ಸಂಚಿತ್ ಹೆಗ್ಡೆ ಹಾಡಿಗೆ ಮನಸೋತ ಶಿವಣ್ಣ, ವಿಡಿಯೋ ನೋಡಿ

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರರ ಹಿರಿಯಪುತ್ರ. ಶಿವರಾಜ್‍ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ.ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶಿವರಾಜ್ ಕುಮಾರ್ ಅವರು ನೇ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಮುಂದಿನ ಎರಡೂ ಚಿತ್ರಗಳು, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ, ಶತದಿನ ಪ್ರದರ್ಶನ ಕಂಡವು. ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ ‘ಹ್ಯಾಟ್ರಿಕ್ ಹೀರೋ’ ಎಂಬ ಬಿರುದಿಗೆ ಪಾತ್ರರಾದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು. ಶಿವರಾಜ್ ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿಗಳು, ಫಿಲಂ ಫೇರ್ ಅವಾರ್ಡ್,  ಆರ್ಯಭಟ ಪ್ರಶಸ್ತಿ,  ಹೀಗೆ ಅನೇಕ ಪ್ರಶಸ್ತಿಗಳು  ಒಲಿದು ಬಂದಿವೆ.

ವಿಡಿಯೋ ಕೃಪೆ KFI ಡಾಕ್ಟರ್ ಶಿವರಾಜ್ ಕುಮಾರ್ ಅವರು ಎಲ್ಲರಿಗೂ ಗೊತ್ತಿರುವ ಹಾಗೆ ಡಾಕ್ಟರ್ ರಾಜಕುಮಾರ್ ಅವರ ಹಿರಿಯ ಪುತ್ರರಾಗಿದ್ದಾರೆ. ಸಂಚಿತ್ ಹೆಗಡೆ ಯವರು ರಾಜಕುಮಾರ್ ಅವರ ಹಳೆಯ ಹಾಡುಗಳನ್ನು  ಒಂದು ಅಲ್ಬಮ್ ಗೆ ಹಾಡಿದ್ದಾರೆ. ಸಂಜೀತ್ ಹೆಗ್ಡೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು ಮತ್ತು ಬೆಳೆದರು. ಸಂಜೀತ್ ಹೆಗ್ಡೆ ಅವರು ತಮ್ಮ ಪ್ರೌಢಶಿಕ್ಷಣವನ್ನು ಸಿಶು ಗ್ರಿಯಾ ಮಾಂಟೆಸ್ಸರಿ ಅಲ್ಲಿ ಮಾಡಿದರು ಹಾಗೂ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಸಿಎಮ್ಆರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಸಂಜೀತ್ ಅವರು ಜೆ.ಎಸ್.ಎಸ್. ನಲ್ಲಿ ತಮ್ಮ ಇಂಜಿನಿಯರಿಂಗ್ ಅನ್ನು ಸ್ಥಗಿತಗೊಳಿಸಿ ಹಾಡುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಸಂಜೀತ್ ಹೆಗ್ಡೆ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ಚರಣ್ ರಾಜ್ ರಚಿಸಿದ ದಳಪತಿ ಚಿತ್ರದಲ್ಲಿ ಹಾಡಿದ್ದಾರೆ. ಅವರ ಸ೦ಗೀತ ಕಲೆ ಒಂದು ವರ್ಷಕ್ಕೆ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಚಮಕ್ ಚಿತ್ರದ ಕುಶ್ ಕುಶ್ ಹಾಡಿಗೆ ಅತ್ಯುತ್ತಮ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಚಿತ್ ಹೆಗಡೆ ಯವರು ಡಾಕ್ಟರ್ ರಾಜಕುಮಾರ್ ಅವರ ಹಾಡುಗಳನ್ನು ಒಂದು ಅಲ್ಬಂಗೆ ಹಾಡಿದ್ದಾರೆ ಈ ಆಲ್ಬಂ ನ ಬಿಡುಗಡೆಯ ಸಂದರ್ಭದಲ್ಲಿ ಡಾಕ್ಟರ್ ಶಿವರಾಜ್ ಕುಮಾರ್ ಅವರು ಸಂಚಿತ್ ಹೆಗಡೆ ಯವರ ಹಾಡುಗಾರಿಕೆಗೆ ಮತ್ತು ಹಾಡುಗಳಿಗೆ ಮನಸೋತಿರುವುದಾಗಿ ಹೇಳಿಕೊಂಡಿದ್ದಾರೆ. ಸಂಜಿತ್ ಹೆಗಡೆ ಅವರ ಗಾಯನ ಎಲ್ಲರನ್ನೂ ಸೆಳೆಯುತ್ತಿದೆ.

Leave a Comment

error: Content is protected !!