Puneeth Rajkumar ಅಪ್ಪು ತಮ್ಮ ಹುಟ್ಟಿದ ಹಬ್ಬಕ್ಕೆ ಪ್ರತಿ ವರ್ಷ ಏನು ಮಾಡುತ್ತಿದ್ದರು ಗೊತ್ತಾ? ಅದಕ್ಕೆ ಅವರಿಗೆ ಕರ್ನಾಟಕ ರತ್ನ ಸಿಕ್ಕಿರೋದು.

Power Star Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾ ಪರದೆಯ (Screen) ಮೇಲೆ ಕನ್ನಡ ಚಿತ್ರರಂಗಕ್ಕೆ ನೀಡಿದಷ್ಟೇ ಕೊಡುಗೆಯನ್ನು ತಮ್ಮ ಸ್ವಂತ ದುಡ್ಡಿನಲ್ಲಿ ಜನಪರ ಸೇವೆಗಳನ್ನು ಮಾಡುವ ಮೂಲಕ ಸಮಾಜಮುಖಿಯಾಗಿ(Social Welfare) ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ತಾವು ಬದುಕಿರುವವರೆಗೂ ಕೂಡ ತಾವು ಮಾಡಿರುವಂತಹ ಜನಪರ ಸೇವೆಗಳನ್ನು ಒಮ್ಮೆ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರಚಾರಕ್ಕಾಗಿ ಎಲ್ಲಿಯೂ ಕೂಡ ಬಹಿರಂಗ ಮಾಡಲಿಲ್ಲ. ಇದು ಅವರ ದೊಡ್ಡ ಮನಸ್ಸಿನ ಗುಣವನ್ನು ಸಾಬೀತುಪಡಿಸುತ್ತದೆ ಎಂಬುದಾಗಿ ಹೇಳಬಹುದಾಗಿದೆ.

ಇದಕ್ಕಾಗಿಯೇ ಕರ್ನಾಟಕ ರಾಜ್ಯ ಸರ್ಕಾರ ಅವರ ಸಿನಿಮಾ ಹಾಗೂ ಸಮಾಜಮುಖಿ ಕೊಡುಗೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿ ಆಗಿರುವ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ನೀಡಿದೆ. ಕೇವಲ ಇಷ್ಟು ಮಾತ್ರವಲ್ಲದೆ ಮರಣೋತ್ತರವಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಕರ್ನಾಟಕದ ಹಲವಾರು ಸಂಘ ಸಂಸ್ಥೆಗಳು ಪುನೀತ್ ರಾಜಕುಮಾರ್ ಅವರಿಗೆ ಪ್ರಧಾನವನ್ನು ಮಾಡಿದೆ.

puneeth Rajkumar with brother Shivanna

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜನ್ಮದಿನಾಚರಣೆಯನ್ನು ಲಕ್ಷಾಂತರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ನಿವಾಸದ ಮುಂಭಾಗದಲ್ಲಿ ಪ್ರತಿವರ್ಷ ಆಚರಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಸೇರಿದಂತೆ ಹಲವಾರು ಕಾರ್ಯಗಳನ್ನು ಅವರು ಹಾಗೂ ಅವರ ಅಭಿಮಾನಿ ಸಂಘಗಳು ರಾಜ್ಯದಾದ್ಯಂತ ಹಮ್ಮಿಕೊಳ್ಳುತ್ತಿದ್ದವು. ಆದರೆ ಖುದ್ದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜನ್ಮದಿನಾಚರಣೆಯ(Birthday Celebration) ದಿನದಂದು ಏನು ಮಾಡುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ..ತೂಗುದೀಪ್ ಶ್ರೀನಿವಾಸ್ ಅವರು ತಮ್ಮ ಮಗ ದರ್ಶನ್ ಅವರಿಗೆ ಬಿಟ್ಟು ಹೋದ ಕೊನೆಯ ಉಡುಗೊರೆ ಯಾವುದು ಗೊತ್ತಾ?

ಹೌದು ಗೆಳೆಯರೇ ಪ್ರತಿ ವರ್ಷ ತಮ್ಮ ಜನ್ಮದಿನದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 8000ಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪೂರ್ಣ ಖರ್ಚನ್ನು ಪ್ರತಿ ವರ್ಷ ಅಪ್ಪು ಅವರೇ ವಹಿಸಿಕೊಳ್ಳುತ್ತಿದ್ದರಂತೆ. ಇದನ್ನು ಅವರ ಆಪ್ತ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಸಂತೋಷ್ ಆನಂದ್ ರಾಮ್ ಅವರೇ ಬಹಿರಂಗಪಡಿಸಿದ್ದಾರೆ. ಇಷ್ಟೊಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದ ಅಪ್ಪು ಅವರನ್ನು ನಾವು ಅತ್ಯಂತ ಕಡಿಮೆ ಸಮಯಕ್ಕೆ ಕಳೆದುಕೊಂಡಿದ್ದೇವೆ ಎನ್ನುವುದನ್ನು ನೆನೆಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು(Opinion) ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!