ಸದ್ದಿಲ್ಲದೆ ಪುನೀತ್ ಹೆಸರನ್ನು ಬೆಳಗಿಸಿದ್ದಾರೆ ಅಪ್ಪು ಹೆಣ್ಣು ಮಕ್ಕಳು! ಎಲ್ಲರೂ ಸಂತೋಷ ಪಡುವ ವಿಚಾರ ಏನದು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಧೀಮಂತ ವ್ಯಕ್ತಿತ್ವ ಮಾತ್ರವಲ್ಲದೆ ಯಾರಿಗೂ ತಿಳಿಯದೆ ಅದೆಷ್ಟೋ ಜನ ಹಸಿವಿನಿಂದ ಇದ್ದವರಿಗೆ ಹಾಗೂ ಜೀವನದಲ್ಲಿ ಆರ್ಥಿಕವಾಗಿ ಹಾಗೂ ಬೇರೆ ಬೇರೆ ರೀತಿಯ ವಿಚಾರಗಳಿಂದ ಕಷ್ಟವನ್ನು ಹೊಂದಿದ್ದ ಜನರಿಗೆ ಅವರದೇ ಕುಟುಂಬದ ಸದಸ್ಯನಂತೆ ನಿಂತು ಸಹಾಯ ಮಾಡುವ ಮೂಲಕ ನಿಜಕ್ಕೂ ಕಲಿಯುಗದಲ್ಲಿ ಜೀವಿಸಿರುವ ದೇವರಂತೆ ಕಾಣಿಸಿಕೊಂಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಅಪ್ಪು.

ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಳ್ಳುವ ಮೂಲಕ ನಾವು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದ ಬಹುತೇಕ ಎಲ್ಲಾ ಸಾಮಾಜಿಕ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿ ಬಂದಿದೆ. ಅವರ ಬೆಂಬಲವಾಗಿ ಇಡೀ ರಾಜ್ ಕುಟುಂಬವೇ ಇದೆ ಎಂದರು ಕೂಡ ತಪ್ಪಾಗಲಾರದು.

ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದ್ರತಿ ಹಾಗೂ ವಂದಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಬ್ಬರು ಮಾಡಿರುವ ಸಾಧನೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲು ಸಾಧ್ಯವಿಲ್ಲ. ಕೇವಲ ಸ್ಟಾರ್ ನಟನ ಮಕ್ಕಳು ಎನ್ನುವ ಹೆಗ್ಗಳಿಕೆಗೆ ಮಾತ್ರವಲ್ಲದೆ ತಮ್ಮ ಸ್ವಂತ ಪ್ರತಿಭೆಯ ಅನಾವರಣವನ್ನು ಕೂಡ ಇವರಿಬ್ಬರೂ ಮಾಡಿದ್ದಾರೆ. ಅದೆಷ್ಟೋ ಜನರು ಪರೀಕ್ಷೆಯನ್ನು ಬರೆದು ಕೇವಲ 500 ಜನರು ವಿದೇಶದಲ್ಲಿ ಓದಲು ಸ್ಕಾಲರ್ಶಿಪ್ಗಾಗಿ ಸೆಲೆಕ್ಟ್ ಆಗಿರುವವರ ಪೈಕಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ಕೂಡ ಒಬ್ಬರು.

ಅಲ್ಲಿಯೂ ಕೂಡ ದೃತಿ ಓದುವಿಕೆಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಇನ್ನು ಎರಡನೇ ಮಗಳಾಗಿರುವ ವಂದಿತ ಕೂಡ ಇತ್ತೀಚಿಗಷ್ಟೇ ಹೊರಬಂದಿರುವ ಫಲಿತಾಂಶದಲ್ಲಿ 90%ಗೂ ಅಧಿಕ ಅಂಕವನ್ನು ಗಳಿಸುವ ಮೂಲಕ ಅಪ್ಪು ಹೆಣ್ಣು ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲರಿಗಿಂತ ತಾವು ಮುಂದಿದ್ದೇವೆ ಎಂಬುದನ್ನು ಸಾಬೀತು ಪಡಿಸುವ ಮೂಲಕ ತಂದೆಯ ಹೆಸರನ್ನು ಬಾನೆತ್ತರಕ್ಕೆ ಬೆಳಗುವಂತೆ ಮಾಡಿದ್ದಾರೆ.

Leave a Comment

error: Content is protected !!