ಗಂಧದಗುಡಿ ಅಪ್ಪು ಕೊನೆಯ ಸಿನಿಮಾ ಅಲ್ಲ! ಶಿವಣ್ಣ ಹೊರ ಹಾಕಿದ್ರು ಸರ್ಪ್ರೈಸಿಂಗ್ ನ್ಯೂಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಚಿಕ್ಕವಯಸ್ಸಿನಿಂದಲೂ ಕೂಡ ಸಾಕಷ್ಟು ಕೊಡುಗೆಗಳನ್ನು ನೀಡಿಕೊಂಡು ಬಂದವರು. ತಾವು ಆರು ತಿಂಗಳ ಮಗುವಾಗಿದ್ದರೆ ಸಿನಿಮಾ ರಂಗಕ್ಕೆ ಕಾಲಿಟ್ಟು ಬಾಲ ನಟನಾಗಿ ಹತ್ತನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡ ಅತ್ಯದ್ಭುತ ಪ್ರತಿಭೆ ನಮ್ಮೆಲ್ಲರ ಅಪ್ಪು. ನಂತರ ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟು ಇಷ್ಟೊಂದು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ರಾಜನಂತೆ ಆಳುತ್ತಾ ಬಂದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 46ನೇ ವಯಸ್ಸಿಗೆ ತಮ್ಮ ಸಿನಿಮಾ ಹಾಗೂ ಜೀವನದ ಪಯಣವನ್ನು ನಿಲ್ಲಿಸುತ್ತಾರೆ ಎಂಬುದನ್ನು ಯಾರು ಕೂಡ ಕನಸು ಮನಸ್ಸಿನಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಲವಾರು ಸಿನಿಮಾಗಳಲ್ಲಿ ಅಪ್ಪು ಅವರು ನಟಿಸಬೇಕಾಗಿತ್ತು.

ಗಜಕೇಸರಿ ಹಾಗೂ ಹೆಬ್ಬುಲಿ ಖ್ಯಾತಿಯ ಕೃಷ್ಣ ಅವರ ನಿರ್ದೇಶನದ ಸಿನಿಮಾದಲ್ಲಿ ಹಾಗೂ ದಿನಕರ ತೂಗುದೀಪ ನಿರ್ದೇಶನದ ಸಿನಿಮಾದಲ್ಲಿ ಮತ್ತು ಸಂತೋಷ್ ಆನಂದ ಮತ್ತು ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಬೇಕಾಗಿದ್ದ ಸಿನಿಮಾದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಬೇಕಾಗಿತ್ತು, ಇದಕ್ಕಾಗಿ ಅವರು ಒಪ್ಪಿಗೆಯನ್ನು ಕೂಡ ನೀಡಿದ್ದರು. ಆದರೆ ಆ ವಿಧಿ ಮಾತ್ರ ಯಾವುದಕ್ಕೂ ಕೂಡ ಅವಕಾಶ ನೀಡಲೇ ಇಲ್ಲ ಎನ್ನುವುದು ಮಾತ್ರ ವಿಪರ್ಯಾಸ ಎಂದು ಹೇಳಬಹುದು.

ಆದರೆ ಗಂಧದ ಗುಡಿ ಸಿನಿಮಾ ಎಲ್ಲರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಎಂಬುದಾಗಿ ಭಾವಿಸಿದ್ದರು. ಆದರೆ ಕೆಲವೊಂದು ಬಲವಾದ ಮೂಲಗಳ ಪ್ರಕಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನಿಮೇಶನ್ ಸಿನಿಮಾ ಸಿದ್ಧವಾಗುತ್ತಿದ್ದು ಅತಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನುವ ಸುದ್ದಿಗಳು ಕೂಡ ಕೇಳಿ ಬರುತ್ತಿವೆ. ಇದು ಎಷ್ಟರಮಟ್ಟಿಗೆ ಸತ್ಯವಾದ ಸುದ್ದಿ ಎಂಬುದನ್ನು ಮುಂದಿನ ದಿನಗಳಲ್ಲಿ ನಾವೆಲ್ಲರೂ ಕಾದು ನೋಡಬೇಕಾಗಿದೆ.

Leave a Comment

error: Content is protected !!