Dr Rajkumar: ಆ ಒಂದು ದಿನ ಅಭಿಮಾನಿಗಳಿಗೆ ಹೆದರಿ ಕೂತಿದ್ದರಂತೆ ಅಣ್ಣಾವ್ರು. ಯಾಕಾಗಿ ಗೊತ್ತಾ?

Dr Rajkumar ಅಣ್ಣಾವ್ರು ಎಂದರೆ ಕನ್ನಡದ ಆಸ್ಮಿತೆ ಎಂಬುದಾಗಿ ಇಂದಿಗೂ ಕೂಡ ಪ್ರತಿಯೊಬ್ಬರು ಒಪ್ಪಿಕೊಳ್ಳುವ ಹಾಗೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ನಟಸಾರ್ವಭೌಮ(Nata Saarvabhouma) ಡಾ ರಾಜ್ ಕುಮಾರ್ ಅವರನ್ನು ಕರೆಯಲಾಗುತ್ತದೆ. ಆದರೆ ಅವರು ಕೂಡ ಒಮ್ಮೆ ಅಭಿಮಾನಿಗಳಿಗೆ ಹೆದರಿ ಕುಳಿತಿದ್ದರು ಎಂಬುದನ್ನು ನೀವು ನಂಬದಿದ್ದರೂ ಕೂಡ ನಂಬಲೇ ಬೇಕಾಗಿದೆ.

ಹೌದು ಇದು ಅವರು ಚಿತ್ರರಂಗದಲ್ಲಿ ಬೆಳೆದ ಮೇಲೆ ನಡೆದಂತಹ ವಿಚಾರವಲ್ಲ ಬದಲಾಗಿ ಅವರ ಎರಡನೇ ಸಿನಿಮಾದ ಸಂದರ್ಭದಲ್ಲಿ ನಡೆದಿರುವಂತಹ ವಿಚಾರವಾಗಿದೆ. ಹೌದು ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಮೊದಲ ಸಿನಿಮಾ ಬೇಡರ ಕಣ್ಣಪ್ಪದಲ್ಲಿ(Bedara Kannappa) ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ದೊಡ್ಡಮಟ್ಟದ ಯಶಸ್ಸನ್ನು ತಂದು ಕೊಡುತ್ತದೆ ಆದರೆ ಆಗಿನ್ನು ಅವರು ಚಿತ್ರರಂಗದಲ್ಲಿ ಯುವ ನಟನಾಗಿದ್ದರು.

ಇನ್ನು ಎರಡನೇ ಸಿನಿಮಾ ಸೋದರಿಯಲ್ಲಿ(Sodari Kannada Film) ಅವರಿಗೆ ನಾಯಕ ನಟಿಯ ಸಹೋದರನ ಪಾತ್ರವನ್ನು ನೀಡಲಾಗಿತ್ತು ಹಾಗೂ ಕೌಶಿಕ್ ಎನ್ನುವರು ನಾಯಕರ ಪಾತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಅದಾಗಲೇ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ ನಾಯಕನಾಗಿ ಯಶಸ್ಸನ್ನು ಹೊಂದಿದ್ದ ಅಣ್ಣವರಿಗೆ ಮತ್ತೆ ನಾಯಕನ ಪಾತ್ರವನ್ನೇ ನೀಡಲಾಗುತ್ತದೆ. ಆದರೆ ಬಟ್ಟೆ ಮಾತ್ರ ಕೌಶಿಕ್ ರವರ ಬಟ್ಟೆಯನ್ನೇ ನೀಡಲಾಗುತ್ತೆ. ಅಣ್ಣಾವ್ರಿಗಿಂತ(Annavru) ನೋಡಲು ಸಣ್ಣ ಆಗಿದ್ದ ಅವರ ಟೈಟ್ ಬಟ್ಟೆಗಳನ್ನೇ ಅಣ್ಣಾವ್ರು ಧರಿಸಿಕೊಂಡು ಇಡೀ ಸಿನಿಮಾದಲ್ಲಿ ನಟಿಸುತ್ತಾರೆ.

ಇನ್ನು ಸಿನಿಮಾವನ್ನು ನೋಡಲು ಚಿತ್ರಮಂದಿರಕ್ಕೆ ಹೋದ ಅಣ್ಣಾವ್ರಿಗೆ ನನಗಿಂತಲೂ ಸಣ್ಣ ಇದ್ದ ಬಟ್ಟೆಯನ್ನು ಧರಿಸಿಕೊಂಡು ಮಾಡಿರುವಂತಹ ನಟನೆ ಯಾರಿಗೂ ಇಷ್ಟ ಆಗದೇ ಇರಬಹುದು ಹಾಗೂ ಎಲ್ಲರೂ ನನ್ನ ಮೇಲೆ ಛೀಮಾರಿ ಹಾಕಬಹುದು ಎನ್ನುವುದಾಗಿ ಭ’ ಯ ಇತ್ತು. ಇನ್ನು ಆ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಅಣ್ಣಾವ್ರು ಸಿನಿಮಾವನ್ನು ಬಿಡುಗಡೆಯಾದಾಗ ನೋಡಲು ಹೋದ ಸಂದರ್ಭದಲ್ಲಿ ಎಲ್ಲರಿಗೂ ಕೂಡ ಅವರು ಬಂದಿದ್ದಾರೆ ಎನ್ನುವ ವಿಚಾರ ತಿಳಿದು ಬರುತ್ತದೆ. ಕೂಡಲೆ ಹೊರಬರಬೇಕು ಎನ್ನುವುದಾಗಿ ಅಭಿಮಾನಿಗಳು ಆಗ್ರಹಿಸುತ್ತಾರೆ. ಆಗ ಅಣ್ಣಾವ್ರು(Dr Rajkumar) ಬಹುಷ್ಯ ಪ್ರೇಕ್ಷಕರಿಗೆ ಸಿನಿಮಾದಲ್ಲಿ ನನ್ನ ನಟನೆ ಇಷ್ಟ ಆಗದೇ ಇರಬಹುದು ಇದಕ್ಕಾಗಿ ಕರೆಯುತ್ತಿದ್ದಾರೆ ಎಂಬುದಾಗಿ ಅಂಜುತ್ತಲೇ ಅಣ್ಣಾವ್ರು ಹೊರಗೆ ಬರುತ್ತಾರೆ. ಆದರೆ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಅವರ ನಟನೆಯನ್ನು ಮೆಚ್ಚಿ ನೀನು ಚೆನ್ನಾಗಿ ನಟನೆ ಮಾಡಿದ್ದೀಯಾ ನಿನ್ನ ಬಾಯಲ್ಲಿ ಕನ್ನಡ ಕೇಳುವುದೇ ಚೆಂದ ಎಂಬುದಾಗಿ ಅಣ್ಣಾವ್ರನ್ನು ಹೊಗಳುತ್ತಾರಂತೆ. ಇದೇ ಅಣ್ಣಾವ್ರು ಅಭಿಮಾನಿಗಳಿಗೆ ಹೆದರಿಕೊಂಡಂತಹ ಕಹಾನಿಯ ಸಾರಾಂಶ.

Leave a Comment

error: Content is protected !!