Rakhi Sawanth ಮೈಸೂರಿನ ಮುಸ್ಲಿಂ ಹುಡುಗನೊಂದಿಗೆ ಮದುವೆಯಾಗಲು ಫಾತಿಮಾ ಆದ ನಟಿ ರಾಕಿ ಸಾವಂತ್. ನಂತರ ಆಗಿದ್ದೇನು ಗೊತ್ತಾ?

Rakhi Sawant ನಮ್ಮ ಹಿಂದಿ ಭಾಷೆಯ ಬಾಲಿವುಡ್(Bollywood) ಚಿತ್ರರಂಗ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟ ವಿಚಾರಗಳಿಗಾಗಿಯೇ ಸುದ್ದಿ ಆಗಿರುವುದು ಹೆಚ್ಚಾಗಿದೆ. ಅವುಗಳಲ್ಲಿಯೂ ನಾವು ಇಂದು ಮಾತನಾಡಲು ಹೊರಟಿರುವುದು ನಟಿ ರಾಕಿ ಸಾವಂತ್ ಅವರ ಕುರಿತಂತೆ. ರಾಕಿ ಸಾವಂತ್ ಅವರು ತಮ್ಮ ಚಿತ್ರ ವಿಚಿತ್ರ ಬಟ್ಟೆಗಳಿಗಾಗಿ ಹಾಗೂ ತಲೆ ಬುಡ ಇಲ್ಲದಂತಹ ಹೇಳಿಕೆಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಿತ್ರ ಕಾರ್ಯಗಳಿಗಾಗಿ ಹಾಗೂ ಹೇಳಿಕೆಗಳಿಂದಾಗಿ ರಾಕಿ ಸಾವಂತ್ ಅವರು ಬಾಲಿವುಡ್ ಸುದ್ದಿಯಲ್ಲಿ ತಮ್ಮ ಹೆಸರನ್ನು ಶಾಮೀಲಾಗಿಸಿದ್ದಾರೆ.

ಇನ್ನು ಬಿಗ್ ಬಾಸ್ ಗೆ ಹೋಗುವ ಮೂಲಕ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ನಟಿ ರಾಕಿ ಸಾವಂತ್ ಅವರು ಮೈಸೂರು ಮೂಲದ ಹುಡುಗ ಆಗಿರುವ ಆದಿಲ್ ಖಾನ್ ಅನ್ನು ಪ್ರೀತಿಸಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿತು. ಅವರು ಜೀವನಕ್ಕೆ ಬಂದ ಮೇಲೆ ನನ್ನಲ್ಲಿ ನಾನು ಸಾಕಷ್ಟು ಬದಲಾವಣೆ ಕಂಡುಕೊಂಡೆ ಎಂಬುದಾಗಿ ಕೂಡ ರಾಕಿ ಸಾವಂತ್ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಇವರಿಬ್ಬರೂ ದುಬೈಗೆ(Dubai) ಹೋಗುವಂತಹ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.

ಆದಿಲ್ ಅವರ ಜೊತೆಗೆ ರಾಕಿ ಸಾವಂತ್ ಅವರ ಪ್ರೀತಿಯ ವಿಚಾರ ಹೊರ ಬರುತ್ತಿದ್ದಂತೆ ಇಬ್ಬರೂ ಕೂಡ ರಿಜಿಸ್ಟರ್ ಆಫೀಸ್ ಗೆ ಹೋಗಿ ರಿಜಿಸ್ಟರ್ ಮದುವೆ(Registered Marriage) ಆಗಿದ್ದಾರೆ ಎಂಬುದಾಗಿ ಕೂಡ ಬಾಲಿವುಡ್ ಅಂಗಳದಿಂದ ಸುದ್ದಿ ಹೊರಬಂದಿತ್ತು. ಇದರ ಬೆನ್ನಲ್ಲೇ ರಾಕಿ ಸಾವಂತ್ ಅವರು ಫಾತಿಮಾ ಎಂಬುದಾಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ವಿಚಾರವೂ ಕೂಡ ಬೆಳಕಿಗೆ ಬಂದಿದೆ. ರಿಜಿಸ್ಟರ್ ಬುಕ್ ನಲ್ಲಿ ಹೆಸರು ರಾಕಿ ಸಾವಂತ್ ಎಂಬುದಾಗಿ ದಾಖಲಾಗಿದೆ ಆದರೆ ಮದುವೆ ಆದ ನಂತರ ಫಾತಿಮಾ ಎಂಬುದಾಗಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಆದರೆ ಇತ್ತೀಚಿಗೆ ರಾಕಿ ಸಾವಂತ್ ಅವರು ಮುಂಬೈನಲ್ಲಿ(Mumbai) ಮಾಧ್ಯಮಗಳ ಎದುರು ಆದಿಲ್ ಖಾನ್ ನನ್ನನ್ನು ಬಿಟ್ಟು ಹೋಗಿದ್ದಾನೆ ಎಂಬ ಕುರಿತಂತೆ ತಿರುಗಾಡುತ್ತಾ ಮಾತನಾಡುತ್ತಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಇಷ್ಟೆಲ್ಲ ನಡೆದಿದೆ ಎಂದರೆ ನಿಜಕ್ಕೂ ಕೂಡ ಹಲವಾರು ಅನುಮಾನಗಳು ಮೂಡಿಬರುತ್ತವೆ. ಇದು ಕೇವಲ ಪ್ರಚಾರಕ್ಕಾಗಿ ಇರಬಹುದು ಇಲ್ಲವೇ ನಿಜವಾಗಿ ನಡೆದಿದ್ದಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಗಂಭೀರ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!