ನಟಿ ಜಯಪ್ರದಾ ಅವರು ಇಂದಿಗೂ ಏಕಾಂಗಿಯಾಗಿ ಕಾಲ ಕಳೆಯುತ್ತಿರಲು ಕಾರಣವೇನು ಗೊತ್ತಾ?? ಅರವತ್ತು ವರ್ಷವಾದರೂ ವೈವಾಹಿಕ ಜೀವನದಲ್ಲಿ ಕಾಲಿಡಲಿಲ್ಲವೇಕೆ!

ಭಾರತೀಯ ಚಿತ್ರರಂಗದ ನಟಿಯಾಗಿ ಗುರುತಿಸಿಕೊಂಡಿರುವ ಜಯಪ್ರದಾ ಅವರು ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ನಟಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರ್ ಭಾಗದಲ್ಲಿ ಪಾರ್ಲಿಮೆಂಟ್ನ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ರಂಗದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ ಇವರು ಶಾಲಾ ಕಾಲೇಜುಗಳ ಸಭೆ ಸಮಾರಂಭಗಳಲ್ಲಿ ತಮ್ಮ ಸುಂದರವಾದ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕರೊಬ್ಬರು ಚಿತ್ರದಲ್ಲಿ ಬಣ್ಣ ಹಚ್ಚಿ ನರ್ತನ ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟರು. ಮೂರು ನಿಮಿಷದ ಹಾಡಿಗೆ ಹೆಜ್ಜೆ ಹಾಕಿದ್ದಕ್ಕಾಗಿ ಹತ್ತು ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದರಂತೆ. ಅಲ್ಲಿಂದ ಪ್ರಾರಂಭವಾದ ಜಯಪ್ರದ ಅವರ ಚಿತ್ರರಂಗದ ಪ್ರಯಾಣ ಅವರನ್ನು ಎಲ್ಲಾ ಭಾಷೆಗಳಲ್ಲಿಯೂ ಪರಿಚಯಿಸಿ ಅವರಿಗೆ ಅನೇಕ ಬಿರುದು, ಸನ್ಮಾನಗಳನ್ನು ಗಳಿಸಿಕೊಟ್ಟಿದೆ.

ಸನಾದಿ ಅಪ್ಪಣ್ಣ ಕನ್ನಡ ಚಿತ್ರದಲ್ಲಿ ಬಸಂತಿಯಾಗಿ ಕಾಣಿಸಿಕೊಂಡು ಕರ್ನಾಟಕದ ಜನತೆಗೆ ಪ್ರಿಯವಾದರು. ಹುಲಿಯ ಹಾಲಿನ ಮೇವು, ಶಬ್ದವೇದಿ, ಕವಿರತ್ನ ಕಾಳಿದಾಸ ಚಿತ್ರಗಳಲ್ಲಿ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಜೊತೆಯಾಗಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹಬ್ಬ, ಈ ಬಂಧನ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ.

ವೃತ್ತಿ ಜೀವನದಲ್ಲಿ ಸಾಧನೆ ಮಾಡಿ ಹೆಸರುಗಳಿಸಿರುವ ಜಯಪ್ರದ ಅವರು ತಮ್ಮ ಬಾಳ ಸಂಗಾತಿಯನ್ನು ಆಯ್ದುಕೊಳ್ಳುವಲ್ಲಿ ಸ್ವಲ್ಪ ಎಡವಿದ್ದರು ಎನ್ನಬಹುದು. ವೈವಾಹಿಕ ಜೀವನವು ಇವರಷ್ಟು ಸುಂದರವಾಗಿರಲಿಲ್ಲ. ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಶ್ರೀಕಾಂತ್ ನಹತಾ ಅವರನ್ನು ಬಹಳವಾಗಿ ಇಷ್ಟಪಟ್ಟು ವಿವಾಹವಾಗಲು ಮುಂದಾಗುತ್ತಾರೆ. ಶ್ರೀಕಾಂತ್ ನಹಾತ ಅವರಿಗೆ ಅದಾಗಲೇ ಮದುವೆಯಾಗಿತ್ತು. ಮೂರು ಮಕ್ಕಳ ತಂದೆಯಾಗಿದ್ದರು.

ಮಡದಿ ಮಕ್ಕಳೊಂದಿಗೆ ಜೀವನ ನಡೆಸಿದ ಸಂಸಾರಸ್ಥನೆಂದು ವಿಷಯ ತಿಳಿದು ಕೂಡ ಜಯಪ್ರದಾ ಅವರು ಶ್ರೀಕಾಂತ್ ನಹತಾ ಅವರನ್ನು ವಿವಾಹವಾಗುತ್ತಾರೆ. ಮೊದಲ ಪತ್ನಿಗೆ ಕಾನೂನಾತ್ಮಕವಾಗಿ ವಿಚ್ಛೇದನವನ್ನು ಕೊಡದೆ ಜಯಪ್ರದ ಅವರನ್ನು ಎರಡನೇ ಮಡದಿಯಾಗಿ ಸ್ವೀಕರಿಸಿ ಶ್ರೀಕಾಂತ ಅವರು ಜಯಪ್ರದಾ ಅವರೊಂದಿಗೆ ಬೇರೆಯದೆ ಮನೆಯಲ್ಲಿ ವಾಸಿಸುತ್ತಿದ್ದರು.

ದಿನಗಳು ಉರುಳಿದಂತೆ ಮತ್ತೆ ಮೊದಲನೆಯ ಹೆಂಡತಿಯ ಕಡೆಗೆ ಪ್ರೀತಿ ಹೆಚ್ಚಾಗಿ, ನೆನಪುಗಳು ಕಾಡಿ ಜಯಪ್ರದಾ ಅವರಲ್ಲಿ ತಮ್ಮ ಮೊದಲನೆಯ ಮಡದಿಯನ್ನು ಇದೇ ಮನೆಯಲ್ಲಿ ಇರಿಸಿಕೊಳ್ಳುತ್ತೇನೆಂದರು. ಇದನ್ನು ನಿರಾಕರಿಸಿದ ಜಯಪ್ರದಾ ಮತ್ತು ಅವರ ಪತಿಯ ನಡುವೆ ಕಲಹಗಳು ಪ್ರಾರಂಭವಾಗುತ್ತವೆ. ಶ್ರೀಕಾಂತ್ ನಹತಾ ಅವರು ನಂತರದಲ್ಲಿ ಮೊದಲ ಪತ್ನಿಯೊಂದಿಗೆ ವಾಸಿಸಲು ನಿರ್ಧರಿಸಿ ಜಯಪ್ರದಾ ಅವರನ್ನು ಬಿಟ್ಟು ಮೊದಲ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದ ಜಯಪ್ರದಾ ಅವರು ತಮ್ಮ ಜೀವನವನ್ನು ಏಕಾಂಗಿಯಾಗಿಯೇ ಸಾಗಿಸುತ್ತಿದ್ದಾರೆ. 60 ವರ್ಷ ಕಳೆದರೂ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಡಲಿಲ್ಲ.

Leave a Comment

error: Content is protected !!