ಅದೃಷ್ಟ ಮತ್ತು ಯೋಗ ನಮ್ಮ ಜೀವನವನ್ನೇ ಬದಲಾಯಿಸುತ್ತೆ. ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಬಂದರೆ ಅವರ ಅದೃಷ್ಟ ಹೇಗಿದೆ ನೋಡಿ. ಒಂದೇ ಒಂದು ಕನ್ನಡ ಚಿತ್ರದ ಯಶಸ್ಸಿನಿಂದ ಇಡೀ ಭಾರತವನ್ನೇ ತಿರುವು ಅವಕಾಶ ಒದಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಯಶಸ್ಸು ಗಳಿಸಿದ ರಶ್ಮಿಕಾ ಇದೀಗ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ನಮ್ಮ ದೇಶದ ಎಲ್ಲಾ ದೊಡ್ಡ ದೊಡ್ಡ ಸ್ಟಾರ್ ನಟರ ಜತೆ ಅಭಿನಯಿಸುವ ಅವಕಾಶ ರಶ್ಮಿಕಾಗೆ ಒದಗುತ್ತಿದೆ.

ರಶ್ಮಿಕಾ ಅವರನ್ನು ನ್ಯಾಷನಲ್ ಸ್ಟಾರ್ ಎಂದೇ ಹೇಳಬಹುದು. ಸದ್ಯದ ಮಟ್ಟಿಗೆ ರಶ್ಮಿಕಾ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅದರಲ್ಲೂ ಸ್ಮಿತಾ ಅವರು ನಟಿಸಿರುವ ಸಿನಿಮಾಗಳೆಲ್ಲಾ ದೊಡ್ಡ ದೊಡ್ಡ ಸಿನಿಮಾಗಳೇ. ರಶ್ಮಿಕಾ ಅವರು ಇದೀಗ ಅಮಿತಾಭ್ ಬಚ್ಚನ್ ಅವರ ಜೊತೆ ಹಿಂದಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗೆ ಇದರ ಜೊತೆಜೊತೆಗೇ ತಮಿಳುನಾಡಿನ ದೊಡ್ಡ ನಟನಾದ ದಳಪತಿ ವಿಜಯ್ ಅವರ ಜೋತೆ ಸಿನಿಮಾ ಶುರು ಮಾಡಿದ್ದಾರೆ.

ರಶ್ಮಿಕಾ ಅವರಿಗೆ ಮೊದಲಿನಿಂದಲೂ ತಮಿಳು ನಟ ವಿಜಯ್ ಅವರ ಮೇಲೆ ಕ್ರಷ್ ಇತ್ತ೦ತೆ. ವಿಜಯ್ ಅವರ ಜೊತೆ ನಾನು ಪ್ರೀತಿಸುತ್ತಿರುವುದು ನನ್ನ ಡ್ರೀಮ್ ಕಮ್ ಟ್ರು ಎಂದು ಹೇಳಿಕೊಂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ಈ ಹೊಸ ಚಿತ್ರಕ್ಕೆ ತೆಲುಗಿನ ವಂಶಿ ಅವರು ನಿರ್ದೇಶನ ಮಾಡಲಿದ್ದಾರೆ. ಹಾಗೆ ರಾಜು ಅವರು ಈ ಚಿತ್ರದ ಪ್ರೊಡ್ಯೂಸರ್. ತುಂಬಾ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಬಜೆಟ್ ಹೂಡಿಕೆ ಮಾಡಲಾಗಿದೆ.

ಬಲ್ಲ ಮೂಲಗಳ ಪ್ರಕಾರ ನಟ ವಿಜಯ್ ಅವರು ಈ ಚಿತ್ರಕ್ಕೆ 116 ಕೋಟಿ ರುಪಾಯಿಗಳ ಸಂಭಾವನೆ ತೆಗೆದುಕೊಂಡಿದ್ದಾರಂತೆ. ವಿಜಯ್ ಅವರು ಇಷ್ಟು ತೆಗೆದುಕೊಳ್ಳಬೇಕಿದ್ದರೆ ಇನ್ನು ರಶ್ಮಿಕಾ ಅವರು ಕೂಡ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ. ರಶ್ಮಿಕಾ ಅವರು ತಮ್ಮ ಹಿಂದಿನ ಚಿತ್ರ ಪುಷ್ಪಾ ಚಿತ್ರಕ್ಕೆ ಒಟ್ಟಾರೆ ಹತ್ತು ಕೋಟಿ ರುಪಾಯಿಗಳ ಸಂಭಾವನೆ ಪಡೆದಿದ್ದರು. ಪುಷ್ಪ ಮೊದಲನೆಯ ಭಾಗಕ್ಕೆ ನಾಲ್ಕು ಕೋಟಿ ಪಡೆದಿದ್ದಾರೆ ಹಾಗೆ ಎರಡನೆಯ ಭಾಗಕ್ಕೆ ಆರು ಕೋಟಿ ರುಪಾಯಿಗಳ ಸಂಭಾವನೆ ಪಡೆಯಲಿದ್ದಾರೆ.

ಇದೀಗ ರಶ್ಮಿಕಾ ತನ್ನ ಜನಪ್ರಿಯತೆ ಹೆಚ್ಚಿದಂತೆ ತನ್ನ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಮುಂಚೆ ಒಂದು ಸಿನಿಮಾಗೆ ಸರಿಸುಮಾರು ಮೂರರಿಂದ ಐದು ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಆದರೆ ಇದೀಗ ವಿಜಯ್ ಅವರ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ಆರೂವರೆ ಕೋಟಿ ರುಪಾಯಿಗಳ ಬೇಡಿಕೆ ಇಟ್ಟಿದ್ದಾರೆ. ಹಾಗೆ ಇನ್ಮೇಲೆ ರಶ್ಮಿಕಾ ಅವರು ಪ್ರತಿ ಸಿನಿಮಾ ಆರು ಕೋಟಿಗೂ ಹೆಚ್ಚು ರುಪಾಯಿಗಳ ಸಂಭಾವನೆ ಪಡೆಯುವುದು ಖಡಾಖಂಡಿತವಾಗಿದೆ.

By admin

Leave a Reply

Your email address will not be published.