Radhika Pandit: ಯಶ್ ಅವರನ್ನು ಮದುವೆಯಾಗಿ ಎರಡು ಮಕ್ಕಳ ತಾಯಿ ಆಗಿದ್ದರೂ ಕೂಡ ಯಂಗ್ ಆಗಿ ಕಾಣಿಸಿಕೊಳ್ಳುವ ರಾಧಿಕಾ ಪಂಡಿತ್ ಅವರ ವಯಸ್ಸೆಷ್ಟು ಗೊತ್ತಾ?

Yash ಸದ್ಯಕ್ಕೆ ಕನ್ನಡ ಪ್ರೇಕ್ಷಕರಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾವುದು ಎಂದು ಕೇಳಿದರೆ ಖಂಡಿತವಾಗಿ ಪ್ರತಿಯೊಬ್ಬರು ನೀಡುವಂತಹ ಉತ್ತರ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್(Radhika Pandit). ಕಿರುತೆರೆಯ ಧಾರವಾಹಿ ಇಂದ ಪ್ರಾರಂಭವಾದ ಇವರಿಬ್ಬರ ಜೋಡಿ ಸಿನಿಮಾದ ಮೂಲಕ ಬಂದು ನಿಜ ಜೀವನದಲ್ಲಿ ಕೂಡ ಇವರಿಬ್ಬರು ಜೋಡಿ ಆಗುವ ತನಕ ಮುಂದುವರೆದಿದೆ.

ಇಬ್ಬರು ಮೊದಲ ಬಾರಿಗೆ ಕಿರುತೆರೆಯಲ್ಲಿ ನಂದಗೋಕುಲ ಎನ್ನುವ ಧಾರವಾಹಿ ಮೂಲಕ ಜೊತೆಯಾಗಿ ಕಾಣಿಸಿಕೊಂಡು ನಂತರ ಮೊಗ್ಗಿನ ಮನಸ್ಸು(Moggina Manassu) ಸಿನಿಮಾದ ಮೂಲಕ ನಾಯಕ ಹಾಗೂ ನಾಯಕಿಯಾಗಿ ಚಿತ್ರರಂಗಕ್ಕೆ ಜೊತೆಯಾಗಿ ಪಾದಾರ್ಪಣೆ ಮಾಡುತ್ತಾರೆ. ನಂತರ ಕನ್ನಡ ಚಿತ್ರರಂಗದ ನೆಚ್ಚಿನ ಆನ್ ಸ್ಕ್ರೀನ್ ಜೋಡಿಯಾಗಿ ಯಶ್ ಹಾಗೂ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಾರೆ. ಅದಾಗಲೇ ಇವರಿಬ್ಬರೂ ಪ್ರೀತಿಯಲ್ಲಿ ಇದ್ದಿದ್ದರೂ ಕೂಡ ಯಾರ ಬಳಿಯೂ ಕೂಡ ಇದರ ವಿಚಾರ ಹೇಳಿಕೊಂಡಿರುವುದಿಲ್ಲ.

ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಸಾಧಿಸಿದ ನಂತರವೇ ಇಬ್ಬರು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಈಗಾಗಲೇ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದರೂ ಕೂಡ ಹದಿಹರೆಯದ ಯುವತಿಯಂತೆ ಕಾಣಿಸುವ ರಾಧಿಕಾ ಪಂಡಿತ್(Radhika Pandit) ಅವರ ನಿಜವಾದ ವಯಸ್ಸೆಷ್ಟು ಗೊತ್ತಾ.

ಹೌದು ಗೆಳೆಯರೇ ಚಿತ್ರರಂಗದಿಂದ ವಿರಾಮವನ್ನು ಪಡೆದಿದ್ದರೂ ಕೂಡ ಇಂದಿಗೂ ಯಾವುದೇ ಟಾಪ್ ನಟಿಯರಿಗೂ ಕಡಿಮೆ ಇಲ್ಲದಂತೆ ಸುಂದರವಾಗಿ ಕಾಣಿಸುತ್ತಾರೆ ನಮ್ಮೆಲ್ಲರ ನೆಚ್ಚಿನ ರಾಧಿಕಾ ಪಂಡಿತ್. ತಮ್ಮ ಪತಿ ಯಶ್(Rocking Star Yash) ಅವರಿಗಿಂತ ಒಂದು ವರ್ಷ ದೊಡ್ಡವರಾಗಿರುವ ರಾಧಿಕಾ ಪಂಡಿತ್ ಅವರ ನಿಜವಾದ ವಯಸ್ಸು 38 ವರ್ಷ ವಯಸ್ಸು ಆಗಿದೆ. ನೀವು ಕೂಡ ರಾಧಿಕಾ ಪಂಡಿತ್ ಅವರ ಅಭಿಮಾನಿಯಾಗಿದ್ದರೆ ತಪ್ಪದೆ ಅವರ ನಟನೆಯ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!