Anushka Shetty: ಅನುಷ್ಕಾ ಶೆಟ್ಟಿ ಮಾಡಿಕೊಂಡ ಅದೊಂದು ಯಡವಟ್ಟು ಅವರ ಮುಖ ಹಾಳಾಗುವಂತಾಯ್ತು! ಅಲ್ಲಿ ನಿಜಕ್ಕೂ ನಡೆದಿದ್ದೇನು?

Anushka Shetty ಕನ್ನಡ ಮೂಲದ ಪರಭಾಷಾ ನಟಿಯರಲ್ಲಿ ಪುತ್ತೂರು ಮೂಲದ ಅನುಷ್ಕಾ ಶೆಟ್ಟಿ(Anushka Shetty Actress) ಅವರು ಕೂಡ ಒಬ್ಬರಾಗಿದ್ದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿರುವ ಬಹುಬೇಡಿಕೆಯ ನಟಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಸಂಪೂರ್ಣವಾಗಿ ಅವಕಾಶ ಕಡಿಮೆಯಾಗಿ ಹೋಯಿತು ಎಂದರು ಕೂಡ ತಪ್ಪಾಗಲಾರದು.

ಇದಕ್ಕೆ ಕಾರಣ ಅವರ ಮುಖ ವಿರೂಪವಾಗಿರುವಂತಹ ರೀತಿ. ಒಂದು ಕಾಲದಲ್ಲಿ ಬಳಕುವ ಬಳ್ಳಿಯಂತೆ ಇದ್ದಂತಹ ಅನುಷ್ಕಾ ಶೆಟ್ಟಿ ಅವರು ತಾವು ಮಾಡಿಕೊಂಡ ಎಡವಟ್ಟು ನಿರ್ಧಾರದಿಂದಾಗಿ ದಪ್ಪವಾಗಿ ಕಾಣುವಂತಾಯಿತು. ಸಿನಿಮಾ ರಂಗದಲ್ಲಿ ನಟಿಯರಿಗೆ ಸುಂದರವಾಗಿದ್ದರೆ ಮಾತ್ರ ಅವಕಾಶ ನೀಡುವಂತಹ ಕಾಲ ಚಿತ್ರರಂಗದಲ್ಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕಾಣುತ್ತಿರುವ ರೀತಿ ಕೂಡ ಅದಕ್ಕೆ ತದ್ವಿರುದ್ಧವಾಗಿರುವುದರಿಂದ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಹೋಯಿತು.

ಸೈಜ್ ಜೀರೋ(Size zero Film) ಎನ್ನುವ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ಅವರು ತುಂಬಾ ದಪ್ಪವಾಗಿರುತ್ತಾರೆ. ಅದಾದ ನಂತರ ಮುಂದಿನ ಸಿನಿಮಾ ಗಾಗಿ ಅವರು ತೆಳ್ಳಗಾಗಬೇಕಾಗಿತ್ತು ಹೀಗಾಗಿ ಸರ್ಜರಿ ಪದ್ಧತಿಯ ಅನುಸಾರವಾಗಿ ತೂಕವನ್ನು ಕಳೆದುಕೊಳ್ಳುತ್ತಾರೆ ಆದರೆ ಇದೇ ಸಂದರ್ಭದಲ್ಲಿ ಅವರಿಗೆ ಇದು ವ್ಯತಿರಿಕ್ತ ಪರಿಣಾಮವನ್ನು ನೀಡಲು ಪ್ರಾರಂಭ ಮಾಡುತ್ತದೆ. ಅದಾದ ನಂತರ ಬರುತ್ತಿದ್ದಂತಹ ಎಲ್ಲಾ ಸಿನಿಮಾಗಳನ್ನು ಕೂಡ ಅವರೇ ರಿಜೆಕ್ಟ್ ಮಾಡುತ್ತಿದ್ದರು.

ಹೀಗೆ ರಿಜೆಕ್ಟ್ ಮಾಡುತ್ತಾ ಬಹುತೇಕ ಎಲ್ಲಾ ಸಿನಿಮಾಗಳು ಅವರ ಕೈಯಿಂದ ತಪ್ಪಿ ಹೋಗುತ್ತವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸರಿಯಾಗಿ ಲೆಕ್ಕಾಚಾರ ಹಾಕಿ ಗಮನಿಸಿದರೆ ಅನುಷ್ಕಾ ಶೆಟ್ಟಿ(Anushka Shetty) ನಟಿಸಿರುವುದು ಕೇವಲ 2 ರಿಂದ 3 ಸಿನಿಮಾಗಳಲ್ಲಿ ಮಾತ್ರ. ಸಿನಿಮಾಗಾಗಿ ಅಸಹಜ ಪದ್ಧತಿಯ ಮೂಲಕ ತೂಕ ಏರಿಸುವುದು ಹಾಗೂ ಇಳಿಸಿಕೊಳ್ಳುವುದನ್ನು ಮಾಡುವಂತಹ ಸೆಲೆಬ್ರಿಟಿಗಳಿಗೆ ಇದೊಂದು ಪಾಠವಾಗಿರಲಿದೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.