RRR ಸಿನೆಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿದರೂ ಸಹ ರಾಮ್ ಚರಣ್ ಬರಿಗಾಲಿನಲ್ಲಿ ಬಂದು ಸೆಲೆಬ್ರೇಟ್ ಮಾಡಿದ್ದೇಕೆ ಗೊತ್ತಾ


ತೆಲುಗು ಚಿತ್ರರಂಗದ ಪ್ರಸಿದ್ಧ ನಟ ರಾಮ್ ಚರಣ್ ಅವರು ಮೆಗಾ ಸ್ಟಾರ್ ಚಿರಂಜೀವಿ ಅವರ ಸುಪುತ್ರ ಎಂಬುದು ನಮಗೆಲ್ಲ ಗೊತ್ತು. ತಮ್ಮ ತಂದೆಯವರ ಸಪೋರ್ಟ್ ನಿಂದ ಚಿತ್ರರಂಗಕ್ಕೆ ಬಂದರೂ ಸಹ ರಾಮ್ ಚರಣ್ ಅವರು ಇಂದು ತಮ್ಮ ತಂದೆಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇಡೀ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ರಾಮ್ ಚರಣ್ ಅವರ ಹೆಸರು ಕೂಡಾ ಕೇಳಿ ಬರುತ್ತೆ. ರಾಮ್ ಚರಣ್ ಅವರು ಇಂದು ಭಾರತದಾದ್ಯಂತ ಯಶಸ್ವಿ ನಟನಾಗಿ ಹೊರ ಹೊಮ್ಮಲು ಮೂಲ ಕಾರಣ ಅವರ ನಟನೆ ಮಾತ್ರ ಅಲ್ಲ ಅವರ ವ್ಯಕ್ತಿತ್ವ ಕೂಡ.

ಸೆಲೆಬ್ರಿಟಿ ಆದರೂ ಕೂಡ ರಾಮ್ ಚರಣ್ ಮತ್ತು ಅವರ ಕುಟುಂಬದವರು ಇಂದಿಗೂ ಕೂಡ ಸಂಸ್ಕೃತಿಯನ್ನು ಕಲೆಯನ್ನು ಮತ್ತು ಶಾಸ್ತ್ರವನ್ನು ಪೂಜಿಸುತ್ತಾರೆ ಆರಾಧಿಸುತ್ತಾರೆ. ಇದೇ ಕಾರಣಕ್ಕೆ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಅವರ ಕುಟುಂಬವನ್ನು ಪ್ರತಿಯೊಬ್ಬರು ಗೌರವಿಸುವುದು. ತಮ್ಮ ವೃತ್ತಿ ಜೀವನಕ್ಕೂ ಮೇಲಾಗಿ ತಮ್ಮ ಸಂಸ್ಕೃತಿಯನ್ನು ಇವರೆಲ್ಲರೂ ಗೌರವಿಸುವುದು ನಿಜಕ್ಕೂ ವಿಶೇಷ ಮತ್ತು ಹೆಮ್ಮೆಯ ವಿಷಯ.

ಇತ್ತೀಚೆಗೆ ರಾಮ್ ಚರಣ್ ಅವರು ಅಭಿನಯಿಸಿದ್ದ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಿದೆ. ಇದು ಭಾರತದಾದ್ಯಂತ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ರಾಮ್ ಚರಣ್ ಅವರ ಈ ಚಿತ್ರ ಸಾವಿರ ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿ ಭಾರತದ ಇತಿಹಾಸದಲ್ಲಿ ದೊಡ್ಡದಾದ ರೆಕಾರ್ಡ್ ಕ್ರಿಯೇಟ್ ಮಾಡಿದೆ. ರಾಮ್ ಚರಣ್ ಅವರಿಗೆ ಯಶಸ್ಸು ಹೊಸದಲ್ಲ ಹಿಂದೆ ಹಲವಾರು ಸಿನಿಮಾಗಳು ಇಂಥ ಯಶಸ್ಸನ್ನು ಕಂಡಿದೆ ಇಂಥ ಯಶಸ್ಸನ್ನು ರಾಮ್ ಚರಣ್ ಅವರು ಗರ್ವವಿಲ್ಲದೆ ಸ್ವೀಕರಿಸುತ್ತಾರೆ.

ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ನಟಿಸಿದ rrr ಚಿತ್ರ ಒಂದು ಸಾವಿರ ಕೋಟಿ ಕಲೆಕ್ಷನ್ ಮಾಡಿದೆ ಎಂಬ ಕಾರಣಕ್ಕೆ ಚಿತ್ರತಂಡದವರು ಸಕ್ಸಸ್ ಪಾರ್ಟಿ ಒಂದನ್ನು ಅರೇಂಜ್ ಮಾಡಿದ್ದರು. ಈ ಪಾರ್ಟಿಗೆ ರಾಮ್ ಚರಣ್ ಅವರು ಬರಿಗಾಲಲ್ಲಿ ಚಪ್ಪಲಿ ಅಥವಾ ಶೂ ಧರಿಸದೆ ಹಾಗೆ ಬರಿಗಾಲಲ್ಲಿ ಬಂದಿರುವುದನ್ನು ನೋಡಿ ಪ್ರೇಕ್ಷಕರಿಗಲ್ಲ ಕುತೂಹಲ ಮೂಡಿತ್ತು. ಆದರೆ ಇದರ ಕಾರಣ ಕೇಳಿ ಪ್ರತಿಯೊಬ್ಬರು ಆಶ್ಚರ್ಯಚಕಿತರಾಗಿದ್ದಾರೆ. ಹಾಗೆ ರಾಮ್ ಚರಣ್ ಅವರ ಮೇಲಿನ ಗೌರವ ದುಪ್ಪಟ್ಟು ಹೆಚ್ಚಾಗಿದೆ.

ರಾಮ್ ಚರಣ್ ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಅಯ್ಯಪ್ಪ ಸ್ವಾಮಿಯ ಭಕ್ತರು ವಿಶೇಷವಾಗಿ ಮಾಲೆಯನ್ನು ಹಾಕುವ ಸಂಪ್ರದಾಯವಿದೆ. 41 ದಿನಗಳ ಕಾಲ ಆಚರಣೆ ಮಾಡುತ್ತಾರೆ ಮತ್ತು ಈ ನಲವತ್ತ ಒಂದು ದಿನಗಳ ಕಾಲ ಮಾಲೆ ಹಾಕಿದ ಭಕ್ತರು ಬರಿಗಾಲಿನಲ್ಲಿ ಓಡಾಟ ಮಾಡಬೇಕು ಎಂಬ ಸಂಪ್ರದಾಯವಿದೆ. ಇದೀಗ ರಾಮ್ ಚರಣ್ ಅವರು ಕೂಡ ಅಯ್ಯಪ್ಪಸ್ವಾಮಿಯ ವರಮಾಲೆಯನ್ನು ಹಾಕಿರುವುದರಿಂದ ಕೆಲವು ದಿನಗಳಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. 2008 ನೇ ಇಸವಿಯಿಂದಲೂ ರಾಮ್ ಚರಣ್ ಅವರು ಮಾಲೆಯನ್ನು ಹಾಕುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ರಾಮ್ ಚರಣ್ ಅವರಿಗೆ ಧರ್ಮದ ಮೇಲಿರುವ ಈ ಭಕ್ತಿ ಆಚರಣೆ ವಿಶಿಷ್ಟವಾದದ್ದು. ರಾಮ್ ಚರಣ್ ಅವರ ಈ ಸರಳ ವ್ಯಕ್ತಿತ್ವ ಮತ್ತು ಸಿಂಪ್ಲಿಸಿಟಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.


Leave A Reply

Your email address will not be published.