ಅಪ್ಪುವಿನ ಎರಡನೇ ಮಗಳು ವಂದಿತಾಳನ್ನು ಮುದ್ದು ಮಾಡಿದ ಸುಧಾ ಮೂರ್ತಿ! ವೈರಲ್ ಆಯ್ತು ಕ್ಯೂಟ್ ವಿಡಿಯೋ..

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ.

ಪುನೀತ್ ಅವರ ಚಿತ್ರಗಳೆಂದರೆ ಜನತೆಗೆ ಒಳ್ಳೆಯ ಸಂದೇಶ ನೀಡುವ ಕಥೆಯನ್ನು ಹೊಂದಿರುತ್ತದೆ. ಅಂತೆಯೇ ಇವರ ಕೊನೆಯ ಚಿತ್ರವಾದ ಗಂಧದಗುಡಿಯಲ್ಲಿಯೂ ಕರುನಾಡ ಪ್ರಕೃತಿ ಸೌಂದರ್ಯವ ಸೆರೆ ಹಿಡಿದು ಪರಿಸರ ರಕ್ಷಣೆಯ ಬಗೆಗೆ ಹೇಳಲಾಗಿದೆಯಂತೆ. ಅಭಿಮಾನಿಗಳಿಂದ ಸಕ್ಕತ್ ರೆಸ್ಪಾನ್ಸ್ ದೊರಕಿದ್ದು, ಪರಿಸರ ಪ್ರೇಮಿಗಳು ಒಪ್ಪಿದ್ದಾರಂತೆ. .ಗಂಧದಗುಡಿ ಚಿತ್ರವು ಇಂದಿನವರೆಗೂ ಅದ್ಭುತವಾಗಿ ತೆರೆ ಕಂಡಿದ್ದು ಕರ್ನಾಟಕದ ಹೆಮ್ಮೆಯ ಚಿತ್ರವಾಗಿದೆ. ಅಪ್ಪುವಿನ ಕೊನೆಯ ಚಿತ್ರವಾದ್ದರಿಂದ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಮುಗಿಬಿದ್ದಿದ್ದಾರೆ. ಎಲ್ಲೆಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ದೊರಕಿ, ಸ್ಪೆಷಲ್ ಚಿತ್ರವೆನಿಸಿಕೊಂಡಿದೆ.

ಇನ್ಫೋಸಿಸ್ನ ಒಡತಿ ಸುಧಾ ಮೂರ್ತಿಯವರು ಚಿತ್ರವನ್ನು ವೀಕ್ಷಿಸಿದ ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ಇಂಥದ್ದೊಂದು ಅದ್ಭುತ ಸಿನಿಮಾ ನಿರ್ಮಾಣವಾಗಿರುವುದು ಒಳ್ಳೆಯ ಪ್ರಯತ್ನ. ಚಿತ್ರದಿಂದ ತಿಳಿದುಕೊಳ್ಳಬೇಕಾದ ವಿಷಯ ಸಾಕಷ್ಟಿದೆ. ಕನ್ನಡ ಭಾಷೆಯಲ್ಲಿ ಇಂತಹ ಚಿತ್ರವನ್ನು ನೋಡಿ ಗರ್ವವೆನಸಿತು’ ಎಂದಿದ್ದಾರೆ.

ಸೆಲೆಬ್ರೆಟಿಗಳಿಗಾಗಿ ಮತ್ತು ಅಪ್ಪುವಿನ ಆಪ್ತ ಅಭಿಮಾನಿ ಬಳಗಕ್ಕಾಗಿ ಅಕ್ಟೋಬರ್ 27ರಂದು ಗಂಧದಗುಡಿ ಚಿತ್ರದ ಸ್ಪೆಷಲ್ ಶೋವನ್ನು ತೋರಿಸಲಾಗಿತ್ತು. ಗಂಧದಗುಡಿ ಚಿತ್ರವನ್ನು ವೀಕ್ಷಿಸಲು ಚಂದನವನದ ಬಹುತೇಕ ನಟ, ನಟಿಯರು, ಹಾಡುಗಾರರು, ತಂತ್ರಜ್ಞರು ಸೇರಿದಂತೆ ಹಲವಾರು ಮಂದಿ ನೆರೆದಿದ್ದರು. ಈ ಪ್ರೀಮಿಯರ್ ಶೋವನ್ನು ಆನಂದಿಸಲು ಬಂದಿದ್ದ ಸುಧಾಮೂರ್ತಿ ಅವರನ್ನು, ಅಪ್ಪುವಿನ ಎರಡನೇ ಮಗಳು ವಂದಿತಾ ಓಡೋಡಿ ಬಂದು ಮಾತನಾಡಿಸಿದ್ದಾಳೆ. ಸುಧಾ ಮೂರ್ತಿಯವರು ವಂದಿತಾಳ ಗಲ್ಲವನ್ನು ಸ್ಪರ್ಶಿಸಿ ‘ನೀನೇನಾ ಅಪ್ಪುವಿನ ಎರಡನೇ ಮಗಳು?’ ಎಂದು ನಗುತ್ತಾ ಕೇಳಿದ್ದಾರೆ. ನಂತರ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಮುದ್ದಿನಿಂದ ನಕ್ಕಿದ್ದಾರೆ. ಪುನೀತ್ ರಾಜಕುಮಾರರಂತೆ ಅವರ ಎರಡನೆಯ ಮಗಳು ವಂದಿತಾ ಜನರೊಂದಿಗೆ ಬೆರೆತು ಮುದ್ದು ನಗೆಯನ್ನು ಬೀರುತ್ತಾಳೆ. ಈ ತುಣುಕು ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹೆಚ್ಚೆಚ್ಚು ವೀವ್ಸ್ ಲೈಕ್ಸ್ ಗಳನ್ನು ಪಡೆದಿದೆ.

Leave a Comment

error: Content is protected !!