Puneeth Rajkumar: ಅಪ್ಪು ಅವರನ್ನು ಟೀಕೆ ಮಾಡೋ ಜನರೇ ಅವರು ಯಾವೆಲ್ಲ ಜನಸೇವೆ ಮಾಡಿದ್ರು ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್!

Puneeth Rajkumar ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ದಿನ ಜನಸೇವೆಯಲ್ಲಿ ತೊಡಗಿಕೊಂಡಿದ್ದರು. ಬೇರೆ ಯಾರೇ ಆಗಿದ್ದರೂ ಕೂಡ ಪ್ರಚಾರಕ್ಕಾಗಿ ಇದನ್ನು ಮೀಡಿಯಾ ತುಂಬೆಲ್ಲ ಸಾರುತ್ತಿದ್ದರು. ಆದರೆ ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ಎಲ್ಲಾ ಕೆಲಸಗಳನ್ನು ಕೂಡ ಅಪ್ಪು ಅವರು ಗೌಪ್ಯವಾಗಿ ಇಟ್ಟಿದ್ದರು. ಅದಕ್ಕಾಗಿಯೇ ತಾನೇ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ(Karnataka Ratna Award) ನೀಡಿ ಗೌರವಿಸಿರುವುದು.

ಹೀಗಿದ್ದರೂ ಕೂಡ ಕೆಲವು ಕಿಡಿಗೇಡಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಯಾವ ಸಮಾಜಸೇವೆ ಕೂಡ ಮಾಡಿಲ್ಲ ಇದೆಲ್ಲ ಶುದ್ಧ ಸುಳ್ಳು ಎನ್ನುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅಂಥವರಿಗೆ ಇಂದಿನ ಲೇಖನಿಯಲ್ಲಿ ತಮ್ಮ ಜೀವಿತಾವಧಿಯಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಮಾಜ ಸೇವೆಗಳ ಪಟ್ಟಿಯನ್ನು ಸಂಪೂರ್ಣ ವಿವರವಾಗಿ ಹೇಳುತ್ತೇವೆ ಬನ್ನಿ.

26ಕ್ಕೂ ಅಧಿಕ ಅನಾಥಾಶ್ರಮಗಳನ್ನು ಪುನೀತ್(Puneeth) ರಾಜಕುಮಾರ್ ರವರು ನಡೆಸುತ್ತಿದ್ದರು. 16ಕ್ಕೂ ಅಧಿಕ ವೃದ್ಧಾಶ್ರಮಗಳನ್ನು ಮತ್ತು 19ಕ್ಕೂ ಅಧಿಕ ಗೋಶಾಲೆಗಳನ್ನು ರಾಜ್ಯಾದ್ಯಂತ ಪುನೀತ್ ರಾಜಕುಮಾರ್ ಅವರು ತಾವೇ ನಡೆಸುತ್ತಿದ್ದರು. ಶಕ್ತಿಧಾಮದ ಮೂಲಕ ಸಾವಿರಕ್ಕೂ ಅಧಿಕ ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತಹ ಪುಣ್ಯದ ಕೆಲಸವನ್ನು ಅಪ್ಪು ಮಾಡಿದ್ದಾರೆ. ತಾವು ಹಾಡಿರುವ ಹಾಡಿನಿಂದ ಬಂದಿರುವಂತಹ ಹಣವನ್ನು ಸಂಪೂರ್ಣವಾಗಿ ಅನಾಥಾಶ್ರಮಗಳಿಗಾಗಿ ಅವರು ಬಳಸಿಕೊಳ್ಳುತ್ತಿದ್ದರು.

ಕೇವಲ ಇಷ್ಟೇ ಯಾಕೆ ತಮ್ಮ ಮರಣದ ನಂತರ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ ನಮ್ಮೆಲ್ಲರ ನೆಚ್ಚಿನ ರಾಜರತ್ನ. ಇಷ್ಟೆಲ್ಲ ಮಾಡಿರುವ ಪುನೀತ್ ರಾಜಕುಮಾರ್(Puneeth Rajkumar) ಅವರ ಬಗ್ಗೆ ಮಾತನಾಡಲು ನಾವೆಲ್ಲ ಪುನೀತರಾಗಿದ್ದೇವೆ ಎನ್ನುವ ಧನ್ಯತಾ ಭಾವವನ್ನು ಆನಂದಿಸುತ್ತೇವೆ. ಆದರೆ ಈಗಲೂ ಕೂಡ ಅವರ ವಿರುದ್ಧ ಕಳಂಕ ತರುವಂತಹ ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀಡುತ್ತಿರುವ ಕೆಲವು ಅವಿವೇಕಗಳಿಗೆ ನಿಜಕ್ಕೂ ಕೂಡ ಯಾವಾಗ ಬುದ್ಧಿ ಬರುತ್ತೋ ಆ ದೇವರೇ ಬಲ್ಲ.

Leave a Comment

error: Content is protected !!