Ashwini Puneeth Rajkumar: ಚಿತ್ರರಂಗಕ್ಕೆ ಅಪ್ಪು ಮಗಳ ಎಂಟ್ರಿ ಕುರಿತಂತೆ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು?
Ashwini Puneeth Rajkumar ಬದುಕಿದರೆ ನಮ್ಮ ಜೀವನ ಬೇರೆಯವರಿಗೆ ಪಾಠವಾಗುವಂತೆ ಬದುಕಬೇಕು ಎನ್ನುವುದಾಗಿ ಹಿರಿಯರು ಹೇಳುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದರೆ ತಪ್ಪಾಗಲಾರದು. ನಟಸಾರ್ವಭೌಮನ ಮಗನಾಗಿದ್ದರೂ ಕೂಡ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಸ್ವಂತ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ತಮ್ಮ ಜೀವನವೇ ಬೇರೆಯವರಿಗೆ ಮಾದರಿಯಾಗುವ(Inspiring) ರೀತಿಯಲ್ಲಿ ಬದುಕಿ ತೋರಿಸಿದವರು.
ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಅತ್ಯುನ್ನತ ಗೌರವಗಳಲ್ಲಿ ಒಂದಾಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದೆ. ಇನ್ನು ಅವರ ಇಬ್ಬರು ಹೆಣ್ಣು ಮಕ್ಕಳಾಗಿರುವ ದೃತಿ ಹಾಗೂ ವಂದಿತ ಇನ್ನೂ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಹಿರಿಯ ಮಗಳು ದೃತಿ ಜರ್ಮನಿಯಲ್ಲಿ ಸ್ಕಾಲರ್ಶಿಪ್ ಮುಖಾಂತರ ಉನ್ನತ ಹಂತದ ವಿದ್ಯಾಭ್ಯಾಸದಲ್ಲಿ ತೊಡಗಿದ್ದರೆ ಎರಡನೇ ಮಗಳಾಗಿರುವ ವಂದಿತ ಇತ್ತೀಚಿಗಷ್ಟೇ ಬೆಂಗಳೂರಿನ ಪ್ರತಿಷ್ಠಿತ(Prestigious) ಶಾಲೆಯೊಂದರಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸದ್ಯಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದ ಎಲ್ಲಾ ಪ್ರೊಡಕ್ಷನ್(Production) ಹಾಗೂ ಆಡಿಯೋ ಸಂಸ್ಥೆಯ ಕೆಲಸಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದು ಅಪ್ಪು ಅವರ ಸಮಾಜಸೇವೆ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಅವರ ದೊಡ್ಡ ಮಗಳಾಗಿರುವ ದೃತಿ ಅವರು ಕೂಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಎಲ್ಲಾ ಕಡೆ ಹರಿದಾಡುತ್ತಿವೆ. ಇದು ಸಾಕಷ್ಟು ಗೊಂದಲಕ್ಕೆ ಎಲ್ಲರನ್ನು ಈಡು ಮಾಡಿದೆ.
ಹೌದು ಮಿತ್ರರೇ ಹಿರಿಯ ಮಗಳು ದೃತಿ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಭಾರತಕ್ಕೆ ಬಂದ ನಂತರ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು ತಾವೇ ಮುಂದುವರಿಸಿಕೊಂಡು ಹೋಗಲಿದ್ದಾರೆ ಎನ್ನುವ ವದಂತಿಗಳು ಓಡಾಡುತ್ತಿವೆ. ಕೆಲವು ಕಡೆಗಳಲ್ಲಿ ಧೃತಿ ಅವರು ನಟನೆಗೆ ಹೇಳಿದರು ಕೂಡ ಅಚ್ಚರಿ ಪಡಬೇಕಾಗಿಲ್ಲ ಎನ್ನುವ ವಾರ್ತೆಗಳು(News) ಕೂಡ ಕೇಳಿ ಬರುತ್ತಿವೆ. ಇವುಗಳು ಎಷ್ಟರಮಟ್ಟಿಗೆ ನಿಜವಾಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ. ಆದರೆ ಸದ್ಯಕ್ಕಂತೂ ಈ ವಿಚಾರ ಸತ್ಯವಾಗುವ ಯಾವುದೇ ವರ್ತಮಾನಗಳು ಕೂಡ ಕಾಣುತ್ತಿಲ್ಲ.