Dacchu Kiccha: ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳಾಗಿದ್ದರೂ ಕೂಡ ಡಿ ಬಾಸ್ ಹಾಗೂ ಕಿಚ್ಚನೊಂದಿಗೆ ರಾಧಿಕಾ ಪಂಡಿತ್ ಸಿನಿಮಾ ಯಾಕೆ ಮಾಡಿಲ್ಲ ಗೊತ್ತಾ?

Radhika Pandit ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಟಿಸಿಕೊಂಡು ಬಂದಿದ್ದಾರೆ. ಇಂದಿನ ಸಮಯದಲ್ಲಿ ಅವರಿಬ್ಬರೂ ದುಷ್ಮನ್ ಗಳು ಆಗಿರಬಹುದು ಆದರೆ ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸ್ನೇಹ ಸಂಬಂಧ ಅವರಲ್ಲಿ ಇತ್ತು. ಕನ್ನಡ ಚಿತ್ರರಂಗದಲ್ಲಿ ಅವರನ್ನು ಕುಚಿಕುಗಳು ಎನ್ನುವುದಾಗಿ ಕರೆಯುತ್ತಿದ್ದರು.

ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಂದೇ ಸಿನಿಮಾದಲ್ಲಿ ನಟಿಸಲಿ ಎಂಬುದಾಗಿ ಹಲವಾರು ಅಭಿಮಾನಿಗಳು ಹಾರೈಸಿದ್ದರು ಆದರೆ ಅದು ಕೊನೆಗೂ ಪೂರ್ತಿ ಆಗಲೇ ಇಲ್ಲ. ಚಿತ್ರರಂಗದ ಖ್ಯಾತ ನಟಿಯಾಗಿರುವ ರಾಧಿಕಾ ಪಂಡಿತ್ ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದು ಹಲವಾರು ಸ್ಟಾರ್ ನಟರೊಂದಿಗೆ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಆದರೆ ಇದುವರೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರಿಗೆ ರಾಧಿಕಾ ಪಂಡಿತ್ ರವರು ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಇದು ಯಾಕೆ ಎಂಬುದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಇತ್ತು, ಆದರೆ ಕೆಲವು ವರ್ಷಗಳ ಹಿಂದೆ ರಾಧಿಕಾ ಪಂಡಿತ್ ಅವರೇ ಇದರ ಕುರಿತಂತೆ ಒಂದು ಹೇಳಿಕೆಯನ್ನು ನೀಡಿದ್ದರು ಅದೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ರಾಧಿಕಾ ಪಂಡಿತ್(Radhika Pandit) ರವರು ಈ ಕುರಿತಂತೆ ಮಾತನಾಡುತ್ತಾ, ಅವರಿಬ್ಬರೂ ನಮ್ಮ ಚಿತ್ರರಂಗದ ಸೀನಿಯರ್ ನಟರು. ಅವರಿಬ್ಬರ ಜೊತೆಗೆ ನಟಿಸುವಂತಹ ಒಳ್ಳೆ ಕಥೆ ಅಥವಾ ಸಿನಿಮಾ ಹುಡುಕಿಕೊಂಡು ಬಂದರೆ ಖಂಡಿತವಾಗಿ ಸಿನಿಮಾ ಮಾಡ್ತೀನಿ ಎಂಬುದಾಗಿ ರಾಧಿಕಾ ಪಂಡಿತ್ ಹೇಳಿದ್ದರು. ಆದರೆ ಆ ಹೇಳಿಕೆ ನೀಡಿ ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಇದುವರೆಗೂ ರಾಧಿಕಾ ಪಂಡಿತ್ ಕಿಚ್ಚ ಹಾಗೂ ದಚ್ಚು ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!