Sanya Iyer ವಿವಾದದ ಸುಳಿಯಲ್ಲಿ ಸಾನ್ಯಾ ಅಯ್ಯರ್. ಸೆಲ್ಫಿ ಕೇಳಲು ಬಂದವನಿಗೆ ಕಪಾಳಮೋಕ್ಷ!

Sanya Iyer ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ‌. ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳು ಹಾಗೂ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿರುವ ಸಾನಿಯಾ ಅಯ್ಯರ್ ಬಿಗ್ ಬಾಸ್(Biggboss) ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆಯುತ್ತಾರೆ.

ಬಿಗ್ ಬಾಸ್ ಮನೆಯ ಒಳಗೆ ಅವರ ಹಾಗೂ ರೂಪೇಶ್ ಶೆಟ್ಟಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ನೆಟ್ಟಿಗರೂ ಮಾತನಾಡಿಕೊಳ್ಳುವಂತಾಯಿತು. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರು ಸೂಪರ್ ಆಕ್ಟಿವ್(Active) ಆಗಿದ್ದಾರೆ. ಆದರೆ ಇತ್ತೀಚಿಗಷ್ಟೇ ಕರಾವಳಿ ಭಾಗದಲ್ಲಿ ಅವರು ಹೋಗಿದ್ದ ಕಾರ್ಯಕ್ರಮದಲ್ಲಿ ನಡೆದಿರುವಂತಹ ಘಟನೆ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ.

Sanya Iyer

ಹೌದು ಗೆಳೆಯರೇ ಇತ್ತೀಚಿಗಷ್ಟೇ ಸಾನಿಯಾ ಅವರು ತಮ್ಮ ಸ್ನೇಹಿತರ ಜೊತೆಗೆ ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿದ್ದ ಜೋಡು ಕೆರೆ ಕಂಬಳಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಈ ಸಮಯದಲ್ಲಿ ಯುವಕನೊಬ್ಬ ಅವರ ಜೊತೆಗೆ ಸೆಲ್ಫಿ(Selfie) ಕೇಳಲು ಹೋಗಿ ಅವರ ಕೈ ಹಿಡಿದು ಎಳೆದಾಡಿದ್ದಾನೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ. ಇದನ್ನು ಸಹಿಸಲಾಗದೆ ಸಾನಿಯಾ ಅಯ್ಯರ್ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಆ ಹುಡುಗ ಕೂಡ ಸಾನಿಯಾ ಅಯ್ಯರ್ ಅವರಿಗೆ ತಿರುಗಿಸಿ ಕಪಾಳ ಮೋಕ್ಷ ಮಾಡಿದ್ದಾನೆ.

ಇದು ದೊಡ್ಡ ಮಟ್ಟದಲ್ಲಿ ಜಗಳಕ್ಕೆ ಕಾರಣವಾಗಿದ್ದು ವೇದಿಕೆಯಲ್ಲಿ ಸಾನಿಯಾ ಅಯ್ಯರ್ ಹಾಗೂ ಅವರ ಸ್ನೇಹಿತರು ಕಾರ್ಯಕ್ರಮದ(Event) ಆಯೋಜಕರ ವಿರುದ್ಧ ಜಗಳಕ್ಕೆ ನಿಲ್ಲುವಂತಹ ಪರಿಸ್ಥಿತಿ ಸಿದ್ಧವಾಗಿತ್ತು. ನಂತರ ಆ ಹುಡುಗನಿಗೆ ಸ್ಥಳೀಯರು ಧರ್ಮದೇಟು ಹಾಕಿ ಸಾನಿಯಾ ಅಯ್ಯರ್ ಹಾಗೂ ಸಂಗಡಿಗರಿಗೆ ಸಮಾಧಾನ ಮಾಡಿ ಪರಿಸ್ಥಿತಿ ತಿಳಿಯಾಗುವಂತೆ ಮಾಡುತ್ತಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!