SRK: ಬಾಲಿವುಡ್ ಕಿಂಗ್ ಖಾನ್ ಜೊತೆಗೆ ನಮ್ಮ ಶಿವಣ್ಣ. ಇದೇನಿದು ಹೊಸ ಸುದ್ದಿ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ನಟನಾಗಿ ಬರೋಬ್ಬರಿ ಮೂರು ದಶಕಗಳಿಂದಲೂ ಕೂಡ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಯುವ ನಟನಿಗೆ ಸ್ಪೂರ್ತಿಯ ವಿಚಾರ ಎನ್ನಬಹುದಾಗಿದೆ. ಯಾಕೆಂದರೆ ಅವರ ವಯಸ್ಸಿನ ನಟರು ಈಗ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಆದರೆ ಶಿವಣ್ಣ ಇಂದಿಗೂ ಟಾಪ್ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೂಡ ಅವರ ಸಿನಿಮಾಗಳ ಹೆಸರು ಕೇಳಿ ಬರುತ್ತಿವೆ. ಇನ್ನು ನಿಮಗೆಲ್ಲರಿಗೂ ನೆನಪಿರಬಹುದು ಬಾಲಿವುಡ್ ಕಿಂಗ್ ಖಾನ್(SRK) ನಟನೆಯ ಜವಾನ್(Jawan) ಸಿನಿಮಾ ಸಾಕಷ್ಟು ಸಮಯಗಳ ಹಿಂದೆನೇ ಅನೌನ್ಸ್ಮೆಂಟ್ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಕುರಿತಂತೆ ಹೆಚ್ಚಿನ ಅಪ್ಡೇಟ್ಗಳು ಸಿಗುತ್ತಿಲ್ಲ. ಈ ಸಿನಿಮಾದಲ್ಲಿ ನಯನತಾರ ನಾಯಕಿಯಾಗಿದ್ದು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಟ್ಲಿ ನಿರ್ದೇಶನವನ್ನು ಮಾಡುತ್ತಿದ್ದಾರೆ.

Shivanna In jawan

ಇನ್ನು ಈ ಸಿನಿಮಾದಲ್ಲಿ ಹಲವಾರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರು ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು ಅವರಲ್ಲಿ ತಮಿಳಿನ ವಿಜಯ್ ತೆಲುಗಿನ ಅಲ್ಲು ಅರ್ಜುನ್(Allu Arjun) ರಾಮ್ ಚರಣ್ ಸೇರಿದಂತೆ ಹಲವಾರು ನಟರ ಹೆಸರು ಕೇಳಿ ಬರುತ್ತಿವೆ. ಕನ್ನಡದಿಂದಲೂ ಕೂಡ ನಮ್ಮೆಲ್ಲರ ನೆಚ್ಚಿನ ಶಿವಣ್ಣನ ಹೆಸರು ಕೇಳಿ ಬಂದಿದೆ.

ಜವಾನ್ ಸಿನಿಮಾ ವನ್ನು ಖುದ್ದಾಗಿ ಶಾರುಖ್ ಖಾನ್ ರವರ ಪತ್ನಿ ಆಗಿರುವ ಗೌರಿ ಖಾನ್(Gouri Khan) ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಎಲ್ಲಾ ಅಂದುಕೊಂಡಂತೆ ನಡೆದರೆ ಬಾಲಿವುಡ್ ಚಿತ್ರರಂಗದ ಕಿಂಗ್ ಜೊತೆಗೆ ಕನ್ನಡದ ಚಿತ್ರರಂಗದ ಕಿಂಗ್ ನಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಶಾರುಖ್ ಖಾನ್(Shah Rukh Khan) ರವರ ಜವಾನ್ ಸಿನಿಮಾದಲ್ಲಿ ಶಿವಣ್ಣ(Shivanna) ನಟಿಸುವುದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.

Leave a Comment

error: Content is protected !!