Thalapathy 67: KGF ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್ ತಲಪತಿವಿಜಯ್ ಸಿನಿಮಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್..

Thalapathy 67 ಬಾಲಿವುಡ್ ಚಿತ್ರರಂಗದ ಖಳನಾಯಕ್ ಸಂಜಯ್ ದತ್ ಅವರು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಣನೀಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ವಿಶೇಷ ಉದಾಹರಣೆ ಎನ್ನುವಂತೆ ಕೆಜಿಎಫ್ ಚಾಪ್ಟರ್ 2(KgfChapter 2) ಸಂಜಯ್ ದತ್ ಅವರ ಅಧೀರ ಪಾತ್ರದ ಮೂಲಕ ಬಾಲಿವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಸಂಜಯ್ ದತ್ ಅವರಿಗೆ ಪುನರ್ಜನ್ಮವನ್ನು ನೀಡಿರುವಂತಹ ಸಿನಿಮಾ ಎಂದರೂ ಕೂಡ ತಪ್ಪಾಗಲಾರದು.

ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕೂಡ ಸಂಜಯ್ ದತ್ ಅವರು ದೊಡ್ಡಮಟ್ಟದ ಸಂಭಾವನೆಯನ್ನು(Remuneration) ಪಡೆದುಕೊಂಡಿದ್ದರು. ಇನ್ನು ಈಗ ಮತ್ತೆ ದಕ್ಷಿಣದತ್ತ ಮುಖ ಮಾಡಿರುವ ಸಂಜಯ್ ದತ್ ಅವರು ತಮಿಳು ಚಿತ್ರರಂಗದ ತಳಪತಿ ವಿಜಯ್ ಅವರ ಮುಂದಿನ ಸಿನಿಮಾ ಗೆ ಖಳನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಅವರು ಕಾಣಿಸಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ಅರಿತುಕೊಳ್ಳಬಹುದಾಗಿದೆ.

Thalapathy Vijay & Sanjay dutt

ಲೋಕೇಶ್ ಕನಗರಾಜ್ ಅವರ ಸಿನಿಮಾಟಿಕ್ ಯುನಿವರ್ಸ್( Cinematic Universe) ನಲ್ಲಿ ಮೂಡಿ ಬರುತ್ತಿರುವ ತಲಪತಿ ವಿಜಯ್ ರವರ 67ನೇ ಸಿನಿಮಾದಲ್ಲಿ ದೊಡ್ಡ ತಾರಾ ಗಣವೇ ಇದೆ ಎಂದು ಹೇಳಬಹುದಾಗಿದೆ. ಸಂಜಯ್ ದತ್ ಅವರ ಜೊತೆಗೆ ಅರ್ಜುನ್ ಸರ್ಜಾ ಪ್ರಿಯ ಆನಂದ್ ಸೇರಿದಂತೆ ಹಲವಾರು ಖ್ಯಾತನಾಮರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾಗೆ ಸಂಜಯ್ ದತ್ ಅವರು ಪಡೆಯಲಿರುವ ಸಂಭಾವನೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ಹೌದು ಮಿತ್ರರೇ ಸಂಜಯ್ ದತ್ ಅವರು ಈ ಸಿನಿಮಾಗಾಗಿ ಭರ್ಜರಿ 10 ಕೋಟಿಗು ಅಧಿಕ ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವುದಾಗಿ ಕಾಲಿವುಡ್(Kollywood) ಮೂಲಗಳು ತಿಳಿಸಿವೆ. ಕೆಜಿಎಫ್ ನಲ್ಲಿ ಅಧೀರನ ಪಾತ್ರದಲ್ಲಿ ಎಲ್ಲರ ಮನೆಗೆದ್ದಿದ್ದ ಸಂಜಯ್ ದತ್ ಈಗ ಮತ್ತೊಮ್ಮೆ ವಿಜಯ್ ನಟನೆಯ ಸಿನಿಮಾದಲ್ಲಿ ಖಳನಾಯಕನಾಗಿ ತಮಿಳ್ ಚಿತ್ರರಂಗವನ್ನು ಗೆಲ್ಲಲು ಸಿದ್ದರಾಗಿ ನಿಂತಿದ್ದಾರೆ. ಸಂಜಯ್ ದತ್ ಅವರ ಪಾತ್ರದ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!