Samantha: ಕೋಟಿ ಕೋಟಿ ದುಡಿಯುತ್ತಿರುವ ಸಮಂತಾ ರವರ ಜನಸೇವೆಯ ಬಗ್ಗೆ ನಿಮಗೆಷ್ಟು ಗೊತ್ತು? ಮನುಷ್ಯ ರೂಪದ ದೇವತೆ.

Samantha ತೆಲುಗು ತಮಿಳು ಹಾಗೂ ಬಾಲಿವುಡ್ ನಲ್ಲಿ ಕೂಡ ತನ್ನ ಬೇಡಿಕೆಯನ್ನು ಹೆಚ್ಚು ಮಾಡಿಕೊಂಡಿರುವ ನಟಿ ಸಮಂತಾ(Samantha) ಅವರು ಇಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹೀಗಿದ್ದರೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ‌. ನಿಜಕ್ಕೂ ಅವರ ಧೈರ್ಯ ಹಾಗೂ ಕರ್ತವ್ಯ ನಿಷ್ಠೆಗೆ ನಾವೆಲ್ಲರೂ ತಲೆದೂಗಲೇಬೇಕು. ಸಮಂತಾ ಅವರ ಜೀವನದ ಕೆಲವೊಂದು ಪ್ರಮುಖ ವಿಚಾರಗಳನ್ನು ಜನರು ತಿಳಿಯಲೇಬೇಕು ಅದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ನಟಿ ಸಮಂತಾ ಅವರು ಅತ್ಯಂತ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಡಿಗ್ರಿಗಿಂತ ಮುಂದೆ ಓದಲು ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ಮಾಡ್ಲಿಂಗ್ ಹಾಗೂ ಸಿನಿಮಾ ಕಡೆಗೆ ಅವರು ದುಡಿಯಲು ಬರಬೇಕಾಯಿತು. ಮೊದಲ ಸಿನಿಮಾ ದಿಂದಲೇ ಯಶಸ್ವಿ ನಾಯಕ ನಟಿಯಾಗಿ ಕಾಣಿಸಿಕೊಂಡ ಸಮಂತ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಇಂದಿಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಯನತಾರಾ(Nayanthara) ಅವರನ್ನು ಬಿಟ್ಟರೆ ಅತ್ಯಂತ ಹೆಚ್ಚು ಬೇಡಿಕೆಯನ್ನು ಹಾಗೂ ಸಂಭಾವನೆಯನ್ನು ಪಡೆಯುವಂತಹ ನಟಿ ಅದು ಸಮಂತಾ.

Samantha Ruth Prabhu

ಸಮಂತಾ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಬಂದವರು. ಅದರಲ್ಲೂ ಕರಿಯರ್ ಸ್ಟಾರ್ಟ್ ಮಾಡಿದ್ದ ಆರಂಭದಲ್ಲಿ ಅವರು ಡಯಾಬಿಟಿಸ್ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗೆ ಒಳಗಾಗಿ ಸಂಪೂರ್ಣ ವರ್ಷವನ್ನೇ ಚಿಕಿತ್ಸೆಗಾಗಿ ಇಡಬೇಕಾಯಿತು. ಈ ಸಂದರ್ಭದಲ್ಲಿಯೇ ನಾವಾದರೂ ಪರವಾಗಿಲ್ಲ ಲಕ್ಷ ಲಕ್ಷ ಕೊಟ್ಟು ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತೇವೆ ಆದರೆ ಬಡ ಜನರು ಹೇಗೆ ಇದರಿಂದ ಹೊರಬರಲು ಸಾಧ್ಯ ಎಂಬುದಾಗಿ ಯೋಚಿಸಿ ಪ್ರತ್ಯುಷ(Prathyusha NGO) ಎನ್ನುವ ಎನ್‌ಜಿಓ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ನಟಿ ಸಮಂತ ವಿನಿಯೋಗಿಸುತ್ತಾರೆ.

ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ಮಹಿಳೆಯರು ಹಾಗೂ ಚಿಕ್ಕ ಮಕ್ಕಳಿಗೆ ಈ ಸಂಸ್ಥೆಯ ಮೂಲಕ ಸಂಪೂರ್ಣ ಆರ್ಥಿಕ ಸಹಾಯವನ್ನು ಮಾಡುವಂತಹ ಕಾರ್ಯವನ್ನು ಹಲವಾರು ವರ್ಷಗಳಿಂದ ನಟಿ ಸಮಂತ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಅವರು ಎಲ್ಲರಿಗೂ ಇಷ್ಟ ಆಗೋದು. ಇಂತಹ ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿರುವ ನಟಿ ಸಮಂತಾ(Samantha) ಅವರಿಗೆ ಆ ದೇವರು ಇನ್ನಷ್ಟು ಆಯುಷ್ಯವನ್ನು ಕರುಣಿಸಲಿ.

Leave a Comment

error: Content is protected !!