Rishab Shetty: ಮದುವೆ ಆನಿವರ್ಸರಿ ದಿನದಂದು ಫೋಟೋ ಹಂಚಿಕೊಂಡು ರಿಷಬ್ ಶೆಟ್ಟಿ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತಾ?

Rishab Shetty; ಒಂದು ಕಾಲದಲ್ಲಿ ಕೇವಲ ಒಬ್ಬ ನಟ ಅಥವಾ ಒಬ್ಬ ನಿರ್ದೇಶಕವಾಗಿದ್ದ ರಿಷಬ್ ಶೆಟ್ಟಿ(Rishab Shetty) ಅವರನ್ನು ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ಪ್ರತಿಯೊಬ್ಬರೂ ಕೂಡ ಡಿವೈನ್ ಸ್ಟಾರ್(Devine Star) ಎನ್ನುವುದಾಗಿ ಕರೆಯುತ್ತಿದ್ದಾರೆ. ಇದು ಅವರ ಪ್ರತಿಭೆಗೆ ಕಲಾರಸಿಕರು ನೀಡಿದಂತಹ ದೊಡ್ಡ ಗೌರವ ಎಂದೇ ಹೇಳಬಹುದಾಗಿದೆ.

ಕಾಂತಾರ(Kantara) ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಕನ್ನಡ ಸಿನಿಮಾ ರಂಗದ ಗೆಲುವು ಎನ್ನುವುದಾಗಿ ಭಾವಿಸಬಹುದು. ಇದಕ್ಕಾಗಿ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡ ಪಟ್ಟಿರುವ ಕಷ್ಟಕ್ಕೆ ಸರಿಯಾದ ಪ್ರತಿಫಲವೇ ದೊರಕಿದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾ ನೂರು ದಿನದ ಕಾರ್ಯಕ್ರಮವನ್ನು ಕೂಡ ಅದ್ದೂರಿಯಾಗಿ ಹಮ್ಮಿಕೊಂಡು ಸುದ್ದಿ ಮಾಡಿತ್ತು.

Rishab Shetty wife

ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರು ಕಾಂತಾರ ಸಿನಿಮಾದ ಎರಡನೇ ಭಾಗವನ್ನು ನೀವೆಲ್ಲರೂ ಈಗಾಗಲೇ ನೋಡಿದ್ದೀರಿ. ಮುಂದೆ ಬರಲಿರುವ ಸಿನಿಮಾ ಇದರ ಹಿಂದಿನ ಭಾಗ ಅಂದರೆ ಆರಂಭಿಕ ವಿಚಾರಗಳನ್ನು ಹೊಂದಿರುತ್ತದೆ ಎಂಬುದಾಗಿ ಆಶ್ಚರ್ಯಕರ ಹೇಳಿಕೆಯನ್ನು ನೀಡಿ ಪ್ರೇಕ್ಷಕರಲ್ಲಿ ಸಿನಿಮಾದ ಕುರಿತಂತೆ ಇನ್ನಷ್ಟು ಹೆಚ್ಚಿನ ನಿರೀಕ್ಷೆಗಳು ಮೂಡುವಂತೆ ಮಾಡಿದ್ದಾರೆ. ಇನ್ನು ಫೆಬ್ರವರಿ 10ರಂದು ತಮ್ಮ ಮದುವೆಯ ಆನಿವರ್ಸರಿಯನ್ನು ಆಚರಿಸಿಕೊಂಡು ಪೋಸ್ಟ್ ಮಾಡಿದ್ದಾರೆ.

ಹೌದು ಮಿತ್ರರೇ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ(Pragathi Shetty) ಅವರ ಜೊತೆಗೆ ಇರುವಂತಹ ಫೋಟೋವನ್ನು ರಿಷಬ್ ಶೆಟ್ಟಿ ಹಂಚಿಕೊಂಡು, ಪರಿಚಯದಿಂದ ಸ್ನೇಹ ಸ್ನೇಹದಿಂದ ಪ್ರೀತಿ ಪ್ರೀತಿಯಿಂದ ದಾಂಪತ್ಯ. ದಾಂಪತ್ಯಕ್ಕೆ ಇಂದು ವಾರ್ಷಿಕೋತ್ಸವದ ಸಂಭ್ರಮ ಎಂಬುದಾಗಿ ಬರೆದುಕೊಂಡಿದ್ದಾರೆ. ಇನ್ನು ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

Leave a Comment

error: Content is protected !!