ತಂದೆಯ ಮಾತಿಗೆ ಬೆಲೆ ಕೊಟ್ಟು, ಪ್ರೀತಿಸಿದ ಹುಡುಗಿಯನ್ನೇ ಬಿಟ್ಟು ಕೊಟ್ಟ ಸಾಹುಕಾರ. ರವಿಚಂದ್ರನ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ

ಕನ್ನಡ ಚಿತ್ರರಂಗದ ರಸಿಕತೆಯನ್ನು ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಬರಹಗಾರರಾಗಿ, ಹಾಡುಗಾರರಾಗಿ ಸವಿದ ನಟ ರವಿಚಂದ್ರನ್ ಅವರು ಪ್ರೇಮಲೋಕದ ಮೂಲಕ ಪ್ರೀತಿಗೆ ಹೊಸ ಹಾಡುಗಳ ಲೇಪ ಹಚ್ಚಿದವರು. ರಿಮೇಕ್ ಚಿತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಸಿ, ಅಲ್ಲಲ್ಲಿ ತಮ್ಮದೇ ಕುಂಚದ ಕಲೆ ಅರಳಿಸಿ, ‘ರವಿಮೇಕ್’ ಗಳಾಗಿ ಬದಲಾಯಿಸಿರುವುದು ಇವರ ಸಿನಿಮಾ ಪ್ರೇಮದ ಛಾಯೆ. ಜೂಹಿ ಚಾವ್ಲಾ, ಖುಷಬು, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ನಟಿಯರನ್ನು ಕನ್ನಡಕ್ಕೆಳೆದ ಯುಗಪುರುಷ.

ಖ್ಯಾತ ನಿರ್ಮಾಪಕರಾದ ವೀರಸ್ವಾಮಿಯವರಿಗೆ ಜನಿಸಿದ ಪುತ್ರ ರವಿಚಂದ್ರನ್, ಇವರು ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಪ್ರೇಕ್ಷಕರಿಗಾಗಿ ಹಲವಾರು ಚಿತ್ರಗಳನ್ನು ನೀಡಿದ್ದಾರೆ. 1986ರಲ್ಲಿ ಸುಮತಿಯನ್ನು ವಿವಾಹವಾಗಿ ಸುಖದ ಸಂಸಾರ ನಡೆಸುತ್ತಿರುವ ರವಿಚಂದ್ರನ್ ಅವರಿಗೆ ಮನೋರಂಜನ್, ವಿಕ್ರಂ, ಗೀತಾಂಜಲಿ ಎಂಬ ಮೂವರು ಮುದ್ದಿನ ಮಕ್ಕಳಿದ್ದಾರೆ.

ಅಂದಿನ ಕಾಲದಲ್ಲೇ ರಾಮಾಚಾರಿ ಚಿತ್ರವು ಕೆನಡಾದ ಫಿಲಂ ಫೆಸ್ಟ್ ನಲ್ಲಿ ಪ್ರದರ್ಶನಗೊಂಡಿದೆ. ‘ಸುಂದರಿ ಸುಂದರಿ ಸುರ ಸುಂದರಿ ಸುಂದರಿ’ ಎನ್ನುತ್ತಾ ಸುಂದರ ತಾರೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಡುಗಳನ್ನು ರಚಿಸಿ, ಚಿತ್ರಕಥೆಗಳನ್ನು ಹಣೆದು ಪ್ರದರ್ಶಿಸುವುದು ಇವರ ಕಲೆ. ತಂತ್ರಜ್ಞಾನ ಬಣ್ಣಗಳಿಂದ ರಾರಾಜಿಸುವುದು ಇವರ ಚಿತ್ರದಲ್ಲಿಯೇ. ರವಿಚಂದ್ರನ್ ಅವರ ಹೆಚ್ಚಿನ ಚಿತ್ರಗಳಲ್ಲಿ ಪ್ರೀತಿಯ ಅಂಶಗಳನ್ನು ವಿಧವಿಧವಾಗಿ ಬಣ್ಣಿಸಲಾಗುತ್ತದೆ. ರವಿಚಂದ್ರನ್ ಅವರ ನಿಜ ಜೀವನದಲ್ಲಿಯೂ ಒಂದು ಪ್ರೇಮಕಥೆಯಿದ್ದು, ಪ್ರೇಯಸಿಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಪ್ರೀತಿಯ ಸುತ್ತಲಿರುವ ಸಾಧಕ ಬಾಧಕಗಳನ್ನು ಯಥಾವತ್ತಾಗಿ ಚಿತ್ರಿಸುವ ನನಗೆ ಪ್ರೇರಣೆ ಎಂದರೆ ನನ್ನ ಪ್ರೇಯಸಿ. ಆಕೆಯನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಆಕ್ಷನ್ ಅಥವಾ ತ್ರಿಲ್ಲರ್ ಮೂವಿಗಳನ್ನು ನಾನು ಅಷ್ಟಾಗಿ ಮಾಡಿಲ್ಲ. ನನ್ನವಳ ಪ್ರೀತಿಯೇ ನನಗೆ ಸ್ಪೂರ್ತಿ. ಪ್ರೀತಿ ಇಲ್ಲದ ಚಿತ್ರವಿಲ್ಲ. ಸಿನಿಮಾಗಳಲ್ಲಿ ತಾರೆಯರೊಂದಿಗೆ ರೋಮ್ಯಾಂಟಿಕ್ ಸೀನ್ ಗಳಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳುವ ನಾನು ನಿಜ ಜೀವನದಲ್ಲಿ ಆಕೆಯನ್ನು ಎಂದಿಗೂ ಮುಟ್ಟಿದವನಲ್ಲ. ಅಂತಹ ಸ್ವಚ್ಛಂದ ಪ್ರೇಮ ನಮ್ಮದು’ ಎಂದಿದ್ದಾರೆ.

ಅಷ್ಟೇ ಅಲ್ಲದೆ ಅವಳನ್ನೇಕೆ ಮದುವೆಯಾಗಲಿಲ್ಲವೆಂಬ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ…’ನಮ್ಮ ಪ್ರೀತಿಯ ವಿಚಾರವನ್ನು ತಂದೆಯಲ್ಲಿ ಹೇಳಲು ಧೈರ್ಯ ಸಾಕಾಗಲಿಲ್ಲ. ಜಾತಿಯನ್ನು ತುಂಬಾ ನಂಬುವ ತಂದೆಯವರಲ್ಲಿ ಈ ವಿಚಾರ ತಿಳಿಸಿದರೆ ನಿರಾಕರಿಸುತ್ತಾರೆಂಬುದು ನನಗೆ ತಿಳಿದ ವಿಷಯವಾಗಿತ್ತು. ಜಾತಿಯೇ ನಮ್ಮ ಪ್ರೀತಿಗೆ ಮುಳ್ಳಾಯಿತು. ಅವರು ಒಪ್ಪದ ಪ್ರೀತಿಯನ್ನು ವಿವಾಹವಾಗುವುದು ಹೇಗೆ? ನಾನು ನನ್ನ ತಂದೆ ತಾಯಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಇದೇ ಕಾರಣಕ್ಕಾಗಿ ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿ, ತಂದೆ ತೋರಿಸಿದ ಸುಮತಿಯನ್ನು ವಿವಾಹವಾಗಿ ಸಿನಿಮಾಗಳನ್ನು ಮಾಡುತ್ತಾ ಪ್ರೀತಿಯ ಸಂಸಾರದಲ್ಲಿ ಸುಖವಾಗಿದ್ದೇನೆ. ಅವಳು ಅವಳ ಸಂಸಾರದಲ್ಲಿ ಸುಖವಾಗಿದ್ದಾಳೆ’ ಎಂದು ತಮ್ಮ ಲವ್ ಕಹಾನಿಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೇಳಿದ್ದಾರೆ.

Leave a Comment

error: Content is protected !!