Salman Khan ಮಂಗಳೂರು ಮೂಲದ ಖ್ಯಾತ ನಟಿಯ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್! ಅವಳನ್ನೇ ಸಲ್ಮಾನ್ ಖಾನ್ ಮದುವೆ ಆಗೋದು ಫಿಕ್ಸ್ ಎಂದ ಜನ.
Salman Khan ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಸಲ್ಮಾನ್ ಖಾನ್(Megastar Salman Khan) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಿಂದಿ ಸಿನಿಮಾರಂಗದಲ್ಲಿಯೇ ನಟಿಸಿಕೊಂಡು ಬಂದಿದ್ದರು ಕೂಡ ಭಾರತದ ಪ್ರತಿಯೊಂದು ಮೂಲೆಯಲ್ಲಿ ಕೂಡ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಅವರ ಆಟಿಟ್ಯೂಡ್ ಹಾಗೂ ಸಿನಿಮಾದಲ್ಲಿ ಮಾಸ್ ಆಗಿ ಕಾಣಿಸಿಕೊಳ್ಳುವ ಅವರ ನಟನೆ ನಿಜಕ್ಕೂ ಪ್ರತಿಯೊಬ್ಬರನ್ನು ಅವರತ್ತ ಆಕರ್ಷಿಸುತ್ತದೆ. ಹೇಗಿದ್ದರೂ ಕೂಡ ಇಂದಿಗೂ ಅವರು ಬ್ಯಾಚುಲರ್ ಆಗಿದ್ದಾರೆ.
ಇನ್ನು ಇತ್ತೀಚಿಗಷ್ಟೇ ನಿಮಗೆ ತಿಳಿದಿರಬಹುದು ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಾ ಜಾನ್(Kisi ka Bhai Kisi Ka Jaan) ಸಿನಿಮಾದಲ್ಲಿ ನಟಿಸಿದ್ದರು ಹಾಗೂ ಈ ಸಿನಿಮಾ ಇನ್ನೇನು ಬಿಡುಗಡೆಗೆ ತಯಾರಾಗಿ ನಿಂತಿದೆ. ಇನ್ನು ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ನಮ್ಮ ಕರಾವಳಿ ಮೂಲದ ಪ್ರಖ್ಯಾತ ನಟಿ ಆಗಿರುವ ಬೆಡಗಿ ಪೂಜಾ ಹೆಗ್ಡೆ(Pooja Hegde) ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಅವರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತದೆ. ಅದಕ್ಕೆ ಉದಾಹರಣೆ ಎನ್ನುವಂತೆ ಈಗ ಮತ್ತೊಂದು ಘಟನೆ ನಡೆದಿದ್ದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಹೌದು ಗೆಳೆಯರೇ ಅದೇನೆಂದರೆ ಸಲ್ಮಾನ್ ಖಾನ್(Salman Khan) ಅವರು ಇತ್ತೀಚಿಗಷ್ಟೇ ಮಂಗಳೂರಿನ(Mangalore) ಮದುವೆ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಅದು ಬೇರೆ ಯಾರದ್ದು ಮದುವೆ ಅಲ್ಲ ಗೆಳೆಯರೇ ಬದಲಾಗಿ ನಟಿ ಪೂಜಾ ಹೆಗ್ಡೆ ಅವರ ಸ್ವಂತ ಸಹೋದರನ ಮದುವೆಗೆ ಸಲ್ಮಾನ್ ಖಾನ್ ಅವರು ಮುಂಬೈನಿಂದ ಮಂಗಳೂರಿಗೆ ಹಾರಿ ಮದುವೆಯನ್ನು ಅಟೆಂಡ್ ಮಾಡಿದ್ದಾರೆ. ಸಲ್ಮಾನ್ ಖಾನ್(Salman Khan) ಮಾಡಿರುವಂತಹ ಈ ಕಾರ್ಯ ಇವರಿಬ್ಬರ ನಡುವೆ ಇರುವಂತಹ ಅವ್ಯಕ್ತ ಪ್ರೀತಿಯನ್ನು ಮತ್ತಷ್ಟು ಜಗಜ್ಜಾಹಿರು ಮಾಡಿದೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.