ಅಶ್ವಿನಿ ಗೆ ಹೇಳದೆ ಹೊಸ ಮನೆ ಖರೀದಿಸಿ ಸರ್ಪ್ರೈಸ್ ಕೊಟ್ಟಿದ್ದ ಅಪ್ಪು. ವೈರಲ್ ಆಯ್ತು ಕ್ಯೂಟ್ ವಿಡಿಯೋ!

‘ವಿಧಿಯ ಆಟ ಬಲ್ಲವರಾರು?’ ಎಂಬಂತೆ ವಿಧಿಯು ಪುನೀತ್ ರಾಜಕುಮಾರ್ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಪುನೀತ್ ಅವರ ಮುದ್ದಿನ ಮಡದಿ, ಮಕ್ಕಳು, ಕುಟುಂಬಸ್ಥರು, ಸಂಬಂಧಿಕರು, ಜೊತೆಗಾರರು, ಅಭಿಮಾನಿಗಳು ಎಲ್ಲರನ್ನು ನೋವಿನಲ್ಲಿ ಬೇಯುವಂತೆ ಮಾಡಿದೆ. ಇಹಲೋಕದಲ್ಲಿ ಪುನೀತ್ ಅವರ ನೆನಪುಗಳೊಂದಿಗೆ ಹೆಜ್ಜೆ ಇಡುವ ಪರಿಸ್ಥಿತಿಯು ಬಂದೊದಗಿದೆ. ‘ಪುನೀತ್ ಅವರು ನಮ್ಮೊಂದಿಗಿರಬೇಕಿತ್ತು’ ಎಂಬುದು ಎಲ್ಲರ ಆಶಯವಾಗಿದೆ.

2022 ಡಿಸೆಂಬರ್ ತಿಂಗಳಿಗೆ ಪುನೀತ್ ಅವರು ಅಶ್ವಿನಿ ಅವರನ್ನು ವಿವಾಹವಾಗಿ 23 ವರ್ಷಗಳು ಉರುಳುತ್ತಿತ್ತು. ಆದರೆ 22ನೇ ವರ್ಷದ ವಿವಾಹ ಸಂಭ್ರಮಕ್ಕೂ ಮೊದಲೇ ಪುನೀತ್ ಅವರು ಚಿರ ನಿದ್ರೆಗೆ ಜಾರಿದ್ದರು. 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನವನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಪುನೀತ್ ಅವರನ್ನು ನೆನೆಸಿಕೊಂಡು ‘ನನ್ನೊಂದಿಗಿಲ್ಲವಲ್ಲ’ ಎಂಬ ಬೇಸರದಿಂದ ಮಂಕಾಗಿ ಕಳೆದಿದ್ದರು.

ಡಿಸೆಂಬರ್ ಒಂದು 1999 ರಲ್ಲಿ ಪುನೀತ್ ಹಾಗೂ ಅಶ್ವಿನಿ ಅವರ ವಿವಾಹವು ಬೆಂಗಳೂರಿನ ರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಕುಟುಂಬದವರು, ಸ್ನೇಹಿತರು, ಸಂಬಂಧಿಗಳ ಸಮ್ಮುಖದಲ್ಲಿ ನೆರವೇರಿತ್ತು. ಅಶ್ವಿನಿ ಅವರನ್ನು ಪುನೀತ್ ಅವರು ಮೊದಲು ಜಿಮ್ನಲ್ಲಿ ಭೇಟಿಯಾಗಿ, ಪರಿಚಯವಾಗಿ ನಂತರ ಸ್ನೇಹವು ಚಿಗುರೊಡೆದು, ಪ್ರೀತಿಯಾಗಿ ಬೆಳೆದು, ಪುನೀತವರೇ ಮೊದಲು ಅಶ್ವಿನಿಯವರಿಗೆ ಪ್ರಪೋಸ್ ಮಾಡುವಂತಾಯ್ತು. ಪುನೀತ್ ಅವರ ಪ್ರೇಮವನ್ನು ಪ್ರೀತಿಯಿಂದಲೇ ಒಪ್ಪಿದ ಅಶ್ವಿನಿಯವರು ವಿವಾಹಕ್ಕೂ ಒಪ್ಪಿಗೆ ಸೂಚಿಸಿದರು. ತಮ್ಮ ಎರಡು ಕುಟುಂಬಗಳ ಒಪ್ಪಿಗೆಯನ್ನು ಪಡೆದೆ ವಿವಾಹವಾದರು.

ಸಂಸಾರಿಕ ಜೀವನದಲ್ಲಿ ನೆಮ್ಮದಿಯನ್ನು ಕಂಡಿದ್ದ ಇವರಿಬ್ಬರು ಎಂದಿಗೂ ದೊಡ್ಡ ದೊಡ್ಡ ಜಗಳ ಮಾಡಿಕೊಂಡಿಲ್ಲ. ದೃತಿ ಹಾಗೂ ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಖುಷಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಹೃದಯಘಾತದಿಂದ ಅಪ್ಪು ಅವರು ಅಕಾಲಿಕ ಮರಣ ಹೊಂದಿದ್ದು, ಇವರ ನೆಮ್ಮದಿಯ ಜೀವನಕ್ಕೆ ಎಂದು ಮುಗಿಯದ ನೋವು ನೀಡಿದೆ. ಚಿತ್ರರಂಗ ಕಲಾವಿದರ, ಸಿನಿಪ್ರಿಯರ, ಅಭಿಮಾನಿಗಳ, ಜೊತೆಗಾರರ ಹೃದಯ ಹಿಂಡಿದೆ. ಎಲ್ಲರೂ ಅಪ್ಪು ಅವರ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.

ಇದೀಗ ಅಪ್ಪು ಅವರು ತಮ್ಮ ಸ್ನೇಹಿತರೊಬ್ಬರ ಗೃಹಪ್ರವೇಶಕ್ಕೆ ಪತ್ನಿ ಅಶ್ವಿನಿ ಅವರೊಂದಿಗೆ ಜೊತೆಗೂಡಿ ಹೋಗಿ, ಹೊಸ ಮನೆಯನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದೆ. ಅಶ್ವಿನಿ ಅವರಿಗಿಂತ ಮುಂದೆ ತಾನೇ ಹೋಗಿ ಎಲ್ಲಾ ಕೊಠಡಿಗಳನ್ನು ಪ್ರವೇಶಿಸಿ, ತಮ್ಮ ಸ್ನೇಹಿತರ ಇಡೀ ಮನೆಯನ್ನು ಸುತ್ತಾಡಿ, ನೆರೆದಿರುವ ಜನರೊಂದಿಗೆ ನಗುತ್ತಾ ಬೆರೆತು ಮಾತನಾಡಿದ್ದ ಪುನೀತ್ ಅವರ ನೆನಪಿನ ಕ್ಯೂಟ್ ದೃಶ್ಯವು ವೈರಲ್ ಆಗಿದೆ.

Leave a Comment

error: Content is protected !!