ಹದ್ದು ಮೀರಿದ ಅಪ್ಪು ಅಭಿಮಾನಿಗಳು ದರ್ಶನ್ ಅವರಿಗೆ ನೀಡಿದ ವಾರ್ನಿಂಗ್ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ!

Puneeth fans warning to D Boss ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಜಗಳ ಹೊಸಪೇಟೆಯಲ್ಲಿ ಯಾರು ಎಣಿಸಲಾಗದಂತಹ ಘಟನೆ ನಡೆಯುವುದರೊಂದಿಗೆ ದೊಡ್ಡ ರೂಪವನ್ನು ಪಡೆದುಕೊಳ್ಳುತ್ತದೆ. ಇದು ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ ಆಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನಾವು ಕಾಲರ್ ಎತ್ಕೊಂಡೆ ಓಡಾಡ್ತಿವಿ ಉರುಸ್ತೀವಿ ಎನ್ನುವುದಾಗಿ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಈ ವಿಚಾರವನ್ನು ಇನ್ನಷ್ಟು ದೊಡ್ಡದು ಮಾಡುತ್ತಾರೆ.

ಹುಬ್ಬಳ್ಳಿಯಲ್ಲಿ (Hubballi Fans) ಅಭಿಮಾನಿಗಳ ನಡುವೆ ಸಾಮರಸ್ಯವನ್ನು ಹಾಳು ಮಾಡುವಂತಹ ಕಾರ್ಯವನ್ನು ಸ್ವತಹ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಮಾಡುತ್ತಿದ್ದಾರೆ ಎಂಬುದಾಗಿ ಅಣ್ಣಾವ್ರ ಅಭಿಮಾನಿಗಳು ಶಿವಣ್ಣ ಮತ್ತು ರಾಘಣ್ಣ ಸೇರಿದಂತೆ ಅಪ್ಪು ಅಭಿಮಾನಿಗಳು (Film chamber) ಫಿಲಂ ಚೇಂಬರ್ ನಲ್ಲಿ ಬಂದು ದರ್ಶನ್ ಅವರ ವಿರುದ್ಧ ದೂರನ್ನು ದಾಖಲಿಸುತ್ತಾರೆ. ರಾಜವಂಶ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿರುದ್ಧವಾಗಿ (Social Media) ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿಮಾನಿಗಳು ಅವಹೇಳನಕಾರಿಯಾಗಿ (Post) ಪೋಸ್ಟ್ ಮಾಡುತ್ತಿದ್ದಾರೆ ಎಂಬುದಾಗಿ ರಾಜವಂಶದ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಹೀಗೆ ಮಾಡುತ್ತಿರುವುದು ನಿಜವಾಗಿಯೂ ಸರಿಯಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ತಮ್ಮ ಅಭಿಮಾನಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಇದರ ಪರಿಣಾಮ ಮುಂದೆ ಚೆನ್ನಾಗಿರುವುದಿಲ್ಲ ಎಂಬುದಾಗಿ (Rajavamsha)ರಾಜವಂಶದ ಅಭಿಮಾನಿಗಳು ಫಿಲಂ ಚೇಂಬರ್ ಮುಂದೆ ನಿಂತು ಗುಡುಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ (kranti movie) ಇದೇ ಜನವರಿ 26ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಇದನೊಮ್ಮೆ ಓದಿ..ರಾಜವಂಶದ ಅಭಿಮಾನಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಡಿ ಬಾಸ್ ಅಭಿಮಾನಿಗಳು, ಹೇಳಿದ್ದೇನು?

ಹೀಗಾಗಿಯೇ ಫಿಲಂ ಚೇಂಬರ್ ಮುಂದೆ ರಾಜವಂಶದ ಅಭಿಮಾನಿಗಳು ಇದೇ ರೀತಿ ಡಿ ಬಾಸ್ (D Boss) ಅಭಿಮಾನಿಗಳು ಅಪ್ಪು ಅವರ ಕುರಿತಂತೆ ಇಲ್ಲ ಸಲ್ಲದ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಹಾಗೂ ಇದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹೇಳಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮವನ್ನು ದರ್ಶನ್ ಅವರು ಅನುಭವಿಸಬೇಕಾಗುತ್ತದೆ ಎಂಬುದಾಗಿ ವಾರ್ನಿಂಗ್ ನೀಡಿದ್ದಾರೆ. ಇದು ಹೀಗೆ ಮುಂದುವರೆದರೆ ಜನವರಿ 26ರಂದು ಇಡೀ ಬೆಂಗಳೂರನ್ನೇ ಬಂದ್ ಮಾಡಿಸಿ ಕ್ರಾಂತಿ ಸಿನಿಮಾ ಪ್ರದರ್ಶನವಾಗದಂತೆ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಅಹಿತಕರವಾದದ್ದು ಇದನ್ನು ಆದಷ್ಟು ಬೇಗ ಎರಡು ಕಡೆ ಅವರು ಕೂತು ರಾಜಿಸಂಧಾನದ ಮೂಲಕ ಪರಿಹರಿಸಿಕೊಳ್ಳಬೇಕು.

Leave a Comment

error: Content is protected !!