ಕ್ರಾಂತಿ ಸಿನಿಮಾದ ಐಟಂ ಸಾಂಗ್ ಗೆ ರಚಿತಾ ರಾಮ್ ಕ್ಯೂಟ್ ಸ್ಟೆಪ್ ಹಾಕಿರೋ ವಿಡಿಯೋ ವೈರಲ್.

Rachita Ram Shake It Pushpavati Reel ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದ್ದು ಚಿತ್ರದ ಕುರಿತಂತೆ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ( Expectations ) ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು (Songs ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗಿವೆ.

ಕ್ರಾಂತಿ ಸಿನಿಮಾದ ಮೊದಲನೇ ಹಾಡು ಮೈಸೂರಿನಲ್ಲಿ ಬಿಡುಗಡೆಯಾದರೆ 2ನೇ ಹಾಡು ಬಳ್ಳಾರಿಯ ಹೊಸಪೇಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇನ್ನು ಮೂರನೇ ಹಾಡು ಆಗಿರುವ ಶೇಕ್ ಇಟ್ ( Shake It ) ಪುಷ್ಪವತಿ ಹಾಡು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡ್ಯಾನ್ಸ್ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು instagram ಖಾತೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ಇದರ ಬಗ್ಗೆ ರೀಲ್ಸ್ ಮಾಡಿದ್ದಾರೆ.

Rachita Ram With Darshan kranti
Rachita Ram With Darshan kranti

ನಿಮಗೆಲ್ಲರಿಗೂ ತಿಳಿದಿರುವ ಹಾಗೆ instagram ಖಾತೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಮಿಲಿಯನ್ ಗಟ್ಟಲೆ ( Millions ( ಅಭಿಮಾನಿಗಳು ಹಾಗೂ ಫಾಲೋವರ್ಸ್ಗಳಿದ್ದಾರೆ. ಇನ್ನು ಚಿತ್ರದ ಪ್ರಚಾರಾರ್ಥವಾಗಿ ಅವರು ಕೂಡ ಈ ಜನಪ್ರಿಯ ಐಟಂ ಡ್ಯಾನ್ಸ್ ಗೆ ಸ್ಟೆಪ್ ಹಾಕುವ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಬೈಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಡಿಂಗ್ ಡಾಂಗ್ ಪ್ರಾರಂಭಿಸಿದ ಹುಡುಗ ನಂತರ ಆದ ಎಡವಟ್ಟೇನು ಗೊತ್ತಾ? ಇದು ಬೇಕಿತ್ತಾ

ಇನ್ನು ಇದೇ ಜನವರಿ 7ರಂದು ಕ್ರಾಂತಿ ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದ್ದು ಸಿನಿಮಾ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಅದ್ದೂರಿಯಾಗಿ ಬಹು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಾಂಗ್ ( song ) ಹಾಗೂ ಸಿನಿಮಾದ ಕುರಿತಂತೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!