ಪುನೀತ್ ದರ್ಶನ್ ಸುದೀಪ್ ಯಶ್ ಶಿವಣ್ಣ ಅಭಿಮಾನಿಗಳೇ ನಿಮಗೆ ಸ್ವಾಭಿಮಾನ ಇದ್ದರೆ ಈ ಕೆಲಸ ಮಾಡಿ ಎಂದು ಗುಡುಗಿದ ರೂಪೇಶ್ ರಾಜಣ್ಣ
ನಮ್ಮ ದೇಶದಲ್ಲಿ ಸಿನಿಮಾ ಹಾಗೂ ಭಾಷೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಭಾಷಾಭಿಮಾನ ಮತ್ತು ಕಲಾಭಿಮಾನ ಜಾಸ್ತಿನೇ ಇದೆ. ಯಾರೂ ಕೂಡ ತಮ್ಮ ಭಾಷೆಯನ್ನು ಸುಲಭವಾಗಿ ಬಿಟ್ಟುಕೊಡಲು ಇಚ್ಛಿಸುವುದಿಲ್ಲ. ನಾವು ಕನ್ನಡಿಗರು ವಿಶಾಲ ಹೃದಯದವರು. ಬೇರೆ ಭಾಷೆಯನ್ನು ಗೌರವಿಸಿ ಪ್ರೀತಿಸುವವರು. ಆದರೆ ನಮ್ಮ ಭಾಷೆಯ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ.
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಭಾಷೆಯ ಜನರೇ ಹೆಚ್ಚಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುವವರೆ ಜಾಸ್ತಿ ಇದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿದ್ದರೂ ಕೂಡ ಮೂಲ ಭಾಷೆಯ ಸಿನಿಮಾಗಳನ್ನು ಮೂಲಭಾಷೆಯಲ್ಲಿ ನೋಡುವಷ್ಟು ಜನ ಬೆಂಗಳೂರಿನಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಭಾಷೆಯ ಪುಷ್ಪ ಚಿತ್ರ ಬಿಡುಗಡೆಯಾಗಿತ್ತು.
ಪುಷ್ಪ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಕನ್ನಡದಲ್ಲಿ ಕೂಡ ಬಿಡುಗಡೆ ಮಾಡಿದ್ದರು. ಆದರೆ ಕರ್ನಾಟಕದ ಥಿಯೇಟರ್ ಗಳಲ್ಲಿ ತೆಲುಗು ಭಾಷೆಯನ್ನೇ ಹಾಕಿದ್ದರು. ಆಗ ಕನ್ನಡಿಗರೆಲ್ಲ ವಿರೋಧ ವ್ಯಕ್ತಪಡಿಸಿದರೂ ಕೂಡ ಏನೂ ಉಪಯೋಗವಾಗಲಿಲ್ಲ. ದಿನೇ ದಿನೆ ಬರುತ್ತಾ ಇದು ಅತಿರೇಕಕ್ಕೆ ಹೋಗುತ್ತಿದೆ. ಇದೀಗ ತೆಲುಗು ಭಾಷೆಯ RRR ಸಿನಿಮಾ ಕೂಡ ಬಿಡುಗಡೆಯಾಗಲಿದೆ.
ಈ ಚಿತ್ರ ಕೂಡ ಕನ್ನಡ ಭಾಷೆಯಲ್ಲಿ ಡಬ್ ಆಗಿದೆ ಆದರೆ ಕರ್ನಾಟಕದ ಯಾವುದೇ ಥಿಯೇಟರ್ ಬಳಿ ಈ ಚಿತ್ರವನ್ನು ಪ್ರಸಾರ ಮಾಡೋ ಹಂಗೆ ಕಾಣ್ತಿಲ್ಲ ತೆಲುಗು ಭಾಷೆಯಲ್ಲಿಯೇ ನಾವೆಲ್ಲ ನೋಡಬೇಕಾದ ದುಸ್ಥಿತಿ ಬಂದಿದೆ. ಅಷ್ಟೇ ಅಲ್ಲ ಈ ಚಿತ್ರ ಬಿಡುಗಡೆ ಆಗುತ್ತೆ ಅಂತ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರ ಕೂಡ ಎತ್ತಂಗಡಿಯಾಗಲಿದೆ. ಇದೇ ವಿಚಾರವಾಗಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕೆಂಡಾಮಂಡಲವಾಗಿದ್ದಾರೆ.
ಕನ್ನಡಕ್ಕೆ ಆಗುತ್ತಿರುವ ಅವಮಾನವನ್ನು ಕಂಡೂ ಇನ್ಮುಂದೆ ನಾನು ಕೈಕಟ್ಟಿ ಕೂರುವುದಿಲ್ಲ ಎಂದು ರೂಪೇಶ್ ರಾಜಣ್ಣ ಗುಡುಗಿದ್ದಾರೆ. ಇನ್ಮೇಲೆ ಕರ್ನಾಟಕದಲ್ಲಿ ಬೇರೆ ಭಾಷೆ ಚಿತ್ರಗಳು ಕನ್ನಡದಲ್ಲಿಯೇ ತೆರೆ ಕಾಣಬೇಕು ಇದಕ್ಕೆ ಪ್ರತಿಯೊಬ್ಬ ಕನ್ನಡಿಗನೂ ಸಪೋರ್ಟ್ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ನೀವೆಲ್ಲಾ ಯಶ್ ಸುದೀಪ್ ದರ್ಶನ್ ಹಾಗೂ ಪುನೀತ್ ಅವರ ಅಭಿಮಾನಿಗಳೇ ಆಗಿದ್ದರೆ ತೆಲುಗು ಭಾಷೆಯ ಚಿತ್ರವನ್ನು ತೆಲುಗು ಭಾಷೆಯಲ್ಲಿ ನೋಡಲಿಕ್ಕೆ ಹೋಗಬೇಡಿ. ಕರ್ನಾಟಕದಲ್ಲಿ ಬಿಡುಗಡೆಯಾಗುವ ತೆಲುಗು ಚಿತ್ರಗಳನ್ನು ಕನ್ನಡ ದಲ್ಲಿಯೇ ನೋಡಿ ಎಂದು ರಾಜಣ್ಣ ವಿನಂತಿಸಿಕೊಂಡಿದ್ದಾರೆ.
ಬೇಸರದ ಸಂಗತಿಯೇನೆಂದರೆ RRR ಸಿನಿಮಾದ ರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಅವರೇ ಅತಿಥಿಯಾಗಿ ಬಂದಿದ್ದು. ಕಾರ್ಯಕ್ರಮಕ್ಕೆ ಬಂದ ಶಿವರಾಜ್ ಕುಮಾರ್ ಅವರು ಚಿತ್ರ ತಂಡದವರ ಬಳಿ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಶಿವಣ್ಣ ಅವರು ಬೇಡಿಕೊಂಡಿದ್ದರು ಸಹ ಈ ಸಿನಿಮಾ ತಂಡದವರು ಒಂದೇ ಒಂದು ಥಿಯೇಟರ್ ನಲ್ಲಿ ಕೂಡ ಕನ್ನಡ ಭಾಷೆಯಲ್ಲಿ ರಿಲೀಸ್ ಮಾಡಲಿಲ್ಲ. ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳದೇ ಇದ್ದರೆ ಕನ್ನಡ ಭಾಷೆಯ ಉಳಿವು ಅಸಾಧ್ಯ.