ಸಂಜನಾ ಅವರು ನಟಿಸಿದ ಮೊದಲ ಸಿನೆಮಾ ಗಂಡ ಹೆಂಡತಿ ಅಲ್ಲ ಅವರ ಮೊದಲ ಸಿನೆಮಾದಲ್ಲಿ ಸಂಜನಾ ಎನ್ನುವ ಹೆಸರು ಆಗಿರಲಿಲ್ಲ ಹಾಗಿದ್ದರೆ ಅವರ ಮೊದಲ ಸಿನೆಮಾ ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಸಂಜನಾ ಗಲ್ರಾನಿ ಸ್ಯಾಂಡಲ್ ವುಡ್ ನಲ್ಲಿ ಗಂಡ ಹೆಂಡತಿ ಸಂಜನಾ ಎಂದೇ ಖ್ಯಾತರಾದ ಇವರು ನಾಲ್ಕು ಭಾಷೆಗಳಲ್ಲಿ ಚಿರಪರಿಚಿತ. ಆಟೋಗ್ರಾಫ್ ಪ್ಲೀಸ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಆ ಸಮಯದಲ್ಲಿ ಗಂಡ ಹೆಂಡತಿ ಚಿತ್ರದಲ್ಲಿ ನಟಿಸಲು ಆಫರ್ ಬಂತು ಹಿಂದಿ ಭಾಷೆಯ ಮ’ರ್ಡ’ ರ್ ಚಿತ್ರದ ರೀಮೇಕ್ ಆಗಿದ್ದು ಅದರಲ್ಲಿ ನಟಿಸಿ ಬೋಲ್ಡ್ ನಟಿ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಿಂಗಲ್ ಹೀರೋಯಿನ್ ಆಗಿ ನಟಿಸಿದ ಸಂಜನಾ ತಮಿಳು ತೆಲುಗಿನಲ್ಲಿ ಸೆಕೆಂಡ್ ಹೀರೋಯಿನ್ ಆಗಿ ನಟಿಸಿದ್ದೆ ಹೆಚ್ಚು.

ಸ್ಟಾರ್ ನಟರೊಂದಿಗೆ ಉತ್ತಮ ಕಾಂಟಾಕ್ಟ್ ಇಟ್ಟು ಕೊಂಡ ಸಂಜನಾ ಚಿತ್ರ ರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಆದರೆ ಸಂಜನಾ ಅವರ ಮೊದಲ ಚಿತ್ರ ಗಂಡ ಹೆಂಡತಿ ಅಲ್ಲ ಆಟೋಗ್ರಾಫ್ ಪ್ಲೀಸ್ ಎಂಬ ಚಿತ್ರದಲ್ಲಿ ಮೊದಲು ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಸಂಜನಾ ಅವರ ಹೆಸರು ಅರ್ಚನಾ ಎಂದಿತ್ತು ಅರ್ಜುನ್ ಜನ್ಯಾ ರವರು ಸಂಗೀತ ನಿರ್ದೇಶನ ನೀಡಿದ ಮೊದಲ ಚಿತ್ರ.

ಈ ಸಿನೆಮಾ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿತ್ತು ನಂತರ ಆಕಾಶ್ ಶೆಟ್ಟಿ ಮತ್ತು ಸಂಜನಾ ಅವರು ಹೀರೊ ಹೀರೋಯಿನ್ ಆಗಿ ನಟಿಸಿದರು. ಈ ಚಿತ್ರ 2005 ರಲ್ಲಿ ಬಿಡುಗಡೆಗೊಂಡಿತು. ಈ ಚಿತ್ರ ಬಿಡುಗಡೆಗೊಳ್ಳುವ ಸಮಯದಲ್ಲಿ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರ ಬಿಡುಗಡೆಗೊಳ್ಳುವುದರಲ್ಲಿತ್ತು ಎರಡು ಒಂದೇ ಹೆಸರು ಇರುವುದರಿಂದ ಮತ್ತು ಸಂಜನಾ ಅವರು ತಮಿಳಿನಲ್ಲಿ ಒಂದು ಸಿನಿಮಾಕ್ಕೆ ಒಪ್ಪಿಕೊಂಡಿದ್ದರು ಹಾಗಾಗಿ ಆಟೋಗ್ರಾಫ್ ಪ್ಲೀಸ್ ಚಿತ್ರ ತಡವಾಗಿ ಬಿಡುಗಡೆಯಾಯಿತು. ನಂತರ ಸಂಜನಾ ಗಂಡ ಹೆಂಡತಿ ಚಿತ್ರದಲ್ಲಿ ನಟಿಸಿದರು ನಂತರ ತಮ್ಮ ಹೆಸರನ್ನು ಸಂಜನಾ ಗಲ್ರಾನಿ ಎಂದು ಮಾಡಿಕೊಂಡರು.

By admin

Leave a Reply

Your email address will not be published.