Pushpa 2: ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣನಿಗೆ ಇರಲಿದೆ ಶಾಕಿಂ’ ಗ್ ವಿಚಾರ! ಮಿಂಚಲು ಅವಕಾಶವೇ ಇಲ್ವಂತೆ.

Rashmika Mandanna ಕಿರಿಕ್ ಪಾರ್ಟಿ ಸಿನಿಮಾದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜೀವನದ ಅದೃಷ್ಟವೇ ಬದಲಾಗಿ ಹೋಗಿತ್ತು. ಆದರೆ ಬಹು ಭಾಷೆಗಳಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರ ಎಂದರೆ ಅಲ್ಲು ಅರ್ಜುನ್(Allu Arjun) ನಾಯಕ ನಟನಾಗಿ ನಟಿಸಿರುವ ಪುಷ್ಪ(Pushpa) ಸಿನಿಮಾ. ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕ ಮಂದಣ್ಣ ಜನರ ಮನಸೂರೆ ಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕ ಮಂದಣ್ಣ(Rashmika Mandanna) ಸಾಮಿ ಸಾಮಿ ಎನ್ನುತ್ತಲೆ ಪ್ಯಾನ್ ಇಂಡಿಯಾ ನಟಿಯಾಗಿ ಬಿಟ್ಟಿದ್ದಾರೆ. ಪುಷ್ಪ ಸಿನಿಮಾದ ಮೊದಲ ಭಾಗದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಮಿಂಚಲು ಸಾಕಷ್ಟು ಅವಕಾಶವಿತ್ತು ಹೀಗಾಗಿ ಈ ಸಿನಿಮಾದ ಮೂಲಕ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದರು. ಆದರೆ ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಆಶ್ಚರ್ಯ ಕಾದಿದೆಯಂತೆ.

Pushpa 2

ನಿರ್ದೇಶಕ ಸುಕುಮಾರ್(Sukumar) ರವರ ಕೆಲವೊಂದು ಮೂಲಗಳ ಪ್ರಕಾರ ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ರಶ್ಮಿಕ ಮಂದಣ್ಣ(Rashmika) ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಇಲ್ಲ ಹಾಗೂ ಅವರ ಪಾತ್ರ ಬೇಗ ಮುಗಿಯಲಿದೆ ಎನ್ನುವುದಾಗಿ ಕೂಡ ಕೇಳಿ ಬಂದಿದೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ ಆದರೆ ತೆಲುಗು ಚಿತ್ರರಂಗದಲ್ಲಿ ಓಡಾಡುತ್ತಿರುವ ಈ ಮಾತಂತು ನಿಜ.

ಪುಷ್ಪ ಸಿನ್ಮಾದ ಎರಡನೇ(Pushpa 2) ಭಾಗದಲ್ಲಿ ಬೇರೆ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ರಶ್ಮಿಕಾ ಮಂದಣ್ಣ ಅವರು ನಿರ್ವಹಿಸುತ್ತಿರುವ ಶ್ರೀ ವಲ್ಲಿ ಪಾತ್ರ ಸಿನಿಮಾದಲ್ಲಿ ಬೇಗ ಮರಣ ಹೊಂದಲಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ಇನ್ನಷ್ಟು ತಮ್ಮ ನಟನೆಯ ಛಾಪನ್ನು ಮೂಡಿಸುವಂತಹ ಪ್ರಯತ್ನದಲ್ಲಿ ಇದ್ದಂತಹ ರಶ್ಮಿಕಾ ಮಂದಣ್ಣ(Rashmika Mandanna) ಅವರಿಗೆ ಹಿನ್ನಡೆ ಉಂಟಾಗಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!