ಕಾಂತಾರ ಚಿತ್ರವನ್ನು ನೋಡಿ ಸಕತ್ ಖುಷಿಯಾಗಿ ರಿಷಬ್ ಶೆಟ್ಟಿ ಯನ್ನು ಮನೆಗೆ ಕರೆಸಿಕೊಂಡು ರಜನಿಕಾಂತ್ ಕೊಟ್ಟ ಗಿಫ್ಟ್ ಏನು ಗೊತ್ತಾ? ಇದರ ಬೆಲೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶ ವಿದೇಶಗಳಲ್ಲಿ 250 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವುದು ಈಗಾಗಲೇ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ಅಧಿಕ ವಿಸ್ತರಿಸಿದೆ ಎಂದು ಹೇಳಬಹುದಾಗಿದೆ.

ಇನ್ನು ಕಾಂತಾರ ಸಿನಿಮಾಗೆ ಕೇವಲ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ನಂತಹ ದೊಡ್ಡ ಚಿತ್ರರಂಗಗಳಿಂದ ದೊಡ್ಡ ಸೆಲೆಬ್ರಿಟಿ ಗಳಿಂದಲೂ ಕೂಡ ಮೆಚ್ಚುಗೆಯ ಮಹಾಸಾಗರವೇ ಹರಿದು ಬಂದಿದೆ. ನಿಜಕ್ಕೂ ಕೂಡ ಒಂದು ಚಿಕ್ಕ ಬಜೆಟ್ ನ ಕನ್ನಡ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದು ಮಾತ್ರವಲ್ಲದೆ ಇಷ್ಟೊಂದು ಮೆಚ್ಚುಗೆ ಒಳಗಾಗುತ್ತದೆ ಎಂಬ ಚಿಕ್ಕ ಪರಿವೆಯೂ ಕೂಡ ನಮಗಿರಲಿಲ್ಲ.

ಇನ್ನು ಕಾಂತಾರ ಸಿನಿಮಾವನ್ನು ನೋಡಿರುವ ಸೂಪರ್ ಸ್ಟಾರ್ ರಜನಿಕಾಂತ್ ರವರು ಸಿನಿಮಾವನ್ನು ಮುಕ್ತ ಕಂಠದಿಂದ ಹೋಬಳಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೂಡ ಚಿತ್ರದ ಕುರಿತಂತೆ ಮೆಚ್ಚುಗೆಯನ್ನು ಬರೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಚಿತ್ರದ ಸೃಷ್ಟಿಕರ್ತ ಆಗಿರುವ ರಿಷಬ್ ಶೆಟ್ಟಿ ಅವರನ್ನು ರಜನಿಕಾಂತ್ ಅವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಕೇವಲ ಇದು ಹೊಗಳಿಕೆಗೆ ಮಾತ್ರ ನಿಲ್ಲದೆ ರಜನಿಕಾಂತ್ ಅವರು ರಿಷಬ್ ಶೆಟ್ಟಿ ಅವರನ್ನು ಚೆನ್ನೈನ ತಮ್ಮ ನಿವಾಸಕ್ಕೆ ಕೂಡ ಕರೆಸಿಕೊಂಡಿದ್ದಾರೆ.

ಹೌದು ಮಿತ್ರರೇ, ಚೆನ್ನೈನ ತಮ್ಮ ನಿವಾಸಕ್ಕೆ ಕರೆಸಿಕೊಂಡು ರಿಶಬ್ ಶೆಟ್ಟಿ ಅವರಿಗೆ ಚಿನ್ನದ ಸರವನ್ನು ನೀಡಿ ಸನ್ಮಾನವನ್ನು ಕೂಡ ಮಾಡಿದ್ದಾರೆ. ಇನ್ನೂ ರಿಷಬ್ ಶೆಟ್ಟಿ ಅವರ ಕೊರಳಿಗೆ ಹಾಕಿರುವ ಚಿನ್ನದ ಸರದ ಬೆಲೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಈ ಸಿನಿಮಾದ ನಂತರ ರಿಷಬ್ ಶೆಟ್ಟಿ ಅವರ ನಿರ್ದೇಶನವನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ಅವರ ನಿರ್ದೇಶನದಲ್ಲಿ ರಜನಿಕಾಂತ್ ಅವರು ನಟನೆ ಮಾಡಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಕಾಂತಾರ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!