Rashmika Mandanna: ರಶ್ಮಿಕಾ ಮಂದಣ್ಣ ಅವರ ಬ್ರಾಂಡ್ ವ್ಯಾಲ್ಯೂ ಬೆಲೆ ಕೇಳಿದರೆ ನೀವು ಕೂಡ ತಲೆ ತಿರುಗಿ ಬೀಳ್ತೀರಾ! ಇವರ ಸರಿಸಾಟಿ ಯಾರು ಇಲ್ಲ.

Rashmika Mandanna ನಟಿ ರಶ್ಮಿಕಾ(Actress Rashmika) ಮಂದಣ್ಣ ಅವರ ವಯಸ್ಸು 26 ಆಗಿದ್ದರೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅವರು ಮಾಡುತ್ತಿರುವಂತಹ ಸಾಧನೆ ನಿಜಕ್ಕೂ ಕೂಡ ಯುವ ಜನತೆಗೆ ಸ್ಪೂರ್ತಿ ಎಂದು ಹೇಳಬಹುದಾಗಿದೆ‌. ಅವರ ಕುರಿತಂತೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದರೂ ಕೂಡ ಅವರ ಸಾಧನೆಯನ್ನು ಈ ವಯಸ್ಸಿನಲ್ಲಿ ಬೇರೆ ಯಾರಿಂದಲೂ ಮುಟ್ಟಲು ಕೂಡ ಸಾಧ್ಯವಿಲ್ಲ.

ಇನ್ನು ಕೇವಲ ಸಿನಿಮಾದಲ್ಲಿ ಬೇಡಿಕೆಯ ಸಂಭಾವನೆಯನ್ನು ಪಡೆಯುವುದರಲ್ಲಿ ಮಾತ್ರವಲ್ಲದೆ ಜಾಹೀರಾತುಗಳ ಬ್ರಾಂಡ್ ಡೀಲ್ ನಲ್ಲಿ ಕೂಡ ರಶ್ಮಿಕ ಮಂದಣ್ಣ(Rashmika Mandanna) ಬೇರೆಲ್ಲಾ ನಟ ನಟಿಯರಿಗಿಂತ ಮುಂದಿದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಒಂದು ಪ್ರತಿಷ್ಠಿತ ಸಂಸ್ಥೆಯ ಲಿಸ್ಟ್ ಪ್ರಕಾರ ರಶ್ಮಿಕಾ ಮಂದಣ್ಣ ಅವರ ಬ್ರಾಂಡ್ ವ್ಯಾಲ್ಯೂ(Brand Value) ಕೇಳಿದರೆ ಖಂಡಿತವಾಗಿ ನೀವು ಕೂಡ ಬೆರಗಾಗ್ತೀರಾ.

ಹೌದು ಜಾಹೀರಾತು ಮೌಲ್ಯ ಎಂದರೆ ಒಟ್ಟಾರೆ ಜಾಹೀರಾತಿನಿಂದ ಇದುವರೆಗೂ ರಶ್ಮಿಕ ಮಂದಣ್ಣ(Rashmika Mandanna) ಪಡೆಯುತ್ತಿರುವಂತಹ ಹಣ ಅಥವಾ ಅವರ ವ್ಯಾಲ್ಯೂ ಜಾಹೀರಾತು ಕ್ಷೇತ್ರದಲ್ಲಿ ಎಷ್ಟಿದೆ ಎನ್ನುವುದನ್ನು ಇದು ತೋರಿಸುತ್ತದೆ. ಸದ್ಯದ ಮಟ್ಟಿಗೆ ಅವರು ಭಾರತದಲ್ಲಿ 25ನೇ ಸ್ಥಾನದಲ್ಲಿದ್ದು ಅವರ ಬ್ರಾಂಡ್ ವ್ಯಾಲ್ಯೂ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ.

ಅಧಿಕೃತ ಮೂಲಗಳ ಪ್ರಕಾರ ರಶ್ಮಿಕ(Rashmika) ಮಂದಣ್ಣ ಅವರ ಬ್ರಾಂಡ್ ವ್ಯಾಲ್ಯೂ ಭರ್ಜರಿ 25.3 ಮಿಲಿಯನ್ ಡಾಲರ್ ಎಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದರ ಮೌಲ್ಯ 207 ಕೋಟಿಗೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಸಾಧನೆಯನ್ನು ಮಾಡಿರುವಂತಹ ರಶ್ಮಿಕ ಮಂದಣ್ಣ ಅವರ ಪರಿಶ್ರಮಕ್ಕೆ ನಾವೆಲ್ಲರೂ ತಲೆಬಾಗಲೇಬೇಕು.

Leave a Comment

error: Content is protected !!