Appu: ಬರ್ತಡೆ ದಿನಾನೆ ಬಿಡುಗಡೆಯಾಯಿತು ಅಪ್ಪು ಹೊಸ ಸಿನಿಮಾದ ಪೋಸ್ಟರ್! ಅಭಿಮಾನಿಗಳು ಫುಲ್ ಖುಷ್.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಮಾರ್ಚ್ 17ರಂದು ಅವರ ಅಭಿಮಾನಿಗಳು ಸಮಾಜ ಸ್ಥಳದಲ್ಲಿ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅಪ್ಪು(Appu) ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಗಂಧದಗುಡಿ(Gandhada Gudi) ಡಾಕ್ಯುಮೆಂಟರಿ ಸಿನಿಮಾದ ಪ್ರಸಾರವು ಕೂಡ ಆರಂಭವಾಗಿದೆ.

ಪುನೀತ್ ರಾಜಕುಮಾರ್(Puneeth Rajkumar) ಇಲ್ಲದೆ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ಕೂಡ ಅಭಿಮಾನಿಗಳಲ್ಲಿ ಬೇಸರವನ್ನು ತರಿಸಿದ್ದರು ಕೂಡ ಅವರಿಲ್ಲ ಎನ್ನುವ ಕೊರತೆಯನ್ನು ಕಾಣದಂತೆ ಅಭಿಮಾನಿಗಳು ಅವರ ಜನ್ಮದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದಲೇ ಆಚರಿಸಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸಾಕಷ್ಟು ಆಶ್ಚರ್ಯಕರ ಘಟನೆಗಳು ಕೂಡ ನಡೆದಿವೆ.

ಹೌದು ನಾವ್ ಮಾತನಾಡುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth) ರವರ ಫೋಟೋ ಇರುವಂತಹ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಅಪ್ಪು ಅವರ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ ಎನ್ನುವ ಸಡಗರದಲ್ಲಿ ಇದ್ದಾರೆ ಆದರೆ ನಿಜವಾದ ವಿಚಾರ ಬೇರೆನೇ ಇದೆ. ಹೌದು ಅಪ್ಪು ಅವರ ಎಡಿಟ್ ಮಾಡಲಾಗಿರುವ ಫೋಟೋ ಬಿಡುಗಡೆಯಾಗುತ್ತಿರುವುದು ಅವರ ಅಣ್ಣನ ಸಿನಿಮಾದಿಂದ.

ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಟನೆಯಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ(Ghost Kannada Film) ಕಡೆಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಹೊರಬಂದಿದ್ದು ಇದರಲ್ಲಿ ಕೇವಲ ಅಪ್ಪು ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲಾಗಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಸಂತೋಷ ಕೂಡ ಮೂಡಿದ್ದು ನಿಜಕ್ಕೂ ಕೂಡ ಅಪ್ಪು ಇನ್ನು ನಮ್ಮ ಜೊತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಮತ್ತೆ ಮೂಡಿಸಿತ್ತು.

Leave a Comment

error: Content is protected !!