Yuvarajkumar: ಕನ್ನಡ ಚಿತ್ರರಂಗದಲ್ಲಿ ಘರ್ಜಿಸುತ್ತಿರುವ ಯುವರಾಜ್ ಕುಮಾರ್ ಮೊದಲ ಸಿನಿಮಾಗೆ ಕಾಂತಾರ ಕನೆಕ್ಷನ್!

Saptami Gowda ದೊಡ್ಮನೆಯ ಮೂರನೇ ಜನರೇಷನ್ ನ ಕುಡಿಯಾಗಿರುವ ಯುವರಾಜ್ ಕುಮಾರ್(Yuvarajkumar) ನಟನೆಯ ಮೊದಲ ಸಿನಿಮಾ ಆಗಿರುವ ಯುವ ಸಿನಿಮಾದ ಟೀಸರ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದೆ. ಟೀಸರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ರೆಕಾರ್ಡ್ ಅನ್ನು ಕೂಡ ಸೃಷ್ಟಿಸಿದ್ದು ಮಾಸ್ ಆಗಿ ಮೂಡಿಬಂದಿದ್ದು ಅಭಿಮಾನಿಗಳಲ್ಲಿ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುವಂತೆ ಮಾಡಿದೆ.

ಇನ್ನು ಸಿನಿಮಾ ಅಧಿಕೃತವಾಗಿ ಅನೌನ್ಸ್ಮೆಂಟ್ ಆದ ದಿನದಿಂದಲೂ ಕೂಡ ಯುವರಾಜ್ ಕುಮಾರ್ ರವರಿಗೆ ಯುವ ಸಿನಿಮಾದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳ ಮನಸ್ಸಿನಲ್ಲಿ ಓಡಾಡುತ್ತಲೇ ಇತ್ತು. ಯುವ ರಾಜಕುಮಾರ್(Yuva) ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಾಗಿ ಹಲವಾರು ನಟಿಯರ ಹೆಸರು ಕೂಡ ಕೇಳಿಬಂದಿತ್ತು.

ಆದರೆ ಈಗ ಅಧಿಕೃತವಾಗಿ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಅಧಿಕೃತವಾಗಿಯೇ ಹೊಂಬಾಳೆ ಫಿಲಂಸ್(Hombale Films) ಸಂಸ್ಥೆಯಿಂದ ಹೊರಬಂದಿದ್ದು ಯುವ ಸಿನಿಮಾಗೆ ಈಗ ಕಾಂತಾರ(Kantara) ಕನೆಕ್ಷನ್ ನೀಡಲು ಚಿತ್ರತಂಡ ಹೊರಟಿದೆ ಎಂದು ಹೇಳಬಹುದಾಗಿದೆ. ಕಾಂತಾರ ಕನೆಕ್ಷನ್ ಎಂದ ಕೂಡಲೇ ಕಥೆಗೆ ನೇರವಾಗಿ ಕನೆಕ್ಷನ್ ಇದೆ ಎಂದು ಭಾವಿಸಬೇಡಿ ನಾವು ಮಾತನಾಡುತ್ತಿರುವುದು ನಾಯಕನಟಿಯ ಬಗ್ಗೆ.

ಹೌದು ಮಿತ್ರರೇ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರಿಗೆ ನಾಯಕಿಯಾಗಿ ಮಿಂಚಿದ್ದ ಸಪ್ತಮಿ ಗೌಡ(Saptami Gowda) ಅವರು ಯುವ ಸಿನಿಮಾದಲ್ಲಿ ಯುವರಾಜ್ ಕುಮಾರ್ ರವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಧಿಕೃತವಾಗಿ ಹೊರ ಬಂದಿದೆ. ಕಾಂತರಾ ಸಿನಿಮಾದ ಮೂಲಕ ಎಲ್ಲರ ಮನ ಗೆದ್ದಿದ್ದ ಸಪ್ತಮಿ ಗೌಡ ಯುವರಾಜ್ ಕುಮಾರ್ ಗೆ ಮೊದಲ ನಾಯಕಿಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave A Reply

Your email address will not be published.