Pushpa 2: ಪುಷ್ಪ 2 ಸಿನಿಮಾಗೆ ರಶ್ಮಿಕಾಗೆ ಸೆಡ್ಡು ಹೊಡೆಯೋಕೆ ಎಂಟ್ರಿ ನೀಡಿದ ಮತ್ತೊಬ್ಬ ಸ್ಟಾರ್ ನಟಿ ಯಾರು ಗೊತ್ತಾ? ನೀವೇ ನೋಡಿ.

Actress ಸ್ನೇಹಿತರೆ ಪುಷ್ಪ ಸಿನಿಮಾ(Pushpa Film) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಡುಗಡೆಯಾಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದ ಹಲ್ಚಲ್ ಸೃಷ್ಟಿಸಿತ್ತು. ಅಲ್ಲು ಅರ್ಜುನ್(Allu Arjun) ಅವರ ಪುಷ್ಪರಾಜ್ ಪಾತ್ರ ಎಲ್ಲಾ ಕಡೆ ವೈರಲ್ ಆಗಿತ್ತು.

ಎಲ್ಲಕ್ಕಿಂತ ಪ್ರಮುಖವಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಕಾಂಬಿನೇಷನ್ ಕೂಡ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಈಗಾಗಲೇ ಪುಷ್ಪ 2(Pushpa 2 ) ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ಹಲವಾರು ಬದಲಾವಣೆಗಳೊಂದಿಗೆ ಚಿತ್ರತಂಡ ಈ ಬಾರಿ ಕಣಕ್ಕಿಳಿಯುತ್ತಿದೆ. ಚಿತ್ರದ ಕಥೆಯನ್ನು ಕೂಡ ನಿರ್ದೇಶಕ ಸುಕುಮಾರ್ ಬದಲಾಯಿಸಿದ್ದಾರೆ ಎಂಬುದಾಗಿ ಕೂಡ ಸುದ್ದಿ ಆಗಿತ್ತು.

ಇನ್ನು ರಶ್ಮಿಕಾ ಮಂದಣ್ಣ ಅವರಿಗೆ ಪುಷ್ಪಾ 2 ಸಿನಿಮಾದಲ್ಲಿ ಸೆಡ್ಡು ಹೊಡೆಯಲು ಮತ್ತೊಬ್ಬ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ ಕಣಕ್ಕಿಳಿಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಹೌದು ನಾವು ಮಾತನಾಡುತ್ತಿರುವುದು ಪ್ರೇಮಂ ಖ್ಯಾತಿಯ ನಟಿ ಆಗಿರುವ ಸಾಯಿ ಪಲ್ಲವಿ(Sai Pallavi) ಅವರ ಕುರಿತಂತೆ. ಹಾಗಿದ್ದರೆ ಸಾಯಿ ಪಲ್ಲವಿ ಪುಷ್ಪ 2 ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಬಲ್ಲ ಮೂಲಗಳ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಅವರು ಬುಡಕಟ್ಟು ಜನಾಂಗದ ಹುಡುಗಿಯ ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಪಾತ್ರ ಕೇವಲ 10 ನಿಮಿಷಗಳ ಕಾಲ ಸಿನಿಮಾದಲ್ಲಿ ಇರಲಿದ್ದು ಇದಕ್ಕಾಗಿ ಚಿತ್ರಿಕರಣವನ್ನು ಕೂಡ ಈಗಾಗಲೇ ಪೂರೈಸಲಾಗಿದೆ ಎಂಬುದಾಗಿ ಸುದ್ದಿ ಇದೆ. ಇದೇ ಏಪ್ರಿಲ್ 8ಕ್ಕೆ ಅಲ್ಲು ಅರ್ಜುನ್(Allu Arjun) ಅವರ ಬರ್ತಡೆಯ ವಿಶೇಷವಾಗಿ ಪುಷ್ಪಾ 2 ಸಿನಿಮಾದ ಟೀಸರ್ ಬಿಡುಗಡೆ ಆಗಬಹುದು ಎನ್ನುವುದಾಗಿ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Leave a Comment

error: Content is protected !!