ಮನೆಗೆ ನುಗ್ಗಿ ಸ್ಯಾಂಡಲ್ ವುಡ್ ಯುವ ನಟನ ಹ’ತ್ಯೆ; ಹಂತಕ ಯಾರು ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿತು ಸ್ಫೋಟಕ ಮಾಹಿತಿ
ಇದು ನಿಜಕ್ಕೂ ಚಂದನವನವನ್ನೇ ನಡುಗಿಸುವಂತ ಘಟನೆ. ಯಾರ ಊಹೆಗೂ ನಿಲುಕದಂತೆ ಈ ಘಟನೆ ನಡೆದು ಹೋಗಿದೆ. ಯುವ ನಟ ಸತೀಶ್ ವಜ್ರ ಕೊ’ಲೆಯಾಗಿರುವ ವ್ಯಕ್ತಿ. ಈ ಘಟನೆ ಕುಟುಂಬದ ವೈಶಮ್ಯದಿಂದ ನಡೆದಿರುವುದು ಎನ್ನುವುದು ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ.
ಸತೀಶ್ ವಜ್ರ 32 ವರ್ಷದ ಯುವಕ. ಈತನಿಗೆ ನಟನೆಯ ಬಗ್ಗೆ ಅಪಾರ ಒಲವಿತ್ತು. ಹಾಗಾಗಿ ಕೆಲವು ಶಾರ್ಟ್ ಫೀಲ್ಮ್ ಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ ಇತ್ತೀಚಿಗೆ ’ಲಗೋರಿ’ ಎನ್ನುವ ಟೆಲಿ ಫಿಲ್ಮ್ ನಲ್ಲಿ ನಾಯಕನಾಗಿ ನಟಿಸಿದ್ದರು. ಇದು ಹಿಟ್ ಕೂಡ ಆಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಗಳನ್ನು ಮಾಡುತ್ತ ತಕ್ಕಪಟ್ಟಿಗೆ ಫೇಮಸ್ ಆಗಿದದ್ರು. ನಗರದ ಆರ್ ಆರ್ ನಗರದಲ್ಲಿ ’ವಜ್ರ’ ಹೆಸರಿನಲ್ಲಿ ಸಲೂನ್ ಒಂದನ್ನು ನಡೆಸುತ್ತಿದ್ದರು.
ಸತೀಶ್ ಅವರದ್ದು ಪ್ರೇಮ ವಿವಾಹ. ಆದರೆ ಮದುವೆಯಾಗಿ ಇಷ್ಟು ವರ್ಷದ ಮೇಲೆ ಅವರ ಹೆಂಡತಿ ಸುಧಾಮಣಿ ಏಳು ತಿಂಗಳುಗಳ ಹಿಂದೆಯಷ್ಟೇ ನೇನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇವರಿಗೆ ಐದು ವರ್ಷದ ಮಗಳಿದ್ದು ಸುಧಾಮಣಿಯವರ ಪೋಷಕರು ಆ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯ ಸತೀಶ್ ಪಟ್ಟಣಗೆರೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಸತೀಶ್ ತನ್ನ ಅಕ್ಕನ ಸಾವಿಗೆ ಕಾರಣ ಅಂತ ಅವನ ಭಾಮೈದ ಸುದರ್ಶನ್ ಸದಾ ದ್ವೇಷ ಕಾರುತ್ತಿದ್ದ. ಅಲ್ಲದೇ ಸತೀಶ್ ತನ್ನ ಮಗುವನ್ನು ವಶಕ್ಕೆ ಕೊಡುವಂತೆ ಕೇಳಿದ್ದಕ್ಕಾಗಿ ಸುಧಾಮಣಿ ಮನೆಯವರ ಜೊತೆ ಆಗಾಗ ಜಗಳವೂ ಆಗುತ್ತಿತ್ತು.
ಸತೀಶ್ ನ ಬಾಮೈದ ಸುದರ್ಶನ ನಾಗೇಂದ್ರ ಎನ್ನುವ ಸ್ನೇಹಿತನೊಂದಿಗೆ ಸತೀಶ್ ನ ಕೊಲೆ ಮಾಡುವುದಕ್ಕೆ ಹೊಂಚು ಹಾಕಿದ್ದ ಎನ್ನಲಾಗಿದೆ. ಸತೀಶ್ ಅವರ ಮನೆ ಓನರ್ ಹೇಮಂತ್ ಕುಮಾರ್ ಮನೆಯ ಹತ್ತಿರ ಬಂದಾಗ ಸತೀಶ್ ಮನೆಯ ಬಾಗಿಲಿನಲ್ಲಿ ರ’ಕ್ತ ಬಿದ್ದಿರುವುದು ಕಂಡಿದೆ. ನಂತರ ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದರೆ ಸತೀಶ್ ರ’ ಕ್ತದ ಮಡುವಿನಲ್ಲಿ ಬಿದ್ದಿದ್ದ. ಅವನ ಕತ್ತು ಹಾಗೂ ಎದೆಯ ಭಾಗಕ್ಕೆ ಇರುದು ಮುಗಿಸಲಾಗಿತ್ತು. ಈ ಸಂಬಂಧ ಆರ್ ಆರ್ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ತಿರದ ಸಿಸಿ ಟಿವಿ ನೋಡಿದಾಗ ಸತೀಶ್ ಮನೆಗೆ ಶುಕ್ರವಾರ ರಾತ್ರಿ ಇಬ್ಬರು ಬಂದಿದ್ದು ಕಾಣಿಸಿದೆ. ಅದೇ ಹಿಂಟ್ ಮೇಲೆ ಸುದರ್ಶನ್ ಹಾಗೂ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ಒಟ್ಟಿನಲ್ಲಿ ದ್ವೇಷದ ಕಾರಣಕ್ಕೆ ಯುವ ನಟನ ಹ’ತ್ಯೆ ಎನ್ನಲಾಗಿದೆ..