವರಾರೆಂದು ತಿಳಿಯುವುದು ನಾವು ಕಷ್ಟದಲ್ಲಿದ್ದಾಗ ಮಾತ್ರ. ತನ್ನ ಅನುಕೂಲಕ್ಕೆ ಸಾಕಾಗಿ, ಮಿಕ್ಕುವಷ್ಟು ಸಂಪತ್ತು ಉಳ್ಳವರೂ ಇತರರಿಗೆ ಅಲ್ಪ ಪ್ರಮಾಣದಲ್ಲಾದರೂ ನೀಡಲು ಹಿಂಜರಿಯುತ್ತಾರೆ. ಇಂತಹ ಕಾಲದಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಸಂಕಷ್ಟ ಎದುರಾದಾಗ ಹೆಗಲಾಗಿ, ತಮ್ಮ ಹೃದಯವಂತಿಕೆಯನ್ನು ಸಾರುತ್ತಾರೆ.

ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವ ಮಂದಿಯಲ್ಲಿ ಪ್ರತ್ಯಕ್ಷ ಉದಾಹರಣೆ ಎಂದರೆ ಸೋನು ಸೂದ್. ಕರೋನ ಮಹಾಮಾರಿಯ ಸವಾರಿಯಿಂದ ಜನ ಸಾಕಷ್ಟು ಬಳಲಿದ್ದರು. ಆರ್ಥಿಕ ಸಮಸ್ಯೆ, ನಿರುದ್ಯೋಗ, ಅನಾರೋಗ್ಯಗಳಿಂದ ಭಯಭೀತರಾದ ಜನ ಸಹಾಯಕ್ಕಾಗಿ ಎದುರುನೋಡುತ್ತಿದ್ದರು. ಆ ಸಮಯದಲ್ಲಿ ಸೋನು ಸೂದ್ ತಮ್ಮ ಆಸ್ತಿಯನ್ನು ಅಡವಿಟ್ಟು ಜನರಿಗೆ ಹಣ ನೀಡಿ ಚಿಕಿತ್ಸೆಗಾಗಿ, ದಿನದ ಆಹಾರಕ್ಕಾಗಿ ಸಹಾಯ ಹಸ್ತ ಚಾಚಿದ್ದರು. 23 ಜನ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಕೊನೆಯುಸಿರೆಳೆದಾಗ ಅವರ ಕುಟುಂಬದವರ ಪಾಲಿಗೆ ಆಧಾರ ಸ್ತಂಭವಾಗಿ ನಿಂತವರು ಸೋನು ಸೂದ್. ಆಸ್ಪತ್ರೆಗಾಗಿ ಆಕ್ಸಿಜನ್ ಸಿಲಿಂಡರಿನ ವ್ಯವಸ್ಥೆಯನ್ನು ಮಾಡಿದ್ದರು.

ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ನೆರವು ನೀಡಿದ್ದಾರೆ. ಸೋನು ಸೂದ್ ಅವರು ತಮ್ಮ ಗಳಿಕೆಯ ಶೇಕಡ 80ರಷ್ಟು ಹಣವನ್ನು ಇತರರ ಕಷ್ಟಕ್ಕಾಗಿಯೇ ಮೀಸಲಿಡುತ್ತಾರೆ ಎಂಬುದು ಗಮನಾರ್ಹ. ತಮ್ಮದೇ ಫೌಂಡೇಶನ್ ಹೊಂದಿದ್ದು ಅದರ ಮೂಲಕವೇ ಧನಸಹಾಯ ಮಾಡುತ್ತಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶಾದ್ಯಂತ ಕಷ್ಟವೆಂದವರಿಗೆ ಸಹಾಯ ಮಾಡುವ ಮೂಲಕ ಇವರು ಗುಣದಲ್ಲಿ ಶ್ರೀಮಂತರೆನಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಸುಂದರಿ ಮಾನ್ವಿತಾ ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ನೆರವಿಗೂ ಸೋನು ಸೂದ್ ನಿಂತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಕೆಂಡಸಂಪಿಗೆ, ಶಿವ 143, ಕನಕ, ಟಗರು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ ಮಾನ್ವಿತಾ ಅವರ ತಾಯಿಗೆ ಕಿಡ್ನಿಯ ಸಮಸ್ಯೆ ಎದುರಾಗಿತ್ತು. ಪದೇ ಪದೇ ಡಯಾಲಿಸಿಸ್ ಮಾಡಬೇಕಾದ್ದರಿಂದ ಹಣ ನೀರಿನಂತೆ ಖರ್ಚಾಗುತ್ತಿತ್ತು. ‘ಕಿಡ್ನಿ ಸಮಸ್ಯೆಯನ್ನು ಪರಿಹರಿಸುವ ಅನುಭವಿ ತಜ್ಞರಿದ್ದಲ್ಲಿ ನನಗೆ ತಿಳಿಸಿ’ ಎಂದು ಮಾನ್ವಿತಾ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದನ್ನು ತಿಳಿದ ಮಂಗಳೂರು ಮೂಲದ ಸೋನು ಸೂದ್ ತಮ್ಮ ಫೌಂಡೇಶನ್ ಮೂಲಕ ಮಾನ್ವಿತಾ ತಾಯಿಗೆ ಬನ್ನೇರುಘಟ್ಟದ ಅಪೋಲೋ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಯನ್ನು ಕೊಡಿಸಿದರು. ಮಾನ್ವಿತಾ ಅವರು ತಮ್ಮ ಟ್ವಿಟರ್ ನಲ್ಲಿ ‘ನನ್ನ ತಾಯಿಗಾಗಿ ನೀವು ಮಾಡಿದ ಸಹಾಯ ಮರೆಯಲಾಗದು. ಈ ನಿಮ್ಮ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ಸಮರ್ಪಿಸುವೆ. ನೀವು ನಿಜವಾದ ಹೀರೋ’ ಎಂದು ಬರೆದು ಸೋನು ಸೂದ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಮರೆಯಲ್ಲಿ ನಿಂತು ಉಪಕಾರ ಮಾಡುವ ಸೋನು ಸೂದ್ ಅವರು ನಿಜ ಜೀವನದ ನಾಯಕನೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು.

Leave a Comment

error: Content is protected !!