ಅಪ್ಪು ಅವರ ಸಮಾಜ ಸೇವೆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಮಾಡುತ್ತಿರುವ ಖರ್ಚೆಷ್ಟು ಗೊತ್ತಾ?


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಾಮಾಜಿಕವಾಗಿ ಎಷ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂಬುದು ಅವರ ಮರಣ ನಂತರವೇ ಇಡೀ ಜಗತ್ತಿಗೆ ತಿಳಿದು ಬಂದಿದ್ದು. ಅಷ್ಟರ ಮಟ್ಟಿಗೆ ತಾವು ಮಾಡಿಕೊಂಡು ಬರುತ್ತಿದ್ದ ಸಾಮಾಜಿಕ ಕಾರ್ಯಗಳನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದರು. ಈಗ ಅಪ್ಪು ಅವರ ಮರಣ ನಂತರ ಕೆಲವೊಂದು ಕಾರ್ಯಗಳನ್ನು ಮಾತ್ರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಶಕ್ತಿ ಧಾಮ ಸೇರಿದಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿಕೊಂಡು ಹೋಗುತ್ತಿರುವ ಹಲವಾರು ಕಾರ್ಯಗಳನ್ನು ಅವರ ಅಣ್ಣನಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶಿವಣ್ಣ ಅವರ ಭಜರಂಗಿ 2 ಸಿನಿಮಾ ಬಿಡುಗಡೆ ಆದ ದಿನದಂದೇ ಅಪ್ಪು ಅವರು ನಮ್ಮನ್ನೆಲ್ಲ ಆಗಲಿ ಹೋಗಿದ್ದು ಅಣ್ಣನಾಗಿ ಅವರಿಗೆ ಯಾವ ಮಟ್ಟಿಗೆ ದುಃಖವನ್ನು ತಂದಿರಬೇಡ ಎಂಬ ಅಂದಾಜು ಕೂಡ ಸಿಗುವುದಿಲ್ಲ.

Puneet rajkumar social work
Puneet rajkumar social work

ಇನ್ನು ಶಿವಣ್ಣ (shivarajkumar social work) ಅಪ್ಪು ಮಾಡಿಕೊಂಡು ಹೋಗುತ್ತಿದ್ದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಅದರಲ್ಲಿ ಅಪ್ಪು ಅವರನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎಂದರೆ ತಪ್ಪೇ ಅಲ್ಲ. ಇನ್ನು ಈ ಕೆಲಸಗಳನ್ನು ಹಾಗೂ ಸಾಮಾಜಿಕ ಕಾರ್ಯಗಳ ಒಟ್ಟಾರೆಯಾಗಿ ಶಿವಣ್ಣ ವರ್ಷಕ್ಕೆ ಮಾಡುತ್ತಿರುವ ಖರ್ಚು ಎಷ್ಟು ಎಂದು ಗೊತ್ತಾದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಮಿತ್ರರೇ ಕರುನಾಡ ಚಕ್ರವರ್ತಿ ಶಿವಣ್ಣ (shivarajkumar social work) ವರ್ಷಕ್ಕೆ ಹತ್ತರಿಂದ ಹದಿನೈದು ಕೋಟಿ ರೂಪಾಯಿಗಳನ್ನು ಅಪ್ಪು ಅವರು ನಡೆಸಿಕೊಂಡು ಹೋಗುತ್ತಿದ್ದ ಕಾರ್ಯಗಳಿಗೆ ಹಾಗೂ ತಾವು ಇಷ್ಟು ವರ್ಷ ಮಾಡಿಕೊಂಡು ಬರುತ್ತಿದ್ದ ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡುತ್ತಾರೆ. ಹಣವನ್ನು ಅದೆಷ್ಟು ಜನ ಸಂಪಾದನೆ ಮಾಡಿರಬಹುದು ಆದರೆ ಅದನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಒಳ್ಳೆಯ ಮನಸ್ಸಿರಬೇಕು. ಅದು ನಮ್ಮ ಶಿವಣ್ಣ ಅವರಿಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿವಣ್ಣ ಅವರ ಈ ಮಹಾನ್ ಕಾರ್ಯಕ್ಕೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇದನ್ನೂ ಓದಿ : ಪುನೀತ್ ಅವರು ಕೊನೆಯದಾಗಿ ದರ್ಶನ ಪಡೆದ ಆಂಜನೇಯ ಸ್ವಾಮಿಯ ದೇವಸ್ಥಾನ ಎಲ್ಲಿದೆ ಗೊತ್ತಾ?


Leave A Reply

Your email address will not be published.