ಎರಡು ಮೊಟ್ಟೆಯ ಕಥೆ: ನನ್ನ ಪತ್ನಿಗೆ ಮೊಟ್ಟೆಯನ್ನು ಸರಿಯಾಗಿ ಬೇಯಿಸಲು ಬರುವುದಿಲ್ಲ ಎಂದು ಫೋಟೋವನ್ನು ಶೇರ್ ಮಾಡಿಕೊಂಡ ರವೀಂದ್ರ

ಇತ್ತೀಚಿಗಷ್ಟೇ ವಿವಾಹವಾದ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿಯ ವಿಷಯವು ನೆಟ್ಟಿಗರ ಅಚ್ಚರಿಯ ಸುದ್ದಿಯಾಗಿ ಹರಿದಾಡುತ್ತಿತ್ತು. ಮದುವೆ ಎಂದರೆ ಹೊಸದಾದ ಬಟ್ಟೆ ಧರಿಸಿ ಆಭರಣಗಳನ್ನು ಹಾಕಿಕೊಂಡು, ಎರಡು ಕುಟುಂಬಗಳು ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ. ಇಂತಹ ಸಂದರ್ಭವನ್ನು ಫೋಟೋದಲ್ಲಿ, ವಿಡಿಯೋದಲ್ಲಿ ಸೆರೆಹಿಡಿದು ನೆನಪಿಗಾಗಿ ಇಟ್ಟುಕೊಳ್ಳುವುದು ರೂಢಿ.

ಅಂತೆಯೇ ರವೀಂದ್ರ ಹಾಗೂ ಮಹಾಲಕ್ಷ್ಮಿ ಜೋಡಿ ಬೇರೆ ಬೇರೆ ತರನಾದ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಮಿಸ್ ಮ್ಯಾಚ್ ಜೋಡಿ ಎಂದು ಫೇಮಸ್ ಆಗಿತ್ತು.

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗ ಹಿಡಿದು ಉತ್ತಮ ಸಂಪಾದನೆ ಮಾಡಲು ಪ್ರಯತ್ನ ಪಡುತ್ತಿರುತ್ತಾರೆ. ಇವೆಲ್ಲದರ ಮಧ್ಯೆ ಕೆಲವು ಹೆಣ್ಣು ಮಕ್ಕಳು ಅಡುಗೆ ಮನೆಯ ಕಡೆ ಆಸಕ್ತಿಯನ್ನು ಅಷ್ಟಾಗಿ ತೋರಿಸುವುದಿಲ್ಲ ಅಥವಾ ಒಂದಿಷ್ಟು ಖಾದ್ಯಗಳನ್ನು ಮಾಡಲು ಕಲಿತಿರುತ್ತಾರಷ್ಟೆ. ರವೀಂದ್ರರವರ ಪತ್ನಿ ಮಹಾಲಕ್ಷ್ಮಿ ಏನನ್ನು ತಯಾರಿಸಲು ಹೋಗಿ ಎಡವಟ್ಟು ಮಾಡಿದ್ದಾರೆ ಎಂಬುದನ್ನು ನೀವೇ ಓದಿ…

ವಿವಾಹವಾದ ನಂತರ ಬೇರೆ ಬೇರೆ ಹೋಟೆಲ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರವೀಂದ್ರ ಮತ್ತು ಮಹಾಲಕ್ಷ್ಮಿ ಜೋಡಿಯು ಆಗಾಗ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಳ್ಳುತ್ತಿತ್ತು. ಮದುವೆಯ ನಂತರ ರವೀಂದ್ರರವರು ಶೂಟಿಂಗ್ ನಡೆಯುವ ಸ್ಥಳಕ್ಕೆ ಹಲವಾರು ದಿನ ತಮ್ಮ ಮನೆಯಿಂದಲೇ ಊಟವನ್ನು ಕಟ್ಟಿಕೊಂಡು ಬಂದಿದ್ದರಂತೆ. ಹೋಟೆಲ್ ಊಟ ಸಾಕಾಗಿ ರವೀಂದ್ರ ಅವರಿಗೆ ತಮ್ಮ ಪತ್ನಿಯ ಕೈ ರುಚಿಯನ್ನು ತಿನ್ನಬೇಕು ಎಂದೆನಿಸಿರಬೇಕು; ಅದಕ್ಕಾಗಿ ಮಹಾಲಕ್ಷ್ಮಿಯವರು ಮೊಟ್ಟೆಯನ್ನು ಬೇಯಿಸುವ ಪ್ರಯತ್ನ ಮಾಡಿದ್ದಾರೆ.

ಮಹಾಲಕ್ಷ್ಮಿ ಅವರು ಎರಡು ಮೊಟ್ಟೆಗಳನ್ನು ಬೇಯಿಸಲು ಇಟ್ಟಿದ್ದರು. ಇವರು ಸರಿಯಾಗಿ ಬೆಂದಿದೆಯೇ? ಇಲ್ಲವೇ? ಎಂದು ಪರೀಕ್ಷಿಸದ ಕಾರಣ ಎರಡು ಮೊಟ್ಟೆಗಳು ಸೀದೋಗಿವೆ. ಸೀದು ಹೋದ ಆ ಎರಡು ಮೊಟ್ಟೆ ಇರುವ ಫೋಟೋವನ್ನು ರವೀಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತ್ನಿ ಮಾಡಿದ ಎಡವಟ್ಟನ್ನು ತಮಾಷೆಯಾಗಿ ಬರೆದುಕೊಂಡಿದ್ದಾರೆ. ‘ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ಕಂಡಿಲ್ಲ; ನ್ಯೂ ಲೈಫ್ ಮೈ ವೈಫ್’ ಎಂದು ಬರೆದುಕೊಂಡಿದ್ದಾರೆ. ರವೀಂದ್ರವರು ಹಂಚಿಕೊಂಡಿರುವ ಈ ಎರಡು ಸೀದು ಹೋದ ಮೊಟ್ಟೆಯ ಫೋಟೋದಿಂದಾಗಿ ನೆಟ್ಟಿಗರು ಮಹಾಲಕ್ಷ್ಮಿಯವರ ಅಡುಗೆ ಅವಾಂತರವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರಂತೆ. ಮಹಾಲಕ್ಷ್ಮಿ ಅವರ ಕುಕಿಂಗ್ ಸ್ಕಿಲ್ಸ್ ಚೆನ್ನಾಗಿದೆ ಎಂದು ನಿಮಗೂ ಅನಿಸಿರಬೇಕಲ್ಲವೇ??

Leave a Comment

error: Content is protected !!