Rakshit Shetty: ರಶ್ಮಿಕಾ ನಂತರ ಮತ್ತೊಂದು ಲವ್ ಗೆ ಬಿದ್ರಾ ರಕ್ಷಿತ್ ಶೆಟ್ಟಿ? ಅದು ಕೂಡ ನಮ್ಮ ಕನ್ನಡದವ್ರೇ!

Rakshit Shetty ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಿರಿಕ್ ಪಾರ್ಟಿ(Kirik Party) ಸಿನಿಮಾದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಆಗಿರುವಂತಹ ರಶ್ಮಿಕ ಮಂದಣ್ಣ(Rashmika Mandanna) ಅವರ ಪ್ರೀತಿಯಲ್ಲಿ ಬಿದ್ದಿದ್ದರು. ಸಿನಿಮಾದಲ್ಲಿ ಪ್ರಾರಂಭವಾಗಿದ್ದ ಇವರಿಬ್ಬರ ಪ್ರೀತಿ ನಿಜ ಜೀವನಕ್ಕೂ ಕೂಡ ಕಾಲಿಟ್ಟಿತ್ತು.

ಆದರೆ ಇವರಿಬ್ಬರೂ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಪರಸ್ಪರ ಪ್ರೀತಿಸಿ ನಿಶ್ಚಿತಾರ್ಥವನ್ನು ಮಾಡಿಕೊಂಡರು ಕೂಡ ಅವರಿಬ್ಬರ ನಿಶ್ಚಿತಾರ್ಥ ಎನ್ನುವುದು ಕನಿಷ್ಠಪಕ್ಷ ಒಂದು ವರ್ಷದ ಕಾಲವೂ ಕೂಡ ಬರಲಿಲ್ಲ. ನಿಶ್ಚಿತಾರ್ಥ ಆದ ವೇಗದಲ್ಲಿಯೇ ರಕ್ಷಿತ್ ಶೆಟ್ಟಿ(Rakshit Shetty) ಹಾಗೂ ರಶ್ಮಿಕ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಹೋಗುತ್ತದೆ.

ಆದರೆ ಈಗ ಮತ್ತೆ ರಕ್ಷಿತ್ ಶೆಟ್ಟಿ ಅವರು ಲವ್ ಮೂಡ್ ನಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅದೇ ಕರಾವಳಿ ಮೂಲದ ಮತ್ತೊಬ್ಬ ನಟಿ ಆಗಿರುವಂತಹ ಕೆಜಿಎಫ್(KGF) ಖ್ಯಾತಿಯ ಶ್ರೀನಿಧಿ ಶೆಟ್ಟಿ(srinidhi Shetty) ಅವರು ಟ್ವಿಟರ್ ನಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡು ಹಾಗೆ ಸುಮ್ಮನೆ ಎನ್ನುವುದಾಗಿ ಬರೆದುಕೊಂಡಿದ್ದರು. ಇದಕ್ಕೆ ರಕ್ಷಿತ್ ಶೆಟ್ಟಿ ಅವರು ನೀಡಿರುವಂತಹ ರಿಪ್ಲೈ ಈಗ ಎಲ್ಲರ ಗುಸು ಗುಸುಗೆ ಕಾರಣವಾಗಿದೆ.

ಹೌದು ಈ ಫೋಟೋ ಕೆಳಗಡೆ ಓ ಶೆಟ್ರೆ ಗೊತ್ತಾಯ್ತು ಎನ್ನುವುದಾಗಿ ರಕ್ಷಿತ್ ಶೆಟ್ಟಿ(Rakshit Shetty) ಕಾಮೆಂಟ್ ಮಾಡಿದ್ದು ಅದಕ್ಕೆ ಪ್ರತಿಯಾಗಿ ಶ್ರೀನಿಧಿ ಶೆಟ್ಟಿ ಅವರು ಕೂಡ ಗೊತ್ತಾಯ್ತಾ ಶೆಟ್ರೆ ಯಾರಿಗೂ ಹೇಳಬೇಡಿ ಎನ್ನುವುದಾಗಿ ರಿಪ್ಲೈ ನೀಡಿದ್ದಾರೆ. ಎಲ್ಲರೂ ಕೂಡ ಇದನ್ನು ನೋಡಿದ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಶೆಟ್ರು ಲವ್ವಿಗೆ ಬಿದ್ದಿದ್ದಾರೆ ಅದು ಕೂಡ ಶೆಟ್ರು ಹುಡುಗಿಯ ಜೊತೆಗೇನೆ ಎಂಬುದಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

Leave a Comment

error: Content is protected !!