Rishika Singh ಒಂದು ಕಾಲದ ಕನ್ನಡದ ಟಾಪ್ ನಟಿ.ರಿಷಿಕಾ ಸಿಂಗ್ ಪರಿಸ್ಥಿತಿ ಈಗ ಚಿಂತಾಜನಕ; ಏನಾಗಿದೆ ಗೊತ್ತಾ?

Rishika Singh ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ರಿಷಿಕಾ ಸಿಂಗ್ ಅವರು ನಂತರ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ರಿಷಿಕಾ ಸಿಂಗ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟ ಡೆಡ್ಲಿ ಆದಿತ್ಯ ಹಾಗೂ ನಿರ್ದೇಶಕ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳಾಗಿದ್ದಾರೆ. ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಂಡಿದ್ದ ರಿಷಿಕ ಸಿಂಗ್ ಮತ್ತೆ ಹೆಚ್ಚಾಗಿ ಇದುವರೆಗೂ ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ.

ಅದರಲ್ಲೂ ವಿಶೇಷವಾಗಿ ನಟಿಗೆ ರಿಷಿಕ ಸಿಂಗ್ ಕಳ್ಳ ಮಳ್ಳ ಸುಳ್ಳ ಕಂಠೀರವ ಕಠಾರಿವೀರ ಸುರಸುಂದರಾಂಗಿ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನೂ ಕೂಡ ನೆನಪಿನಲ್ಲಿದ್ದಾರೆ. ಇನ್ನು ಈಗ ಅವರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಅವರೇ ಸ್ವತಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪರಿಸ್ಥಿತಿಯನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಮರುಗಿ ಕಣ್ಣೀರು(Cry) ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

Rishika Singh

ಹೌದು ಮಿತ್ರರೇ ನಟಿ ರಿಷಿಕ ಸಿಂಗ್ ಅವರು ಎರಡು ವರ್ಷಗಳ ಹಿಂದೆಯಷ್ಟೇ ನೀಲಗಿರಿ ಮರಕ್ಕೆ ಕಾರಿನಿಂದ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಅವರ ಬೆನ್ನು ಹಾಗೂ ಕಾಲಿನ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಎದ್ದುನಿಂತು ನಡೆಯಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ರಿಷಿಕಾ ಸಿಂಗ್ ತಲುಪಿದ್ದರು. ಮತ್ತೆ ಅವರು ತಮ್ಮ ಜೀವನದಲ್ಲಿ ತಮ್ಮ ಸ್ವಂತ ಬಲದಿಂದ ನಿಂತುಕೊಳ್ಳುವ ಶಕ್ತಿಯನ್ನು ಹೊಂದಲು ಸಾಧ್ಯವೇ ಇಲ್ಲ ಎಂಬುದಾಗಿ ಎಲ್ಲರೂ ಕೂಡ ಲೆಕ್ಕಾಚಾರ ಹಾಕಿದ್ದರು. ಬೆನ್ನು ಮೂಳೆಗೆ ಬಲವಾಗಿ ಪೆ’ಟ್ಟು ಬಿದ್ದ ಹಿನ್ನೆಲೆಯಲ್ಲಿ ಹಾಸಿಗೆ ಸೇರಿದ್ದ ರಿಷಿಕಾ ಸಿಂಗ್ ಅವರ ಪರಿಸ್ಥಿತಿ(Situation) ಶೋಚನೀಯವಾಗಿತ್ತು.

ನಂತರ ಈಗ ವೈದ್ಯರ ಚಿಕಿತ್ಸೆಯ ಕಾರಣದಿಂದಾಗಿ ವೀಲ್ ಚೇರ್(Wheelchair) ನಲ್ಲಿ ಓಡಾಡುತ್ತಿದ್ದ ರಿಷಿಕ ಸಿಂಗ್ ಈಗ ಕೋಲುಗಳ ಸಹಾಯದಿಂದ ನಡೆಯಲು ಕೂಡ ಸಾಧ್ಯ ವಾಗುವಂತಾಗಿದೆ ಎಂಬುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ನಗುನಗುತ್ತಾ ಇದ್ದ ನಟಿ ರಿಷಿಕಾ ಸಿಂಗ್ ಮತ್ತೆ ಅದೇ ಖುಷಿಗೆ ಮತ್ತೊಮ್ಮೆ ಮರಳಲ್ಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಶುಭ ಹಾರೈಸುವ ಮೂಲಕ ಹಾರೈಸೋಣ.

Leave a Comment

error: Content is protected !!