Ashwini Puneeth: ಅಪ್ಪು ಹಾಗು ಅಶ್ವಿನಿ ಅವರ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ಗೊತ್ತಾ? ನೋಡಿ ಈ ಸಂಭ್ರಮ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneethrajkumar) ಇಬ್ಬರು ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಪ್ರೀತಿಸಿ ಮನೆಯವರ ಒಪ್ಪಿಗೆ ಮೇಲೆ ಮದುವೆಯಾಗಿ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿ ಇದ್ದಂತೆ ಇದ್ದವರು. ಆದರೆ ಇಂದು ಅವರು ನಮ್ಮನ್ನು ಅಗಲಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಪ್ರತಿನಿತ್ಯ ಬೇಸರ ಪಡುವಂತಹ ವಿಚಾರವಾಗಿದೆ.

ನಾವು ಎಷ್ಟೇ ಅತ್ತು ಕರೆದರೂ ವಿಧಿಯನ್ನು ಬದಲಾಯಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಪುನೀತ್ ರಾಜಕುಮಾರ್(Puneeth Rajkumar) ಅವರು ಅಗಲಿರುವ ದುಃಖ ಸೂರ್ಯ ಚಂದ್ರರು ಇರುವ ತನಕವೂ ಕೂಡ ಕನ್ನಡ ಚಿತ್ರರಂಗ ಕಾಣುತ್ತದೆ. ಅವರನ್ನು ಕಳೆದುಕೊಂಡಿರುವ ಸ್ಥಾನವನ್ನು ಕನ್ನಡ ಚಿತ್ರರಂಗ ಯಾರಿಂದಲೂ ಕೂಡ ಪೂರ್ತಿಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಷ್ಟು ಪ್ರತಿಭಾನ್ವಿತ ಹಾಗೂ ಒಳ್ಳೆಯ ಮನಸ್ಸಿನ ಆಜಾತಶತ್ರು ವ್ಯಕ್ತಿತ್ವ ಅವರದಾಗಿತ್ತು.

ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ರವರು ಸದಾಶಿವ ನಗರದಲ್ಲಿ ತಮ್ಮ ನಿವಾಸವನ್ನು ಹೊಂದಿದ್ದಾರೆ. ಈ ಮನೆಯ ಗ್ರಹಪ್ರವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ತೆಗೆದಿರುವಂತಹ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೀವು ಕೂಡ ಗಮನಿಸಬಹುದಾಗಿದ್ದು ಅದರ ಕೆಲವೊಂದು ಫೋಟೋ ತುಣುಕುಗಳು ಕೂಡ ನಿಮ್ಮ ಕಣ್ಣ ಮುಂದೆ ಇದೆ.

ನಮ್ಮೆಲ್ಲರ ನೆಚ್ಚಿನ ಅಪ್ಪು(Power Star Appu) ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರ ಜೊತೆಗೆ ಹೊಸ ಮನೆಯ ಗ್ರಹಪ್ರವೇಶದ ಕಾರ್ಯಗಳಲ್ಲಿ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವುದು ಕೂಡ ಈ ವಿಡಿಯೋದಲ್ಲಿ ಕಂಡು ಬಂದಿದ್ದು ಅವರ ಜೊತೆಗೆ ಗೀತಕ್ಕ ಶಿವಣ್ಣ(Geethakka & Shivanna) ಸೇರಿದಂತೆ ಕುಟುಂಬಸ್ಥರು ಎಲ್ಲರೂ ಕೂಡ ಹಾಜರಿದ್ದರು. ಇಂತಹ ಅಮೂಲ್ಯ ನೆನಪುಗಳನ್ನು ಮತ್ತೆ ಮರುಕಳಿಸುವಂತಹ ಕ್ಷಣಗಳು ಕಂಡು ಬಂದಾಗ ಕಣ್ಣಿನ ಅಂಚಿನಲ್ಲಿ ಹನಿ ನೀರುಗಳು ತೇವ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!