Dr Rajkumar ಅಣ್ಣಾವ್ರು ಅವತ್ತು ಕದ್ದು ಮುಚ್ಚಿ ಮಾಡುತ್ತಿದ್ದ ಕೆಲಸದ ಬಗ್ಗೆ ಕೊನೆಗೂ ಬಯಲಾಯಿತು ನೋಡಿ ರಹಸ್ಯ.

Dr Rajkumar ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಮತ್ತು ಅಣ್ಣಾವ್ರ ಒಡನಾಡಿ ಆಗಿದ್ದ ಕೆಸಿಎನ್ ಚಂದ್ರು ಅವರು ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಯುಟ್ಯೂಬ್ ಚಾನೆಲ್(YouTube Channel) ನ ಸಂದರ್ಶನದಲ್ಲಿ ಅಣ್ಣಾವ್ರ ಜೊತೆಗೆ ಕಳೆದಂತಹ ದಿನಗಳ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ರಾಜಕುಮಾರ್(Rajkumar) ಅವರ ಬಗ್ಗೆ ಗೊತ್ತಿರದಂತಹ ಕೆಲವೊಂದು ಅಪರೂಪದ ವಿಚಾರಗಳನ್ನು ಕೂಡ ಈ ಸಮಯದಲ್ಲಿ ಅವರು ಬಹಿರಂಗಪಡಿಸಿದ್ದಾರೆ.

ನಟನೆಯ ವಿಚಾರಕ್ಕೆ ಬಂದರೆ ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡಿದ ಪಾತ್ರವಿಲ್ಲ ಎಂದು ಹೇಳಿದರ ತಪ್ಪಾಗಲಾರದು. ತಮ್ಮ ಹೊಟ್ಟೆಪಾಡಿಗಾಗಿ ನಟನೆಯನ್ನು(Acting) ಪ್ರಾರಂಭಿಸಿದ ಅಣ್ಣಾವ್ರು ನಂತರ ಆ ನಟನೆಯ ಕಸುಬನ್ನೆ ದೇವರಂತೆ ಪೂಜಿಸಿದವರು. ಕೇವಲ ಮೇರು ನಟ ಮಾತ್ರವಲ್ಲದೆ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ಹಾಗೂ ಅದೆಷ್ಟೋ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವರಾಗಿದ್ದವರು ನಮ್ಮ ಅಣ್ಣಾವ್ರು. ಯಾವುದೇ ಪಾತ್ರವನ್ನು ಮಾಡುವಂತಹ ಕ್ಷಮತೆ ಅಣ್ಣಾವ್ರಲ್ಲಿತ್ತು ಎನ್ನುವುದಕ್ಕೆ ಅವರ ಸಿನಿಮಾಗಳು ಸಾಕ್ಷಿ.

Rajkumar With family

ಒಮ್ಮೆ ಊರಿನಲ್ಲಿ ಅಣ್ಣಾವ್ರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯ ಹಾಲಿನಲ್ಲಿ ಯಾರೋ ಚಾಪೆ ದಿಂಬಿನಲ್ಲಿ ಸರಳವಾಗಿ ಮಲಗಿಕೊಂಡಿದ್ದು ಕಂಡಿದ್ದು ಆದರೂ ಕೂಡ ಅವರನ್ನು ದಾಟಿಕೊಂಡೆ ಮನೆಯ ಒಳಗೆ ಕೆ ಸಿ ಎನ್ ಚಂದ್ರು ಅವರು ಹೋಗಿದ್ದರಂತೆ. ನಂತರ ತಿಳಿಯಿತು ಅದು ಕನ್ನಡ ಕುಲಭೂಷಣ ರಾಜಕುಮಾರ್ ಅವರು ಎಂಬುದಾಗಿ. ಅದು ಅಣ್ಣಾವ್ರ ಸರಳತೆಗೆ(Simplicity) ಒಂದು ಜೀವಂತ ಸಾಕ್ಷಿಯಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಅಣ್ಣಾವ್ರ ಬಗ್ಗೆ ಗೊತ್ತಿರದ ಒಂದು ವಿಚಾರವನ್ನು ಎಲ್ಲರಿಗೂ ಬಹಿರಂಗ ಪಡಿಸಿದ್ದಾರೆ ಅದೇನೆಂದರೆ ಅಣ್ಣಾವ್ರಿಗೆ ಧೂ’ಮಪಾನ ಮಾಡುವ ಅಭ್ಯಾಸವಿತ್ತಂತೆ.

ಆದರೆ ರಾಜಕುಮಾರ್ ಅವರು ಅಭಿಮಾನಿಗಳಾಗಲಿ ಅಥವಾ ಬೇರೆ ಯಾರ ಎದುರಿಗೂ ಕೂಡ ಸೇದುತ್ತಿರಲಿಲ್ಲವಂತೆ. ಯಾಕೆಂದರೆ ಸಾಕಷ್ಟು ಜನರು ನನ್ನನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಅವರ ಮುಂದೆ ನಾನು ಹೀಗೆ ನಡೆದುಕೊಂಡರೆ ಕೆಟ್ಟ ಸಂದೇಶ ಸಮಾಜಕ್ಕೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದರಂತೆ. ಕೊನೆ ಕೊನೆಗೆ ಈ ಅಭ್ಯಾಸವನ್ನೇ ಅಣ್ಣಾವ್ರು ಬಿಟ್ಟರಂತೆ. ಇನ್ನು ಚಿತ್ರೀಕರಣದ ಸಂದರ್ಭದಲ್ಲಿ ಹೋಟೆಲ್ ಬುಕ್ ಮಾಡಿದ ಸಂದರ್ಭದಲ್ಲಿ ಊಟ ಹಾಗೂ ಹೋಟೆಲ್ ರೂಮಿನ ಬೆಲೆ ಜಾಸ್ತಿಯಾದಾಗ ಇಷ್ಟೊಂದು ದುಬಾರಿ ಬೆಲೆಯ ಜಾಗದಲ್ಲಿ ನಾನು ಇರಬೇಕಾದ ಅವಶ್ಯಕತೆ ಇಲ್ಲ ಸಾಮಾನ್ಯ ಬೆಲೆಯಲ್ಲಿ ಸಿಗುವಂತಹ ವ್ಯವಸ್ಥೆಯನ್ನೇ ಮಾಡಿ ಪರವಾಗಿಲ್ಲ ಎಂಬುದಾಗಿ ಹೇಳುತ್ತಿದ್ದರಂತೆ. ಇದು ಅಣ್ಣಾವರ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿಯ ಬೇಕಾಗಿರುವ ತಿಳಿಯದೆ ಇರುವಂತಹ ವಿಚಾರವಾಗಿದೆ.

Leave a Comment

error: Content is protected !!