ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸುತ್ತಾರೆ. ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾರೆ. ವರ್ಷಕ್ಕೆ ಕೋಟಿ ಕೋಟಿಗಟ್ಟಲೆ ಆದಾಯ ಪಡೆಯುವ ಸೆಲೆಬ್ರಿಟಿಗಳು ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ನಾವು ಸಾಮಾನ್ಯ ಜನರೆಲ್ಲ ಸೆಲೆಬ್ರಿಟಿಗಳು ತುಂಬ ಐಷಾರಾಮಿ ಜೀವನ ನಡೆಸುತ್ತಾರೆ ಅಂತನೇ ಅಂದುಕೊಂಡಿದ್ದೇವೆ. ಆದರೆ ಎಲ್ಲ ಸೆಲೆಬ್ರಿಟಿಗಳ ಜೀವನವು ಒಂದೇ ರೀತಿ ಇರಲ್ಲ . ಸೆಲೆಬ್ರಿಟಿಗಳ ಆಗಿದ್ದರೂ ಕೂಡ ಸಾಮಾನ್ಯ ಜನರಂತೆ ಬದುಕುವ ಯುವ ನಟರು ಕೂಡಾ ನಮ್ಮಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿಮಗೆಲ್ಲಾ ಗೊತ್ತು.ರವಿಚಂದ್ರನ್ ಅವರಿಗೆ ಇಬ್ಬರು ಗಂಡು ಮಕ್ಕಳು ಮನೋಹರ್ ಮತ್ತು ವಿಕ್ರಮ್. ರವಿಚಂದ್ರನ್ ಅವರು ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಜನಪ್ರಿಯತೆ ಗಳಿಸಿರುವ ನಟ ಮತ್ತು ನಿರ್ದೇಶಕ ಮತ್ತು ನಿರ್ಮಾಪಕ. ತಂದೆ ಇಷ್ಟೊಂದು ಹೆಸರು ಮಾಡಿದ್ದರೂ ಕೂಡ ರವಿಚಂದ್ರನ್ ಅವರ ಮಕ್ಕಳು ದುಬಾರಿ ಜೀವನವನ್ನು ನಡೆಸುವುದಿಲ್ಲವಂತೆ. ಒಬ್ಬ ಸಾಮಾನ್ಯ ಮನುಷ್ಯ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾನೆ ಅಷ್ಟೇ ಖರ್ಚು ರವಿಚಂದ್ರನ್ ಅವರ ಮಕ್ಕಳು ಕೂಡ ಮಾಡ್ತಾರೆ.

ಈ ಸತ್ಯವನ್ನು ಸ್ವತಃ ರವಿಚಂದ್ರನ್ ಅವರ ಮಗ ವಿಕ್ರಂ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಒಂದು ತಿಂಗಳಿಗೆ ನಟ ವಿಕ್ರಂ ಅವರು ಖರ್ಚು ಮಾಡಿದ ಹಣವೆಷ್ಟು ಎಂದು ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅವರ ಮಕ್ಕಳು ತಿಂಗಳಿಗೆ ಖರ್ಚು ಮಾಡುವ ಹಣದ ಮೊತ್ತವನ್ನು ಕೇಳಿದರೆ ನಿಮಗೆ ಪಕ್ಕಾ ಆಶ್ಚರ್ಯ ಆಗುತ್ತೆ. ಯಾಕೆಂದರೆ ರವಿಚಂದ್ರನ್ ಅವರ ಮಕ್ಕಳು ತಿಂಗಳಿಗೆ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ಖರ್ಚು ಮಾಡುತ್ತಾರಂತೆ. ಹೌದು ಸ್ನೇಹಿತರೆ ಇದು ನಂಬಲು ಸಾಧ್ಯವಾಗದಿದ್ದರೂ ನಿಜ.

ರವಿಚಂದ್ರನ್ ಅವರಂತಹ ದೊಡ್ಡ ನಟನ ಮಕ್ಕಳಾಗಿ ಅಲ್ಲದೆ ಕನ್ನಡ ಚಿತ್ರರಂಗದ ಯುವನಟ ರಾಗಿ ತಿಂಗಳಿಗೆ ಐದರಿಂದ ಹತ್ತು ಸಾವಿರ ರುಪಾಯಿಗಳನ್ನು ಖರ್ಚು ಮಾಡುತ್ತಾರೆ ಅಂದ್ರೆ ನಿಜಕ್ಕೂ ನಂಬೋಕೆ ಆಗಲ್ಲ.ಅದು ಹೇಗೆ ಸಾಧ್ಯ ಎಂದು ರವಿಚಂದ್ರನ್ ಅವರ ಮಗ ವಿಕ್ರಂ ಬಳಿ ಕೇಳಿದಾಗ ವಿಕ್ರಂ ಅವರು ಹೇಳಿದ್ದು ಏನೆಂದರೆ ನಾನು ಯಾವುದೇ ಪಾರ್ಟಿ ಟ್ರಿಪ್ ಅಂತ ಸ್ನೇಹಿತರ ಜೊತೆ ಹೋಗಲ್ಲ. ಶ್ರೀಮಂತರ ಮಕ್ಕಳ ಹಾಗೆ ನಾವು ಪಾರ್ಟಿ ಪಬ್ ಅಂತ ಸುತ್ತಾಡಲು ಹೋಗೋದಿಲ್ಲ. ವೀಕ್ ಎಂಡ್ ಬಂದಾಗ ಮಸ್ತಿ ಮೋಜು ಮಾಡಲ್ಲ. ಹೊಸ ಹೊಸ ಬಟ್ಟೆಗಳನ್ನು ಖರೀದಿ ಮಾಡೋ ಶೋಕಿ ಇಲ್ಲ.

ನನಗೆ ನಮ್ಮ ತಂದೆ ದೊಡ್ಡ ಆ್ಯಕ್ಟರ್ ಎಂದು ಒಂದ್ಸಲ ಯಾಕೆಂದರೆ ನಾವು ನಮ್ಮ ತಂದೆಯನ್ನು ತಂದೆಯಾಗಿ ನೋಡುತ್ತೇನೆ. ನಮ್ಮ ತಂದೆ ಸೆಲೆಬ್ರಿಟಿ ಅಂತ ನಮಗೆ ಅಹಂಕಾರವಿಲ್ಲ. ಅವರನ್ನು ಸಾಮಾನ್ಯ ತಂದೆಯಾಗಿ ನೋಡುತ್ತೇವೆ ಹೊರತು ನಟನಾಗಿ ನಿರ್ದೇಶಕನಾಗಿ ನೋಡಲ್ಲ. ಹಾಗೆ ನಮ್ಮ ತಾಯಿ ನಮಗೆ ಸಾಮಾನ್ಯವಾಗಿ ಮತ್ತು ಸಿಂಪಲ್ಲಾಗಿ ಬದುಕೋಕೆ ಹೇಳಿಕೊಟ್ಟಿದ್ದಾರೆ. ಯಾವುದೇ ರೀತಿಯ ಕೆಟ್ಟ ಕೆಲಸ ಮಾಡದೆ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಬೇಕೆ೦ದು ನನ್ನ ತಾಯಿ ನನಗೆ ಪಾಠ ಹೇಳಿಕೊಟ್ಟಿದ್ದಾರೆ. ನನಗೆ ಐಷಾರಾಮಿ ಜೀವನದ ಆಸೆಯಿಲ್ಲ ತಿಂಗಳಿಗೆ ಐದು ಸಾವಿರದಲ್ಲಿ ನಿಯತ್ತಾಗಿ ಬದುಕುವ ತಾಕತ್ತು ನನಗಿದೆ ಎಂದು ರವಿಚಂದ್ರನ್ ಅವರ ಮಗ ವಿಕ್ರಂ ಬಹಿರಂಗವಾಗಿ ಹೇಳಿಕೊಂಡಿದ್ದಾರೆ

By admin

Leave a Reply

Your email address will not be published.