Shivanna: ಶಿವಣ್ಣನ ಆ ಒಂದು ಸೂಪರ್ ಹಿಟ್ ಸಿನಿಮಾದಲ್ಲಿ ಭಾರತಿ ವಿಷ್ಣುವರ್ಧನ್ ನಟಿಸಬೇಕಿತ್ತು ಆದರೆ, ಅವರಿಂದಲೇ ಅವಕಾಶ ಕಿತ್ತುಕೊಂಡ ಆ ನಟಿ ಯಾರು ಗೊತ್ತಾ?

Bharathi Vishnuvardhan ನಿಮಗೆಲ್ಲರಿಗೂ ತಿಳಿದಿರುವ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಟನೆಯ ದೊರೆ ಸಿನಿಮಾದಲ್ಲಿ ಶಿವಣ್ಣ ಹಾಗೂ ಭಾರತಿ ವಿಷ್ಣುವರ್ಧನ್ ಅವರ ಕಾಂಬಿನೇಷನ್ ನಿಜಕ್ಕೂ ಕೂಡ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಇಂತಹ ತಾಯಿ ಇದ್ದರೆ ಖಂಡಿತವಾಗಿ ಒಬ್ಬ ಮಗ ಜೀವನದಲ್ಲಿ ಏನನ್ನು ಬೇಕಾದರೂ ಕೂಡ ಸಾಧಿಸಬಹುದು ಎನ್ನುವ ಸಂದೇಶವನ್ನು ಆ ಸಿನಿಮಾ ಹೊಂದಿತ್ತು ಹಾಗೂ ಇದಕ್ಕಾಗಿಯೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು.

ಹೀಗಾಗಿ ಭಾರತಿ ವಿಷ್ಣುವರ್ಧನ್(Bharathi Vishnuvardhan) ಹಾಗೂ ಶಿವಣ್ಣನವರನ್ನು ಇಟ್ಟುಕೊಂಡು ಅಮ್ಮ ಮಗನ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾವನ್ನು ಮಾಡಬೇಕು ಎನ್ನುವುದಾಗಿ ಪ್ರತಿಯೊಬ್ಬ ನಿರ್ದೇಶಕರು ಕೂಡ ಕನಸು ಕಂಡಿರುತ್ತಾನೆ. ಆದರೆ ಅದೊಂದು ಸಿನಿಮಾದಲ್ಲಿ ಮಾತ್ರ ಭಾರತಿ ವಿಷ್ಣುವರ್ಧನ್ ಅವರು ಮಾಡಬೇಕಾಗಿದ್ದ ತಾಯಿಯ ಸ್ಥಾನದಲ್ಲಿ ಮತ್ತೊಬ್ಬ ಕನ್ನಡ ಚಿತ್ರರಂಗದ ಖ್ಯಾತ ನಟಿ ಆ ಅವಕಾಶವನ್ನು ಕಸಿದುಕೊಳ್ಳುತ್ತಾರೆ ಎಂದು ಹೇಳಬಹುದು.

ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಆಗಿರುವ ಸಿಂಹದಮರಿ ಸಿನಿಮಾದ ಬಗ್ಗೆ. ಶಿವಣ್ಣ(Shivanna) ಆಂಗ್ರಿ ಯಂಗ್ ಮ್ಯಾನ್ ಆಗಿ ಈ ಸಿನಿಮಾದಲ್ಲಿ ಭಾವುಕ ಹಾಗೂ ಮಾಸ್ ಪಾತ್ರಗಳಲ್ಲಿ ಘರ್ಜಿಸುತ್ತಾರೆ. ಇಂತಹ ಪಾತ್ರವನ್ನು ಶಿವಣ್ಣ ಕೂಡ ಮಾಡಬಲ್ಲರು ಎನ್ನುವುದನ್ನು ಸಿಂಹದಮರಿ(Simhadamari Film) ಸಿನಿಮಾದಲ್ಲಿ ಶಿವಣ್ಣನೇ ಸಾಬೀತುಪಡಿಸುತ್ತಾರೆ.

ಆದರೆ ಈ ಸಿನಿಮಾದಲ್ಲಿ ತಾಯಿಯ ಭಾಗದಲ್ಲಿ ನಟಿ ಭಾರತಿ ವಿಷ್ಣುವರ್ಧನ್ ರವರು ನಟಿಸಬೇಕಾಗಿತ್ತು ಆದರೆ ಹಲವಾರು ಕಾರಣಗಳಿಂದಾಗಿ ಅವರು ನಟಿಸಲು ಸಾಧ್ಯವಾಗಲಿಲ್ಲ ಹೀಗಾಗಿ ಅವರ ಬದಲಿಗೆ ಈ ಪಾತ್ರದಲ್ಲಿ ನಟಿ ಅಂಬಿಕಾ ಅವರು ನಟಿಸುತ್ತಾರೆ. ಭಾರತಿ ವಿಷ್ಣುವರ್ಧನ್ ಹಾಗೂ ಶಿವಣ್ಣ ಅವರ ತಾಯಿ ಮಗನ ಪಾತ್ರದ ಯಶಸ್ಸು ದೊಡ್ಡಮಟ್ಟದಲ್ಲಿ ಹರಡಿದ್ದರೂ ಕೂಡ ಈ ಸಿನಿಮಾದಲ್ಲಿ ಅಂಬಿಕ(Ambika) ಹಾಗೂ ಶಿವಣ್ಣ ಅವರ ಪಾತ್ರವೂ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು ಎನ್ನುವುದನ್ನು ನಾವು ಮರೆಯಬಾರದು.

Leave A Reply

Your email address will not be published.