Kabzaa: ಕಬ್ಜಾ ಸಿನಿಮಾದಲ್ಲಿ ನಿಮಿಷಗಳ ಪಾತ್ರಕ್ಕೆ ಶಿವನ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Shivanna ಹಲವಾರು ವರ್ಷಗಳಿಂದ ಪ್ರೇಕ್ಷಕರು ಕಾಯುತ್ತಿರುವ ಸಿನಿಮಾ ಕಬ್ಜಾ. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾಗೆ ಬಂಡವಾಳ ಹೂಡಿರುವುದು ರಾಜಕಾರಣಿ ಆಗಿರುವ ಎಂಟಿಬಿ. ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಾಗಿ ಹಾಗೂ ಶ್ರೇಯ ಶರಣ್(Shreya Sharan) ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನೋಡೋದಕ್ಕೆ ಕೆಜಿಎಫ್(KGF) ರೀತಿಯಲ್ಲಿ ಕಂಡು ಬಂದರೂ ಕೂಡ ಅದಕ್ಕಿಂತ ಮಿಗಿಲಾದದ್ದೇನೋ ಚಂದ್ರುರವರು ಈ ಸಿನಿಮಾದಲ್ಲಿ ಮಾಡಿದ್ದಾರೆ ಎನ್ನುವುದನ್ನು ಕಬ್ಜಾ ಸಿನಿಮಾದ ಟೀಸರ್ ನಿರೂಪಿಸಿದೆ. ಬಹುತಾರಗಣವನ್ನು ಹೊಂದಿರುವ ಈ ಸಿನಿಮಾದಲ್ಲಿ ಕನ್ನಡದ ಮತ್ತೊಬ್ಬ ಸ್ಟಾರ್ ನಟ ಕೂಡ ನಟಿಸುತ್ತಿದ್ದಾರೆ.

Kabzaa Releasing On March 17

ಹೌದು, ನಾವ್ ಮಾತನಾಡುತ್ತಿರುವುದು ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದರ ಬಗ್ಗೆ. ಹೌದು ಗೆಳೆಯರೇ ಇದೇ ಮಾರ್ಚ್ 17ರಂದು ಬಿಡುಗಡೆ ಆಗುವುದು ಕನ್ಫರ್ಮ್ ಆಗಿದ್ದು ಈ ಹೊಸ್ತಿಲಲ್ಲೇ ಚಿತ್ರತಂಡ ಶಿವಣ್ಣ ನಟಿಸುವುದನ್ನು ಅಧಿಕೃತವಾಗಿಯೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕನ್ಫರ್ಮ್ ಮಾಡಿದೆ. ಇನ್ನು ಈ ಸಿನಿಮಾದಲ್ಲಿ ನಟಿಸುವುದಕ್ಕೆ ಶಿವಣ್ಣ ಪಡೆದುಕೊಂಡಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ಲೆಕ್ಕಾಚಾರ ಈಗಾಗಲೇ ಪ್ರಾರಂಭವಾಗಿದೆ.

ಹಾಗಿದ್ದರೆ ಮೊದಲಿಗೆ ಶಿವಣ್ಣನ ಪಾತ್ರದ ಬಗ್ಗೆ ಗಮನಿಸುವುದಾದರೆ ಕಬ್ಜಾ(Kabzaa) ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಹೀಗಾಗಿ ನಿಮಿಷಗಳ ಪಾತ್ರಕ್ಕೆ ಶಿವಣ್ಣ ಈಗಾಗಲೇ ಎರಡರಿಂದ ಮೂರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರಬಹುದು ಎನ್ನುವ ಲೆಕ್ಕಾಚಾರ ಇದೆ. ಏನೇ ಆಗಲಿ ಕನ್ನಡ ಚಿತ್ರರಂಗದ ಮೂವರು ದಿಗ್ಗಜರು ಆಗಿರುವ ಉಪ್ಪಿ ಕಿಚ್ಚ(Kiccha) ಹಾಗೂ ಶಿವಣ್ಣನನ್ನು ಒಂದೇ ಫ್ರೇಮ್ನಲ್ಲಿ ನೋಡುವುದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ.

Leave A Reply

Your email address will not be published.