ರಾಜ್ ಬಿ ಶೆಟ್ರು ಜೋತೆ ಲವ್ ಅಲ್ಲಿ ಬಿದ್ದಿದಾರಾ ಮೋಹಕ ತಾರೆ ರಮ್ಯ. ಹೊರ ಬಿತ್ತು ರಮ್ಯಾ ಮತ್ತು ರಾಜ್ ಅವರ ಸಂಬಂಧ

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ರವರು ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಮ್ಮೆ ಹಿಂತಿರುಗಿ ಬಂದಿದ್ದಾರೆ. ಈ ಬಾರಿ ಕೇವಲ ನಾಯಕನಟಿಯಾಗಿ ಮಾತ್ರವಲ್ಲದೆ ಆಪಲ್ ಸ್ಟುಡಿಯೋಸ್ ಎನ್ನುವ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಪಕಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಮ್ಮ ಮೊದಲ ನಿರ್ಮಾಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ರಮ್ಯಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

ಹೌದು ಮಿತ್ರರೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನಾಯಕಿ ಹಾಗೂ ನಿರ್ಮಾಪಕಿಯಾಗಿ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ನಿಜಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿಶೇಷ ಕಾರಣಕ್ಕಾಗಿ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ಗೆ ಮತ್ತೆ ಮರಳಿ ಬರುತ್ತಿರುವ ರಮ್ಯಾ ಅವರು ಇತ್ತೀಚಿಗಿನ ಅವಾರ್ಡ್ ವಿನ್ನಿಂಗ್ ನಿರ್ದೇಶಕನ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಕೂಡ ಸಿನಿಮಾ ಪಂಡಿತರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.

ಇನ್ನು ಸ್ಯಾಂಡಲ್ವುಡ್ ಗೆ ನಾಯಕಿಯಾಗಿ ಮರಳಿ ಬರುತ್ತದೆ ರಮ್ಯಾ ಅವರು ಪ್ರೀತಿಗೆ ಬಿದ್ದಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ರಮ್ಯಾ ಅವರು ತಮ್ಮ instagram ಪೋಸ್ಟ್ ನಲ್ಲಿ ರಾಜ್ ಬಿ ಶೆಟ್ಟಿ ಜೊತೆಯಲ್ಲಿರುವಾಗ ಬೇಸರ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂಬುದಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಿಪ್ಲೈ ಮಾಡುತ್ತಾ ರಾಜ್ ಬಿ ಶೆಟ್ಟಿ ಅವರು ಕಾಮೆಂಟ್ ಬಾಕ್ಸ್ ನಲ್ಲಿ ಸುಂದ್ರಿ ಎನ್ನುವುದಾಗಿ ರಿಪ್ಲೈ ಮಾಡಿದ್ದಾರೆ. ಹೀಗಾಗಿ ಎಲ್ಲರೂ ಕೂಡ ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಇದು ಕೇವಲ ತಮಾಷೆಗಾಗಿ ಮಾತ್ರ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಹಲವಾರು ಸೋಶಿಯಲ್ ಮೀಡಿಯಾ ಪೋಸ್ಟ್ಗಳು ಮುಂದಿನ ದಿನಗಳಲ್ಲಿ ಕೂಡ ನಾವು ನಿರೀಕ್ಷಿಸಬಹುದಾಗಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Comment

error: Content is protected !!